ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರಿನಂಕಣದಲ್ಲಿ ಟೆನಿಸ್‌ ಹಬ್ಬ....

Last Updated 1 ಜುಲೈ 2018, 20:23 IST
ಅಕ್ಷರ ಗಾತ್ರ

ವಿಂಬಲ್ಡನ್‌ ಚಾಂಪಿಯನ್‌ಷಿಪ್‌ಗೆ ವಿಶಿಷ್ಠ ಪರಂಪರೆ ಇದೆ. ವಿಶ್ವದ ಅತ್ಯಂತ ಹಳೆಯ ಟೆನಿಸ್‌ ಟೂರ್ನಿ ಎಂಬ ಹೆಗ್ಗಳಿಕೆಯನ್ನು ಇದು ಹೊಂದಿದೆ. 1877ರಲ್ಲಿ ಶುರುವಾದ ಈ ಟೂರ್ನಿಯ ಪಂದ್ಯಗಳು ಹುಲ್ಲಿನ ಅಂಕಣದಲ್ಲಿ ನಡೆಯುತ್ತವೆ. ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಅತಿ ಹೆಚ್ಚು ಟ್ರೋಫಿ (9) ಗೆದ್ದ ಹಿರಿಮೆ ಅಮೆರಿಕದ ಮಾರ್ಟಿನಾ ನವ್ರಾಟಿಲೊವಾ ಅವರದ್ದು.

ಈ ಬಾರಿ 132ನೇ ಆವೃತ್ತಿಯ ಟೂರ್ನಿ ನಡೆಯುತ್ತಿದ್ದು ಫೆಡರರ್‌, ಸ್ಪೇನ್‌ನ ರಫೆಲ್‌ ನಡಾಲ್‌, ಸಿಮೊನಾ ಹಲೆಪ್‌, ಸಹೋದರಿಯರಾದ ಸೆರೆನಾ ಮತ್ತು ವೀನಸ್‌ ವಿಲಿಯಮ್ಸ್‌ ಅವರು ಪ್ರಶಸ್ತಿಯತ್ತ ಚಿತ್ತ ನೆಟ್ಟಿದ್ದಾರೆ.

**********

141 ವರ್ಷಗಳ ಹಿಂದೆ ಟೂರ್ನಿ ಆರಂಭಿಸಲಾಯಿತು.

ಅವಧಿ: ಜುಲೈ 2ರಿಂದ ಜುಲೈ 15

***

ಯಾವ ಹಂತ ಪ್ರವೇಶಿಸಿದರೆ ಎಷ್ಟು ಪಾಯಿಂಟ್ಸ್‌ ಸಿಗಲಿದೆ

ವಿಭಾಗ;ಚಾಂಪಿಯನ್‌;ಫೈನಲ್‌;ಸೆಮಿಫೈನಲ್‌;ಕ್ವಾರ್ಟರ್‌ ಫೈನಲ್‌;ಪ್ರೀ ಕ್ವಾರ್ಟರ್‌;32ನೇ ಸುತ್ತು;64ನೇ ಸುತ್ತು;128ನೇ ಸುತ್ತು

ಪುರುಷರ ಸಿಂಗಲ್ಸ್‌;2000;1200;720;360;180;90;45;10

ಪುರುಷರ ಡಬಲ್ಸ್‌;2000

ಮಹಿಳೆಯರ ಸಿಂಗಲ್ಸ್‌;2000;1300;780;430;240;130;70;10

ಮಹಿಳೆಯರ ಡಬಲ್ಸ್‌;2000 :10

**********

ವಿಂಬಲ್ಡನ್‌ನಲ್ಲಿ ನಡೆದ ದೀರ್ಘಾವಧಿಯ ಪಂದ್ಯ

ವರ್ಷ: 2010

ಅವಧಿ: 3 ದಿನ

ಜಾನ್‌ ಇಸ್ನರ್‌ (ಅಮೆರಿಕ);ನಿಕೊಲಸ್‌ ಮಹುತ್‌ (ಫ್ರಾನ್ಸ್‌)

6–4

3–6

6–7

7–6

70–68

ಪಂದ್ಯದ ಸಮಯ: 11 ಗಂಟೆ 5 ನಿಮಿಷ

ಅಂತಿಮ ಸೆಟ್‌ನ ಸಮಯ: 8 ಗಂಟೆ 11 ನಿಮಿಷ

************

ಟೂರ್ನಿಯಲ್ಲಿ ಇದುವರೆಗೆ ಅತಿ ಹೆಚ್ಚು ಏಸ್‌ಗಳನ್ನು ಸಿಡಿಸಿದವರು

ಪುರುಷರು

ಆಟಗಾರ: ಗೊರನ್‌ ಇವಾನಿಸೆವಿಕ್‌

ದೇಶ: ಕ್ರೊವೇಷ್ಯಾ

ವರ್ಷ: 2001

ಏಸ್‌: 212

***

ಮಹಿಳೆಯರು

ಸೆರೆನಾ ವಿಲಿಯಮ್ಸ್‌

ದೇಶ: ಅಮೆರಿಕ

ವರ್ಷ: 2012

ಏಸ್‌: 102

****

250 ಟೂರ್ನಿಯಲ್ಲಿ ಕಾರ್ಯನಿರ್ವಹಿಸುವ ಬಾಲ್‌ ಬಾಯ್ಸ್‌ ಮತ್ತು ಬಾಲ್‌ ಗರ್ಲ್ಸ್‌

1902ರಿಂದ ಸ್ಲೆಜೆಂಗರ್‌ ಕಂಪನಿಯು ಟೂರ್ನಿಗೆ ಚೆಂಡುಗಳನ್ನು ಪೂರೈಸುತ್ತಿದೆ.

1986 ಟೂರ್ನಿಯಲ್ಲಿ ಹಳದಿ ಚೆಂಡು ಬಳಕೆಗೆ ಬಂದಿದ್ದು

54,250 ಟೂರ್ನಿಯೊಂದರಲ್ಲಿ ಬಳಸಲಾಗುವ ಅಂದಾಜು ಚೆಂಡುಗಳು

***

ಈ ಬಾರಿ ಫೈನಲ್‌ನಲ್ಲಿ ಟಾಸ್‌ ಹಾಕುವವರು ಯಾರು

ಮಹಿಳೆಯರ ಸಿಂಗಲ್ಸ್‌

ಟಿಯಾ ಕಾರ್ಟರ್‌

ವಯಸ್ಸು: 11

**

ಪುರುಷರ ಸಿಂಗಲ್ಸ್‌

ಜೊಶುವಾ ಬಿಲ್ಸ್‌

ವಯಸ್ಸು: 11

*******

ಫೈನಲ್‌ ನಡೆಯುವ ಅಂಗಳ

ಸೆಂಟರ್‌ ಕೋರ್ಟ್‌

ಆಸನ ಸಾಮರ್ಥ್ಯ: 14,979

***

18 ಅಂಗಳಗಳಲ್ಲಿ ಪಂದ್ಯಗಳು ನಡೆಯುತ್ತವೆ.

20 ಅಭ್ಯಾಸಕ್ಕೆ ಬಳಕೆಯಾಗುವ ಅಂಗಳಗಳು.

****

ಟೂರ್ನಿಯಲ್ಲಿ ಅತಿ ವೇಗದ ಸರ್ವ್‌ ಸಿಡಿಸಿದವರು

ಪುರುಷರು

ಟೇಲರ್‌ ಡೆಂಟ್‌

ಅಮೆರಿಕ

ವರ್ಷ: 2010

ಸರ್ವ್‌ ವೇಗ: 148 ಮೀಟರ್ಸ್‌ (ಪ್ರತಿ ಗಂಟೆಗೆ)

***

ಮಹಿಳೆಯರು

ವೀನಸ್‌ ವಿಲಿಯಮ್ಸ್‌

ಅಮೆರಿಕ

ವರ್ಷ: 2008

ಸರ್ವ್‌ ವೇಗ: 129 ಮೀಟರ್ಸ್‌ (ಪ್ರತಿ ಗಂಟೆಗೆ)

****

ಯಾವ ವಿಭಾಗದಲ್ಲಿ ಎಷ್ಟು ಮಂದಿ ಆಡುತ್ತಾರೆ

ಪುರುಷರ ಸಿಂಗಲ್ಸ್‌ 128

ಮಹಿಳೆಯರ ಸಿಂಗಲ್ಸ್‌ 128

ಪುರುಷರ ಡಬಲ್ಸ್‌ 64

ಮಹಿಳೆಯರ ಡಬಲ್ಸ್‌ 64

ಮಿಶ್ರ ಡಬಲ್ಸ್‌ 48

********

ಪ್ರಮುಖ ಆಟಗಾರರು

ಪುರುಷರ ಸಿಂಗಲ್ಸ್‌

ರೋಜರ್‌ ಫೆಡರರ್‌

ಸ್ವಿಟ್ಜರ್‌ಲೆಂಡ್‌ನ ಫೆಡರರ್‌ ಅವರು ವಿಂಬಲ್ಡನ್‌ನಲ್ಲಿ 8 ಬಾರಿ ಪ್ರಶಸ್ತಿ ಗೆದ್ದಿದ್ದಾರೆ.

2018ರ ಸಾಧನೆ

ಗೆಲುವು 25

ಸೋಲು: 3

ಪ್ರಶಸ್ತಿ: 3

ವೃತ್ತಿಬದುಕಿನಲ್ಲಿ ಗೆದ್ದ ಪ್ರಶಸ್ತಿ: 98

ಗ್ರ್ಯಾನ್‌ಸ್ಲಾಮ್‌ ಕಿರೀಟ: 20

***

ರಫೆಲ್‌ ನಡಾಲ್‌

‘ಮಣ್ಣಿನಂಕಣದ ರಾಜ’ ನಡಾಲ್‌ ಈ ವರ್ಷ ಅಮೋಘ ಆಟದ ಮೂಲಕ ಗಮನ ಸೆಳೆದಿದ್ದಾರೆ. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಇವರು ಅಗ್ರಸ್ಥಾನ ಹೊಂದಿದ್ದಾರೆ.

2018ರ ಸಾಧನೆ

ಗೆಲುವು: 30

ಸೋಲು:2

ಪ್ರಶಸ್ತಿ: 4

ವೃತ್ತಿಬದುಕಿನಲ್ಲಿ ಗೆದ್ದ ಪ್ರಶಸ್ತಿಗಳು: 79

ಗ್ರ್ಯಾನ್‌ಸ್ಲಾಮ್‌ ಕಿರೀಟ: 17

*********

ಅಲೆಕ್ಸಾಂಡರ್‌ ಜ್ವೆರೆವ್‌

ಜರ್ಮನಿಯ ಪ್ರತಿಭಾನ್ವಿತ ಆಟಗಾರ ಜ್ವೆರೆವ್‌. ಇವರು ಗ್ರ್ಯಾನ್‌ಸ್ಲಾಮ್‌ನಲ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ.

2018ರ ಸಾಧನೆ

ಗೆಲುವು:34

ಸೋಲು:10

ಪ್ರಶಸ್ತಿ:2

ವೃತ್ತಿಬದುಕಿನಲ್ಲಿ ಗೆದ್ದ ಟ್ರೋಫಿಗಳು: 8

***

ಮರಿನ್‌ ಸಿಲಿಕ್‌

ಕ್ರೊವೇಷ್ಯಾದ ಮರಿನ್‌ ಸಿಲಿಕ್‌ ಕೂಡಾ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರಲ್ಲಿ ಒಬ್ಬರೆನಿಸಿದ್ದಾರೆ.

2018ರ ಸಾಧನೆ

ಗೆಲುವು: 27

ಸೋಲು: 9

ಪ್ರಶಸ್ತಿ: 1

ವೃತ್ತಿಬದುಕಿನಲ್ಲಿ ಗೆದ್ದ ಪ್ರಶಸ್ತಿ: 18

ಗ್ರ್ಯಾನ್‌ಸ್ಲಾಮ್‌ ಕಿರೀಟ:1

****

ನೊವಾಕ್‌ ಜೊಕೊವಿಚ್‌

ಸರ್ಬಿಯಾದ ಜೊಕೊವಿಚ್‌ ಈ ಬಾರಿ ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಗೆಲ್ಲುವತ್ತ ಚಿತ್ತ ನೆಟ್ಟಿದ್ದಾರೆ.

ವೃತ್ತಿಬದುಕಿನಲ್ಲಿ ಗೆದ್ದ ಪ್ರಶಸ್ತಿಗಳು: 68

ಗ್ರ್ಯಾನ್‌ ಸ್ಲಾಮ್‌ ಕಿರೀಟ: 12

***

ಆ್ಯಂಡಿ ಮರ‍್ರೆ

ವೃತ್ತಿಬದುಕಿನಲ್ಲಿ ಗೆದ್ದ ಪ್ರಶಸ್ತಿಗಳು: 45

ಗ್ರ್ಯಾನ್‌ಸ್ಲಾಮ್‌ ಕಿರೀಟ: 3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT