ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC World Cup | ಸಚಿನ್ ದಾಖಲೆ ಸರಿಗಟ್ಟಲಿದ್ದಾರೆ ವಿರಾಟ್‌ ಕೊಹ್ಲಿ: ಪಾಂಟಿಂಗ್

Published 10 ಅಕ್ಟೋಬರ್ 2023, 16:16 IST
Last Updated 10 ಅಕ್ಟೋಬರ್ 2023, 16:16 IST
ಅಕ್ಷರ ಗಾತ್ರ

ನವದೆಹಲಿ: ಏಕದಿನ ಕ್ರಿಕೆಟ್‌ನಲ್ಲಿ ಸಚಿನ್‌ ತೆಂಡೂಲ್ಕರ್‌ ಅವರು ನಿರ್ಮಿಸಿರುವ ಅತಿ ಹೆಚ್ಚು ಶತಕ ಗಳಿಕೆ ದಾಖಲೆಯನ್ನು ವಿರಾಟ್‌ ಕೊಹ್ಲಿ ಈ ಬಾರಿಯ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ ವೇಳೆಯೇ ಸರಿಗಟ್ಟಲಿದ್ದಾರೆ ಎಂದು  ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್‌ ಹೇಳಿದ್ದಾರೆ.

ದಿಗ್ಗಜ ಕ್ರಿಕೆಟಿಗ ತೆಂಡೂಲ್ಕರ್‌ ಅವರು ಏಕದಿನ ಕ್ರಿಕೆಟ್‌ನಲ್ಲಿ 463 ಪಂದ್ಯಗಳಿಂದ 49 ಶತಕಗಳನ್ನು ಸಿಡಿಸಿದ್ದಾರೆ. ಕೊಹ್ಲಿಗೆ ಈ ದಾಖಲೆಯನ್ನು ಸರಿಗಟ್ಟಲು 2 ಶತಕ ಅಥವಾ ಮುರಿಯಲು 3 ಶತಕಗಳ ಅಗತ್ಯವಿದೆ. ಈವರೆಗೆ 282 ಪಂದ್ಯಗಳಲ್ಲಿ ಆಡಿರುವ ಕೊಹ್ಲಿ ಖಾತೆಯಲ್ಲಿ ಸದ್ಯ 47 ಶತಕಗಳಿವೆ.

ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಗುಂಪು ಹಂತದಲ್ಲೇ ಇನ್ನೂ 8 ಪಂದ್ಯಗಳನ್ನು ಆಡಲಿದೆ. ಈ ವೇಳೆ ಸಚಿನ್‌ ದಾಖಲೆ ಮೀರುವ ಅವಕಾಶ ಕೊಹ್ಲಿಗೆ ಇದೆ.

ಐಸಿಸಿ ರಿವ್ಯೂವ್‌ ಪಾಡ್‌ಕಾಸ್ಟ್‌ ಎಪಿಸೋಡ್‌ನಲ್ಲಿ ಇದರ ಬಗ್ಗೆ ಮಾತನಾಡಿರುವ ಪಾಂಟಿಂಗ್‌, 'ನನ್ನ ಪ್ರಕಾರ ಕೊಹ್ಲಿ ಈ ಸಾಧನೆ ಮಾಡುತ್ತಾರೆ. ಕೊಹ್ಲಿ ಮೂರು ಶತಕ ಗಳಿಸುವರೇ ಎಂಬುದು ಬೇರೆ ವಿಷಯ. ಆದರೆ, ಖಂಡಿತವಾಗಿಯೂ ಎರಡು ಶತಕ ಗಳಿಸುತ್ತಾರೆ' ಎಂದು ಅಭಿಪ್ರಾಪಟ್ಟಿದ್ದಾರೆ.

ಭಾರತದ ಪಿಚ್‌ಗಳು ರನ್‌ಗಳಿಸಲು ಅನುಕೂಲಕರವಾಗಿವೆ. ವಿರಾಟ್ ಉತ್ತಮ ಲಯದಲ್ಲಿರುವಂತೆ ಕಾಣುತ್ತಿದೆ. ಅವರು ರನ್‌ ಗಳಿಸಲು ಎದುರು ನೋಡುತ್ತಿರುತ್ತಾರೆ ಎಂಬುದು ನಮಗೆಲ್ಲ ಗೊತ್ತೇ ಇದೆ. ಕೊಹ್ಲಿ ತಮ್ಮ ಮತ್ತು ತಂಡದ ಯಶಸ್ಸನ್ನು ಸದಾ ಬಯಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಾರಿಗೆ ಗೊತ್ತು ಇದು ಕೊಹ್ಲಿ ಪಾಲಿಗೆ ಕೊನೆಯ ವಿಶ್ವಕಪ್‌ ಟೂರ್ನಿ ಆದರೂ ಆಗಬಹುದು ಎಂದಿರುವ ಪಾಂಟಿಂಗ್‌, ಟೂರ್ನಿ ಮುಕ್ತಾಯದ ವೇಳೆಗೆ ಸಚಿನ್ ದಾಖಲೆಯನ್ನು ಮುರಿಯಲು ಸಾಧ್ಯವಾಗದಿದ್ದರೆ, ದಾಖಲೆ ಸರಿಗಟ್ಟಲಿದ್ದಾರೆ. ಇದೂ ಗಮನಾರ್ಹ ಸಾಧನೆಯಾಗಲಿದೆ ಎಂದು ಉಲ್ಲೇಖಿಸಿದ್ದಾರೆ.

2019ರ ಆಗಸ್ಟ್‌ನಿಂದ 2022ರ ಡಿಸೆಂಬರ್‌ವರೆಗೆ ಶತಕದ ಬರ ಅನುಭವಿಸಿದ್ದ ವಿರಾಟ್‌, ಅಲ್ಲಿಂದ ಈಚೆಗೆ ಆಡಿರುವ 15 ಇನಿಂಗ್ಸ್‌ಗಳಲ್ಲಿ 4 ಶತಕ ಸಿಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT