ಲಂಡನ್: ಹದಿನೈದರ ಹರೆಯದ ಕೋರಿ ಗಾಫ್, ಬುಧವಾರ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ ಅತೀ ಕಿರಿಯ (28 ವರ್ಷಗಳ ನಂತರ) ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. 1991ರಲ್ಲಿ ಜೆನಿಫರ್ ಕ್ಯಾಪ್ರಿಟಿ ಸೆಮಿಫೈನಲ್ ಪ್ರವೇಶಿಸಿದ್ದರು.

ವಿಂಬಲ್ಡನ್‌ನಲ್ಲಿ ಚೊಚ್ಚಲ ಬಾರಿಗೆ ಪ್ರಧಾನ ಸುತ್ತು ಪ್ರವೇಶಿಸಿರುವ ಕೋರಿ, ಮೊದಲ ಸುತ್ತಿನಲ್ಲಿ ಐದು ಬಾರಿಯ ಚಾಂಪಿಯನ್ ವೀನಸ್ ವಿಲಿಯಮ್ಸ್‌ಗೆ ಆಘಾತ ನೀಡಿ ಟೆನಿಸ್ ಲೋಕದ ಗಮನ ಸೆಳೆದಿದ್ದರು.

ವಿಶ್ವಕ್ರಮಾಂಕ ಪಟ್ಟಿಯಲ್ಲಿ 313ನೇ ಸ್ಥಾನದಲ್ಲಿರುವ ಅವರು ಬುಧವಾರವೂ ಅಚ್ಚರಿಯ ಫಲಿತಾಂಶ ನೀಡಿದರು.

ಎರಡನೇ ಸುತ್ತಿನಲ್ಲಿ 6–3, 6–3 ನೇರ ಸೆಟ್‌ಗಳಿಂದ ವಿಶ್ವ ರ‍್ಯಾಂಕಿಂಗ್‌ನಲ್ಲಿ 139ನೇ ಸ್ಥಾನದಲ್ಲಿರುವ ಮಾಗ್ದಲೆನಾ ರೈಬರಿಕೋವಾಗೆ ಆಘಾತ ನೀಡಿದ್ದಾರೆ.

ಸ್ಲೊವೇಕಿಯಾದ 30 ವರ್ಷದ ಆಟಗಾರ್ತಿ ರೈಬರಿಕೋವಾ, 2017ರ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು.

ಈ ಪಂದ್ಯದ ಎರಡು ಸೆಟ್‌ಗಳಲ್ಲೂ ಮಿಂಚಿನ ಸಾಮರ್ಥ್ಯ ತೋರಿದ ಗಾಫ್, 18 ವಿನ್ನರ್‌ಗಳನ್ನು ಸಿಡಿಸಿದರು.

ಶುಕ್ರವಾರ ನಡೆಯುವ ಮೂರನೇ ಸುತ್ತಿನ ಹಣಾಹಣಿಯಲ್ಲಿ ಅವರು, ಸ್ಲೊವೇನಿಯಾದ ಪೊಲೊನಾ ಹರ್ಕೊಗ್ ಎದುರು ಆಡಲಿದ್ದಾರೆ.

ಶಾಲಾ ಹುಡುಗಿ ಗಾಫ್, 2017ರ ಅಮೆರಿಕ ಓಪನ್‌ನ ಬಾಲಕಿಯರ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದರು. ಈ ಸಾಧನೆ ಮಾಡಿದ ಅತಿ ಕಿರಿಯ ಆಟಗಾರ್ತಿ ಎಂಬ ಶ್ರೇಯಕ್ಕೂ ಪಾತ್ರರಾಗಿದ್ದರು. 2018ರ ಫ್ರೆಂಚ್ ಓಪನ್‌ನ ಬಾಲಕಿಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು.

ಕ್ವಿಟೋವಾಗೆ ಜಯ: ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಗೆಲುವಿನ ಓಟ ಮುಂದುವರಿಸಿದ್ದಾರೆ.

ಗುರುವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪೈಪೋಟಿಯಲ್ಲಿ ಕ್ವಿಟೋವಾ 7–5, 6–2ರಲ್ಲಿ ಕ್ರಿಸ್ಟಿನಾ ಮ್ಲಾಡೆನೊವಿಚ್ ಎದುರು ಗೆದ್ದರು.

ಅಮೆರಿಕದ ಸ್ಲೋನ್ ಸ್ಟೀಫನ್ಸ್ 6–0, 6–2ರಲ್ಲಿ ವಾಂಗ್ ಯಫಾನ್ ಅವರನ್ನು ಮಣಿಸಿದರು.

ಆಸ್ಟ್ರೇಲಿಯಾದ ಆಟಗಾರ್ತಿ, ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಆ್ಯಷ್ಲೆ ಬಾರ್ಟಿ 6–1, 6–3ರಲ್ಲಿ ಅಲಿಸನ್ ವ್ಯಾನ್ ಉಯೆತ್ವಾಂಕ್ ಅವರನ್ನು ಪರಾಭವಗೊಳಿಸಿದರು.

ಇತರ ಪಂದ್ಯಗಳಲ್ಲಿ ಕಾರ್ಲಾ ಸ್ವಾರೆಜ್ ನವಾರೊ 7–6, 7–6ರಲ್ಲಿ ಪೌಲಿನ್ ಪಾರ್ಮೆಂಟೀರ್ ಎದುರೂ, ಬಾರ್ಬರಾ ಸ್ಟ್ರೈಕೋವಾ 6–3, 7–5ರಲ್ಲಿ ಲೌರಾ ಸಿಗ್ಮಂಡ್ ಮೇಲೂ, ಹ್ಯಾರಿಯಟ್ ಡಾರ್ಟ್ 7–6, 3–6, 6–1ರಲ್ಲಿ ಬೀಟ್ರಿಜ್ ಮಾಯಿಯಾ ಎದುರೂ, ವಾಂಗ್ ಕ್ವಿಯಾಂಗ್ 6–1, 6–2ರಲ್ಲಿ ಟಾಮರಾ ಜಿದಾನ್ಸೆಕ್, ಎಲಿಸೆ ಮರ್ಟೆನ್ಸ್ 7–5, 6–0ರಲ್ಲಿ ಮೋನಿಕಾ ನಿಕುಲೆಸ್ಕು ಮೇಲೂ ಗೆದ್ದರು.

ಜೊಕೊವಿಚ್‌ಗೆ ಜಯ: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್, ಮೂರನೇ ಸುತ್ತು ಪ್ರವೇಶಿಸಿದರು.

ಎರಡನೇ ಸುತ್ತಿನ ಪಂದ್ಯದಲ್ಲಿ ಜೊಕೊವಿಚ್ 6–3, 6–2, 6–2ರಲ್ಲಿ ಡೆನಿಶ್ ಕುಡ್ಲಾ ಎದುರು ಗೆದ್ದರು.

ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯಗಳಲ್ಲಿ ಕೀ ನಿಶಿಕೋರಿ 6–4, 6–4, 6–0ರಲ್ಲಿ ಕ್ಯಾಮರಾನ್ ನೂರಿ ಎದುರೂ, ಸ್ಯಾಮ್ ಕ್ವೆರಿ 6–3, 6–2, 6–3ರಲ್ಲಿ ಆ್ಯಂಡ್ರೆ ರುಬೆಲೆವ್ ಮೇಲೂ, ಡಾನ್ ಇವಾನ್ಸ್ 6–3, 6–2, 7–6ರಲ್ಲಿ ನಿಕೊಲಸ್ ಬಾಸಿಲಶ್ವಿಲಿ ವಿರುದ್ಧವೂ, ಸ್ಟೀವ್ ಜಾನ್ಸನ್ 3–6, 7–6, 6–3, 3–6, 6–3ರಲ್ಲಿ ಅಲೆಕ್ಸ್ ಡಿ ಮಿನೌರ್ ಎದುರೂ, ಜಾನ್ ಮಿಲ್‌ಮ್ಯಾನ್ 6–3, 6–2, 6–1ರಲ್ಲಿ ಲಾಸ್ಲೊ ಡೆರೆ ಮೇಲೂ, ಜಾನ್ ಲೆನ್ನಾರ್ಡ್ ಸ್ಟ್ರಫ್ 6–4, 6–3, 5–7, 7–6ರಲ್ಲಿ ಟೇಲರ್ ಫ್ರಿಟ್ಜ್ ವಿರುದ್ಧವೂ ಗೆದ್ದರು.

ಹಾಲಿ ಚಾಂಪಿಯನ್ ಕೆರ್ಬರ್‌ಗೆ ಆಘಾತ
ಮಹಿಳಾ ಸಿಂಗಲ್ಸ್ ವಿಭಾಗದ ಹಾಲಿ ಚಾಂಪಿಯನ್ ಏಂಜಲಿಕ್ ಕೆರ್ಬರ್ ಎರಡನೇ ಸುತ್ತಿನಲ್ಲಿ ಆಘಾತ ಕಂಡರು. ಲೌರೆನ್ ಡೇವಿಸ್ 2–6, 6–2, 6–1ರಲ್ಲಿ ಜರ್ಮನಿಯ ಆಟಗಾರ್ತಿಗೆ ಸೋಲಿನ ರುಚಿ ತೋರಿಸಿದರು.

ಮೂರನೇ ಸುತ್ತಿಗೆ ಫೆಡರರ್: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಗೆಲುವಿನ ಓಟ ಮುಂದುವರಿಸಿದ್ದಾರೆ.

ಎರಡನೇ ಶ್ರೇಯಾಂಕದ ಆಟಗಾರ ಫೆಡರರ್ 6–1, 7–6, 6–2ರಲ್ಲಿ ಬ್ರಿಟನ್‌ನ ಜೇ ಕ್ಲಾರ್ಕ್ ಅವರನ್ನು ಸೋಲಿಸಿದರು. ಈ ಮೂಲಕ ವಿಂಬಲ್ಡನ್‌ನಲ್ಲಿ 70ನೇ ಸಲ ಮೂರನೇ ಸುತ್ತು ಪ್ರವೇಶಿಸಿದ ಸಾಧನೆ ಮಾಡಿದರು.

ಬೋಪಣ್ಣ–ಕ್ಯುವಾಸ್‌ಗೆ ನಿರಾಸೆ: ಪುರುಷರ ಡಬಲ್ಸ್‌ನಲ್ಲಿ ಕಣದಲ್ಲಿದ್ದ ಭಾರತದ ರೋಹನ್ ಬೋಪಣ್ಣ ಮತ್ತು ಉರುಗ್ವೆಯ ಪ್ಯಾಬ್ಲೊ ಕ್ಯುವಾಸ್ ಮೊದಲ ಸುತ್ತಿನಲ್ಲಿ ಸೋತರು.

ಬೋಪಣ್ಣ ಮತ್ತು ಕ್ಯುವಾಸ್ 4–6, 4–6, 6–4, 6–7ರಲ್ಲಿ ಮಾರ್ಕಸ್ ಡೇನಿಯಲ್ ಮತ್ತು ವೆಸ್ಲಿ ಕೂಲ್‌ಹೊಫ್ ಎದುರು ಮಣಿದರು.

ದಿವಿಜ್ ಶರಣ್ ಮತ್ತು ಮಾರ್ಷೆಲೊ ಡೆಮೋಲಿನರ್ 7–5, 6–4, 7–5ರಲ್ಲಿ ಕೆವಿನ್ ಕ್ರಾವಿಟ್ಜ್ ಮತ್ತು ಆ್ಯಂಡ್ರೆಸ್ ಮೀಸ್ ಎದುರು ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.