ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಸುತ್ತಿಗೆ ಜೊಕೊವಿಚ್‌

ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ: ಫೆಡರರ್‌, ಶರಪೋವಾ, ಕೆರ್ಬರ್‌ಗೆ ಜಯ
Last Updated 29 ಆಗಸ್ಟ್ 2018, 16:10 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಎಎಫ್‌ಪಿ): ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅಮೆರಿಕದ ಓಪನ್‌ ಟೆನಿಸ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಶುಭಾರಂಭ ಮಾಡಿದ್ದಾರೆ.

ಮಂಗಳವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ನೊವಾಕ್‌, 6–3, 3–6, 6–2ರಿಂದ ಹಂಗರಿಯ ಮಾರ್ಟೊನ್‌ ಫುಕ್ಸೊವಿಕ್ಸ್‌ ಅವರನ್ನು ಮಣಿಸಿದರು. ಇದರೊಂದಿಗೆ ಅವರು ಮುಂದಿನ ಸುತ್ತು ಪ್ರವೇಶಿಸಿದರು.

ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಅವರು ಮೊದಲ ಸುತ್ತಿನ ಪಂದ್ಯದಲ್ಲಿ 6–2, 6–2, 6–4ರಿಂದ ಜಪಾನ್‌ ಯೊಶಿಹಿಟೊ ನಿಶಿಯೊಕಾ ಅವರ ಎದುರು ಗೆದ್ದರು. ಎರಡನೇ ಸುತ್ತಿನ ಪಂದ್ಯದಲ್ಲಿ ಅವರು ಫ್ರಾನ್ಸ್‌ನ ಬೆನೊ ಪೈರ್‌ ವಿರುದ್ಧ ಸೆಣಸಲಿದ್ದಾರೆ.

ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌, 6–2, 6–1, 6–2ರಿಂದ ಕೆನಡಾದ ಪೀಟರ್ಸ್‌ ಪೋಲಾನ್ಸ್ಕಿ ಅವರನ್ನು ಪರಾಭವಗೊಳಿಸಿದರು. ಆಸ್ಟ್ರೇಲಿಯಾದ ನಿಕ್‌ ಕಿರ್ಗಿಯೊಸ್‌, 7–5, 2–6, 6–4, 6–2ರಿಂದ ಮೊಲ್ಡೊವಿಯಾದ ರಡು ಅಲ್ಬೊಟ್‌ ಅವರನ್ನು ಮಣಿಸಿದರು.

ಮರಿಯಾ ಶರಪೋವಾಗೆ ಜಯ: ರಷ್ಯಾದ ಮರಿಯಾ ಶರಪೋವಾ ಮೊದಲ ಸುತ್ತಿನ ಹಣಾಹಣಿಯಲ್ಲಿ ಗೆಲುವು ಸಾಧಿಸಿದ್ದಾರೆ.

ರಷ್ಯಾದ ಆಟಗಾರ್ತಿಯು ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ 6–2, 7–6ರಿಂದ ಸ್ವಿಟ್ಜರ್‌ಲೆಂಡ್‌ನ ಪ್ಯಾಟಿ ಸ್ಕ್ನೈಡರ್‌ ಅವರನ್ನು ಸೋಲಿಸಿದರು.

ಜರ್ಮನಿಯ ಏಂಜೆಲಿಕ್‌ ಕೆರ್ಬರ್‌, 7–6, 6–3ರಿಂದ ರಷ್ಯಾದ ಮಾರ್ಗರಿಟಾ ಗ್ಯಾಸ್ಪರಿನ್‌ ಎದುರು ಗೆದ್ದರು.

ಯೂಕಿ ಬಾಂಬ್ರಿಗೆ ನಿರಾಸೆ: ಭಾರತದ ಯೂಕಿ ಬಾಂಬ್ರಿ ಅವರು ಮೊದಲ ಸುತ್ತಿನ ಪಂದ್ಯದಲ್ಲೇ ನಿರಾಸೆ ಅನುಭವಿಸಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 96ನೇ ಸ್ಥಾನದಲ್ಲಿರುವ ಯೂಕಿ, ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ 6–7, 5–7ರಿಂದ ಫ್ರಾನ್ಸ್‌ನ ಪೀರ್‌ ಹ್ಯೂಸ್‌ ಎದುರು ಮಣಿದರು. ಪಂದ್ಯವು ಸುಮಾರು ಎರಡೂವರೆ ಗಂಟೆಗಳ ಕಾಲ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT