ಕಾರ್ಡಿಫ್ (ಪಿಟಿಐ): ಹಿಂದಿನ ಪಂದ್ಯದಲ್ಲಿ ಶ್ರೀಲಂಕಾ ಎದುರು ಸೋಲು ಅನುಭವಿಸಿರುವ ಇಂಗ್ಲೆಂಡ್ ತಂಡ ಸಂಕಷ್ಟಕ್ಕೆ ಸಿಲುಕಿದೆ. ಆದರೆ, ಆತಿಥೇಯರಿಗೆ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಲು ಅವಕಾಶವಿದೆ. ಈ ಆಸೆ ಈಡೇರಬೇಕಾದರೆ ಭಾನುವಾರ ನಡೆಯುವ ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆಯಿದೆ.

ಸೋಫಿಯಾ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿರುವ `ಎ' ಗುಂಪಿನ ಪಂದ್ಯದಲ್ಲಿ ಉಭಯ ತಂಡಗಳಿಗೂ ಈ ಪಂದ್ಯ ಕೊನೆಯ ಲೀಗ್ ಪಂದ್ಯವಾಗಿದೆ. ಮೂರು ಪಾಯಿಂಟ್ಗಳನ್ನು ಕಲೆ ಹಾಕಿ ಅಗ್ರಸ್ಥಾನದಲ್ಲಿರುವ ಬ್ರೆಂಡನ್ ಮೆಕ್ಲಮ್ ಸಾರಥ್ಯದ ಕಿವೀಸ್ ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ಆದರೆ, ಅಲಸ್ಟರ್ ಕುಕ್ ನೇತೃತ್ವದ ಇಂಗ್ಲೆಂಡ್ ಎರಡು ಅಂಕಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಕಿವೀಸ್ ತಂಡವನ್ನು ಮಣಿಸಿದರೆ, ಆತಿಥೇಯರ ಮುಂದಿನ ಘಟ್ಟದ ಹಾದಿ ಸುಗಮವಾಗಲಿದೆ. ನಾಲ್ಕರ ಹಂತ ಪ್ರವೇಶಿಸುವ ಪೈಪೋಟಿಯಲ್ಲಿ ಶ್ರೀಲಂಕಾ ಕೂಡಾ ಇದೆ.

ಈ ತಂಡ ಜೂನ್ 17ರಂದು ನಡೆಯಲಿರುವ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಗೆಲುವು ಸಾಧಿಸಬೇಕು. ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿರುವ ಹಾಲಿ ಚಾಂಪಿಯನ್ ಆಸೀಸ್ ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿದೆ. ಇಂಗ್ಲೆಂಡ್ ಮೇಲಿರುವಷ್ಟೇ ಒತ್ತಡ ನ್ಯೂಜಿಲೆಂಡ್ ತಂಡದ ಮೇಲೂ ಇದೆ. ಆದ್ದರಿಂದ ಎರಡೂ ತಂಡಗಳಿಗೆ ಈ ಪಂದ್ಯ `ಕ್ವಾರ್ಟರ್ ಫೈನಲ್' ಹಣಾಹಣಿ ಎನ್ನುವಂತಾಗಿದೆ.

ಬ್ಯಾಟಿಂಗ್ನಲ್ಲಿ ಬಲಿಷ್ಠ: ಹಿಂದಿನ ಎರಡೂ ಪಂದ್ಯಗಳಲ್ಲಿ ಕ್ರಮವಾಗಿ 269 (ಆಸ್ಟ್ರೇಲಿಯಾ ವಿರುದ್ಧ) ಹಾಗೂ 293 (ಶ್ರೀಲಂಕಾ ಎದುರು) ರನ್ಗಳನ್ನು ಕಲೆ ಹಾಕಿರುವ ಇಂಗ್ಲೆಂಡ್ ಬ್ಯಾಟಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದೆ. ಆರಂಭಿಕ ಬ್ಯಾಟ್ಸ್ಮನ್ಗಳಾದ ನಾಯಕ ಕುಕ್ ಮತ್ತು ಇಯಾನ್ ಬೆಲ್ ಪ್ರಮುಖ ಬ್ಯಾಟಿಂಗ್ ಶಕ್ತಿ.

ಜೊನಾಥನ್ ಟ್ರಾಟ್, ಯುವ ಆಟಗಾರ ರೂಟ್ ಮತ್ತು ರವಿ ರಾಂಪಾಲ್ ಆತಿಥೇಯದ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಜೊತೆಗೆ ಆತಿಥೇಯರು ಕಳೆದ ತಿಂಗಳು ಕಿವೀಸ್ ಎದುರು ಕಂಡಿದ್ದ ಏಕದಿನ ಸರಣಿ ಸೋಲಿಗೂ ಸೇಡು ತೀರಿಸಿಕೊಳ್ಳುವ ಗುರಿ ಹೊಂದಿದ್ದಾರೆ. ಆದರೆ, ಹಿಂದಿನ ಪಂದ್ಯದಲ್ಲಿ ಜೊನಾಥನ್ ಗಾಯಗೊಂಡಿದ್ದು, ಭಾನುವಾರದ ಪಂದ್ಯದಲ್ಲಿ ಆಡುವುದು ಖಚಿತವಾಗಿಲ್ಲ.

ಆಸ್ಟ್ರೇಲಿಯಾ ಎದುರಿನ ಹಿಂದಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಕಿವೀಸ್ ಒಂದು ಪಾಯಿಂಟ್ಗೆ ತೃಪ್ತಿ ಪಟ್ಟಿತ್ತು. ನ್ಯೂಜಿಲೆಂಡ್ನ ಪ್ರಮುಖ ಬ್ಯಾಟ್ಸ್ಮನ್ ಮಾರ್ಟಿನ್ ಗುಪ್ಟಿಲ್ ಮತ್ತು ರಾಸ್ ಟೇಲರ್ ಈ ಸಲದ ಟೂರ್ನಿಯಲ್ಲಿ ನಿರೀಕ್ಷೆಯಂತೆ ರನ್ ಗಳಿಸಿಲ್ಲ. ಮಧ್ಯಮ ವೇಗಿ ಮಿಷೆಲ್ ಮೆಕ್ಲಾಗನ್, ಕೇಲ್ ಮಿಲ್ಸ್, ಸಾಂದರ್ಭಿಕ ಸ್ಪಿನ್ನರ್ ನಥಾನ್ ಮೆಕ್ಲಮ್ ಇಂಗ್ಲೆಂಡ್ ಬೌಲರ್ಗಳನ್ನು ನಿಯಂತ್ರಿಸಬಲ್ಲ ಶಕ್ತಿ ಹೊಂದಿದ್ದಾರೆ.

ಸಮಬಲ ಸಾಮರ್ಥ್ಯ ಹೊಂದಿರುವ ತಂಡಗಳಾದ ಕಾರಣ ಪಂದ್ಯ ಕುತೂಹಲಕ್ಕೆ ಕಾರಣವಾಗಿದೆ.

ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ (ಭಾರತೀಯ ಕಾಲಮಾನ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.