ನವದೆಹಲಿ (ಪಿಟಿಐ): ಭಾರತದ ಕುಮಾರವೇಲು ಪ್ರೇಮ್ಕುಮಾರ್ ಚೀನಾದಲ್ಲಿ ಆರಂಭವಾದ ಐದನೇ ಒಳಾಂಗಣ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ ಲಾಂಗ್ಜಂಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು.
ಶನಿವಾರ ಆರಂಭವಾದ ಈ ಚಾಂಪಿಯನ್ಷಿಪ್ನಲ್ಲಿ 19 ವರ್ಷದ ಈ ಅಥ್ಲೀಟ್ 7.62ಮೀಟರ್ ದೂರ ಜಿಗಿಯುವ ಮೂಲಕ ಕಂಚು ತಮ್ಮದಾಗಿಸಿಕೊಂಡರು.
ಈ ಮೂಲಕ ಭಾರತದ ಅಥ್ಲೀಟ್ ನಿರ್ಮಿಸಿದ್ದ ದಾಖಲೆಯನ್ನು ಉತ್ತಮ ಪಡಿಸಿದರು. ಏಳು ವರ್ಷಗಳ ಹಿಂದೆ ಪಟ್ಟಾಯಾದಲ್ಲಿ ನಡೆದ ಕೂಟದಲ್ಲಿ ಭಾರತದ ಮಹಾ ಸಿಂಗ್ 7.49 ಮೀ. ದೂರ ಜಿಗಿದಿದ್ದರು.
1500 ಮೀ. ಓಟದ ಸ್ಪರ್ಧೆಯಲ್ಲಿ ಕಾರಿಯಪ್ಪ ರಂಜನ್ ನಾಲ್ಕನೇ ಸ್ಥಾನ ( 4:00.03ಸೆಕೆಂಡ್) ಪಡೆದರು. ಕೇವಲ 0.2ಸೆಕೆಂಡ್ಗಳ ಅಂತರದಲ್ಲಿ ಕಂಚಿನ ಪದಕ ಜಯಿಸುವ ಅವಕಾಶ ತಪ್ಪಿಸಿಕೊಂಡರು.
ಹೈಜಂಪ್ನಲ್ಲಿ ಸಹನಾ ಕುಮಾರಿ ನಾಲ್ಕನೇ ಸ್ಥಾನ ಪಡೆದರು. ಈ ಸ್ಫರ್ಧಿ 1.80ಮೀ ಎತ್ತರ ಜಿಗಿದರು. ಚೀನಾದ ಜೇಂಗ್ ಕ್ಸಿಂಗ್ (1.92ಮೀ) ಚಿನ್ನ ಜಯಿಸಿದರು. ಪಿ.ಜೆ. ವಿನೋದ್ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದರು.