ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಸ್‌ ಓಪನ್‌: ಹಿಂದೆ ಸರಿದ ಜೊಕೊವಿಚ್‌

Last Updated 25 ಆಗಸ್ಟ್ 2022, 15:42 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ : ಸರ್ಬಿಯದ ನೊವಾಕ್‌ ಜೊಕೊವಿಚ್‌ ಅವರು ಸೋಮವಾರ ಆರಂಭವಾಗುವ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಟೂರ್ನಿಯ ‘ಡ್ರಾ’ ನಿರ್ಧರಿಸಲು ಕೆಲವೇ ಗಂಟೆಗಳಿರುವಾಗ ಅವರು ‘ಟ್ವಿಟರ್’ ಮೂಲಕ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

ಕೋವಿಡ್‌ ಲಸಿಕೆ ಪಡೆಯದೇ ಇರುವುದರಿಂದ ಜೊಕೊವಿಚ್‌ ಅವರು ಟೂರ್ನಿಯಿಂದ ಹಿಂದೆ ಸರಿಯುವುದು ಖಚಿತವಾಗಿತ್ತು. ಕೋವಿಡ್‌ ಲಸಿಕೆ ಪಡೆಯದ ವಿದೇಶಿಯರಿಗೆ ಅಮೆರಿಕ ಪ್ರವೇಶಿಸುವುದಕ್ಕೆ ಈಗಲೂ ನಿರ್ಬಂಧವಿದೆ. ಈ ನಿಯಮದಲ್ಲಿ ಸಡಿಲಿಕೆ ಆಗದ ಕಾರಣ ಜೊಕೊವಿಚ್‌, ಹಿಂದೆ ಸರಿದಿದ್ದಾರೆ.

‘ದುಃಖದ ವಿಚಾರವೆಂದರೆ, ಯುಎಸ್‌ ಓಪನ್‌ನಲ್ಲಿ ಪಾಲ್ಗೊಳ್ಳಲು ನಾನು ಈ ಬಾರಿ ನ್ಯೂಯಾರ್ಕ್‌ಗೆ ಪ್ರಯಾಣಿಸುತ್ತಿಲ್ಲ. ಅವಕಾಶ ಸಿಕ್ಕಾಗ ಮುಂದೆ ಭಾಗವಹಿಸುತ್ತೇನೆ’ ಎಂದು ಅವರು ‘ಟ್ವೀಟ್‌’ ಮಾಡಿದ್ದಾರೆ.

35 ವರ್ಷದ ಜೊಕೊವಿಚ್‌ ಒಟ್ಟು 21 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಯುಎಸ್‌ ಓಪನ್‌ನಲ್ಲಿ ಅವರು 2011, 2015 ಮತ್ತು 2018 ರಲ್ಲಿ ಚಾಂಪಿಯನ್‌ ಅಗಿದ್ದರು.

ಜೊಕೊವಿಚ್‌ ಅವರು ಕೋವಿಡ್‌ ಲಸಿಕೆ ಪಡೆಯದ ಕಾರಣ ಈ ಋತುವಿನ ಆರಂಭದಲ್ಲಿ ಆಸ್ಟ್ರೇಲಿಯಾ ಓಪನ್ ಗ್ರ್ಯಾನ್‌ಸ್ಲಾಮ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನೂ ಕಳೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT