ಪುಣೆ: ಮೇ ಒಂದರಂದು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವಿರುದ್ಧ ಪಂದ್ಯ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ಹಾದಿ ಬಹಳ ಕಠಿಣವಾಗಿದೆ. ಪ್ಲೇ ಆಫ್ ಹಂತಕ್ಕೆ ಪ್ರವೇಶಿಸಲು ಇನ್ನುಳಿದಿರುವ ಆರು ಪಂದ್ಯಗಳಲ್ಲಿ ಐದರಲ್ಲಿ ಗೆಲ್ಲುವ ಒತ್ತಡದಲ್ಲಿದೆ.

ಈ ಹಾದಿಯಲ್ಲಿ ಮೊದಲ ಸವಾಲು ಶನಿವಾರ ಎದುರಾಗಲಿದೆ. ಅದೂ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ವಿರಾಟ್ ಬಳಗವು ಎದುರಿಸಲಿದೆ.

ಏಪ್ರಿಲ್ 25ರಂದು ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ದೋನಿ ಬಳಗವು ಸೋಲಿಸಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆರ್‌ಸಿಬಿ ತಂಡವು ಎಬಿ ಡಿವಿಲಿಯರ್ಸ್ ಮತ್ತು ಕ್ವಿಂಟನ್ ಡಿ ಕಾಕ್ ಅವರ ಅಬ್ಬರದ ಅರ್ಧಶತಕಗಳ ಬಲದಿಂದ 205 ರನ್ ಗಳಿಸಿತ್ತು.

ಗುರಿ ಬೆನ್ನತ್ತಿದ ಸಿಎಸ್‌ಕೆಯ ನಾಯಕ ದೋನಿ (ಅಜೇಯ 70) ಮತ್ತು ಅಂಬಟಿ ರಾಯುಡು (82 ರನ್) ಅವರ ಅಮೋಘ ಆಟದ ಬಲದಿಂದ 5 ವಿಕೆಟ್‌ಗಳಿಂದ ಜಯಿಸಿತ್ತು. ಅದರ ನಂತರ ಸಿಎಸ್‌ಕೆ ತಂಡವು ಮೂರು ಪಂದ್ಯಗಳಲ್ಲಿ ಆಡಿತ್ತು. ಅದರಲ್ಲಿ ಎರಡರಲ್ಲಿ ಸೋತಿದೆ. ಆದರೂ ಪಾಯಿಂಟ್ ಪಟ್ಟಿಯ ಎರಡನೇ ಸ್ಥಾನ ದಲ್ಲಿದೆ. ಆರ್‌ಸಿಬಿ ಎರಡು ಪಂದ್ಯಗಳಲ್ಲಿ ಆಡಿ ಒಂದರಲ್ಲಿ ಗೆದ್ದಿತ್ತು.

ಆನುಭವಿ ಆಟಗಾರರು ಇರುವ ಸಿಎಸ್‌ಕೆ ತಂಡದ ಶೇನ್ ವಾಟ್ಸನ್, ದೋನಿ, ಅಂಬಟಿ ರಾಯುಡು, ಫಾಫ್ ಡು ಪ್ಲೆಸಿ, ಸುರೇಶ್ ರೈನಾ ಮತ್ತು ರವೀಂದ್ರ ಜಡೇಜ ಅವರನ್ನು ಕಟ್ಟಿಹಾಕುವ ತಂತ್ರ ರೂಪಿಸುವ ಸವಾಲು ವಿರಾಟ್ ಬಳಗದ ಮುಂದೆ ಇದೆ. ವೇಗಿ ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಟಿಮ್ ಸೌಥಿ, ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ತಮ್ಮ ಅನುಭವವನ್ನು ಪಣಕ್ಕಿಡಬೇಕಾಗಬದು.

ಸಿಎಸ್‌ಕೆಯ ಬೌಲಿಂಗ್ ದಾಳಿ ಯನ್ನು ಚಾಣಾಕ್ಷತನದಿಂದ ಎದುರಿಸಿ ರನ್ ಗಳನ್ನು ಪೇರಿಸಲು ಆರ್‌ಸಿಬಿ ಬ್ಯಾಟಿಂಗ್ ಪಡೆ ಸಿದ್ಧವಾಗಿದೆ.

ಹೋದ ಪಂದ್ಯದಲ್ಲಿ ಮಿಂಚಿದ್ದ ಮನನ್ ವೊಹ್ರಾ, ವಿರಾಟ್ ಕೊಹ್ಲಿ, ಆಲ್‌ರೌಂಡ್ ಆಟವಾಡಿದ್ದ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಅವರು ಲಯವನ್ನು ಮುಂದುವರಿಸಿದರೆ ತಂಡಕ್ಕೆ ಜಯ ಒಲಿಯುವ ಸಾಧ್ಯತೆ ಹೆಚ್ಚು.

ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ಬ್ರೆಂಡನ್ ಮೆಕ್ಲಮ್, ಎಬಿ ಡಿವಿಲಿಯರ್ಸ್, ಸರ್ಫರಾಜ್ ಖಾನ್, ಮನದೀಪ್ ಸಿಂಗ್, ಕ್ರಿಸ್ ವೋಕ್ಸ್, ವಾಷಿಂಗ್ಟನ್ ಸುಂದರ್, ಉಮೇಶ್ ಯಾದವ್, ಯಜುವೇಂದ್ರ ಚಾಹಲ್, ಕಾಲಿನ ಡಿ ಗ್ರ್ಯಾಂಡ್‌ಹೋಮ್, ಮೋಯಿನ್ ಅಲಿ, ಪವನ್ ನೇಗಿ, ಮೊಹಮ್ಮದ್ ಸಿರಾಜ್, ಕೋರಿ ಆ್ಯಂಡರ್ಸನ್, ಪಾರ್ಥಿವ್ ಪಟೇಲ್, ಟಿಮ್ ಸೌಥಿ

ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ದೋನಿ (ನಾಯಕ/ವಿಕೆಟ್ ಕೀಪರ್), ಸುರೇಶ್ ರೈನಾ, ರವೀಂದ್ರ ಜಡೇಜ, ಫಾಫ್ ಡು ಪ್ಲೆಸಿ, ಹರಭಜನ್ ಸಿಂಗ್, ಡ್ವೇನ್ ಬ್ರಾವೊ, ಶೇನ್ ವಾಟ್ಸನ್, ಅಂಬಟಿ ರಾಯುಡು, ಕೆ.ಎಂ. ಆಸಿಫ್, ಕನಿಷ್ಕ ಸೇಟ್, ಲುಂಗಿ ಗಿಡಿ, ಧ್ರುವ ಶೋರೆ, ಮುರಳಿ ವಿಜಯ್, ಸ್ಯಾಮ್ ಬಿಲ್ಲಿಂಗ್ಸ್, ಮಾರ್ಕ್ ವುಡ್, ಕ್ಷಿತೀಜ್ ಶರ್ಮಾ, ಮೋನು ಕುಮಾರ್, ಚೈತನ್ಯ ಬಿಷ್ಣೊಯ್, ಇಮ್ರಾನ್ ತಾಹೀರ್, ಕರ್ಣ ಶರ್ಮಾ, ಶಾರ್ದೂಲ್ ಠಾಕೂರ್, ಎನ್. ಜಗದೀಶನ್, ಡೇವಿಡ್ ವಿಲ್ಲಿ.

ಪಂದ್ಯ ಆರಂಭ: ಸಂಜೆ 4

ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್

ಎಬಿಡಿ ಫಿಟ್

ಜ್ವರದಿಂದ ಬಳಲಿದ್ದ ಆರ್‌ಸಿಬಿಯ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಅವರು ಚೇತರಿಸಿಕೊಂಡಿದ್ದಾರೆ. ಸಿಎಸ್‌ಕೆ ಎದುರಿನ ಪಂದ್ಯದಲ್ಲಿ ಅವರು ಕಣಕ್ಕಿಳಿಯುವುದು ಬಹುತೇಕ ಖಚಿತ ಎಂದು ತಂಡದ ಮುಖ್ಯ ಕೋಚ್ ಡೇನಿಯಲ್ ವೆಟೋರಿ ಹೇಳಿದ್ದಾರೆ.

ಆದರೆ ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಅವರು ಈ ಪಂದ್ಯದಲ್ಲಿ ಆಡುವುದಿಲ್ಲ. ಅವರ ಬದಲಿಗೆ ಪಾರ್ಥಿವ್ ಪಟೇಲ್ ಅವಕಾಶ ಪಡೆಯುವ ಸಾಧ್ಯತೆ ಇದೆ.

ಟೂರ್ನಿಯಲ್ಲಿ ಆರ್‌ಸಿಬಿ ಆಡಿದ ಎಲ್ಲ ಪಂದ್ಯಗಳಲ್ಲೂ ಆರಂಭಿಕ ಬ್ಯಾಟ್ಸ್‌ಮನ್ ಅಗಿ ಕಣಕ್ಕಿಳಿದಿದ್ದ ಕ್ವಿಂಟನ್ ಉತ್ತಮವಾಗಿ ಆಡಿದ್ದರು. ದಕ್ಷಿಣ ಆಫ್ರಿಕಾದ ಕ್ವಿಂಟನ್ ತಮ್ಮ ತವ ರೂರಿನಲ್ಲಿ ನಡೆಯಲಿರುವ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.