ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS FINAL | ಪಿಚ್‌ನ ಚಿತ್ರ ಸೆರೆಹಿಡಿದ ಕಮಿನ್ಸ್‌!

Published 18 ನವೆಂಬರ್ 2023, 12:45 IST
Last Updated 18 ನವೆಂಬರ್ 2023, 12:45 IST
ಅಕ್ಷರ ಗಾತ್ರ

ಅಹಮದಾಬಾದ್: ಪಂದ್ಯಕ್ಕೆ ಮುನ್ನ ತಂಡಗಳ ನಾಯಕರು ಪಿಚ್‌ ಪರಿಶೀಲನೆ ನಡೆಸುವುದು ಸಂಪ್ರದಾಯ. ಆದರೆ ಡ್ರೆಸಿಂಗ್‌ ರೂಮ್‌ನಲ್ಲಿ ಚರ್ಚೆ ಹಾಗೂ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದೇನೊ, ಪಿಚ್‌ನ ಚಿತ್ರ ಸೆರೆಹಿಡಿಯುವುದು ವಿರಳ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಅಂಥ ಕೆಲಸ ಮಾಡಿದ್ದಾರೆ.

ಭಾನುವಾರದ ಫೈನಲ್ ಪಂದ್ಯ ನಡೆಯುವ ಪಿಚ್‌ನ ಚಿತ್ರವನ್ನು ಅವರು ಶನಿವಾರ ಬೆಳಿಗ್ಗೆ ತೆಗೆದಿದ್ದಾರೆ. ಬಹುಶಃ ಪಂದ್ಯಕ್ಕಿಂತ ಮೊದಲು ಪಿಚ್‌ ಹೇಗೆ ವರ್ತಿಸಬಹುದೆಂಬ ಯೋಚನೆ ಆಸ್ಟ್ರೇಲಿಯಾವನ್ನು ಕಾಡಿರಲು ಸಾಕು.

ಫೈನಲ್‌ಗೆ ಸಿದ್ಧಪಡಿಸಿರುವ ಪಿಚ್‌ನ ವಿಶ್ಲೇಷಣೆಯ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಕಮಿನ್ಸ್‌ ಗುಟ್ಟು ಬಿಚ್ಚಿಡಲಿಲ್ಲ. ಭಾರತ– ಪಾಕ್‌ ಪಂದ್ಯವನ್ನು ಇದೇ ಪಿಚ್‌ ಬಳಸಲಾಗಿತ್ತು.

‘ಬರೇ ನೋಟ ಹರಿಸಿದ್ದೆ’ ಎಂದಷ್ಟೇ ಆಸ್ಟ್ರೇಲಿಯಾ ನಾಯಕ ಪ್ರತಿಕ್ರಿಯಿಸಿದರು. ಅದರಿಂದ (ತೆಗೆದ ಪಿಚ್‌ ಫೋಟೊ) ಏನು ಮಾಡುತ್ತೀರಿ ಎಂದು ಕೆದಕಿದಾಗ ಅವರು ‘ನಾನು ಪಿಚ್‌ನ ಮರ್ಮವನ್ನು ಚೆನ್ನಾಗಿ ಅರಿತವನಲ್ಲ.  ಆದಕ್ಕೆ ನೀರುಣಿಸಲಾಗಿದೆ. ಉತ್ತಮ ವಿಕೆಟ್‌ನಂತೆ ಕಾಣುತ್ತಿದೆ’ ಎಂದು ಪ್ರತಿಕ್ರಿಯಿಸಿದರು. ‘ಅಲ್ಲಿ ಪಾಕಿಸ್ತಾನ ಆಡಿರಬೇಕು

ಆಸ್ಟ್ರೇಲಿಯಾ ತಂಡದ ಅಭ್ಯಾಸ ಮಧ್ಯಾಹ್ನ ನಡೆದರೂ, ಕಮಿನ್ಸ್‌ ಬೆಳಿಗ್ಗೆ 9.30ರ ಹೊತ್ತಿಗೆ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಬಂದಿದ್ದರು. ಅವರು ಪಿಚ್‌ ಬಳಿ ತೆರಳಿ ಫೋಟೊಗಳನ್ನು ತೆಗೆದುಕೊಂಡರು. ಶನಿವಾರ ಮತ್ತು ಭಾನುವಾರ ಎಷ್ಟು ಬದಲಾವಣೆ ಆಗಬಹುದೆಂಬುದನ್ನು ತಿಳಿಯುವ ಅವರ ಉದ್ದೇಶ ಇರಬಹುದು ಎನ್ನಲಾಗುತ್ತಿದೆ.

ಆಸ್ಟ್ರೇಲಿಯಾ ತಂಡದ ತಾಲೀಮು ನಡೆಯುವ ಮೊದಲು ಸ್ಟೀವ್‌ ಸ್ಮಿತ್, ಟ್ರಾವಿಸ್‌ ಹೆಡ್‌ ಮತ್ತು ಹೆಡ್‌ ಕೋಚ್‌ ಆ್ಯಂಡ್ರೂ ಮೆಕ್‌ಡೊನಾಲ್ಡ್ ಕೂಡ ಪಿಚ್‌ ಅವಲೋಕನ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT