ಇಟಲಿ: ಹಾಲಿ ಚಾಂಪಿಯನ್ ಎಲಿನಾ ಸ್ವಿಟೋಲಿನಾ ಅವರು ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಹಣಾಹಣಿಯಲ್ಲಿ ಎಲಿನಾ 6–4, 6–3ರ ನೇರ ಸೆಟ್‌ಗಳಿಂದ ಶ್ರೇಯಾಂಕ ರಹಿತ ಆಟಗಾರ್ತಿ ಅನೆಟ್ ಕೊಂಥಾವೀಟ್ ವಿರುದ್ಧ ಗೆದ್ದರು.

ಉಕ್ರೇನ್‌ನ ಆಟಗಾರ್ತಿ ಎಲಿನಾ ಅವರು ಈ ಪಂದ್ಯದಲ್ಲಿ ಒಟ್ಟು 18 ವಿನ್ನರ್‌ಗಳನ್ನು ಸಿಡಿಸಿದರು. ಜೊತೆಗೆ ನಾಲ್ಕು ಬ್ರೇಕ್ ಪಾಯಿಂಟ್ಸ್‌ಗಳನ್ನು ಕಲೆಹಾಕಿ ಗೆದ್ದರು.

22ರ ಹರೆಯದ ಕೊಂಥಾವೀಟ್ 24 ವಿನ್ನರ್‌ಗಳನ್ನು ಸಿಡಿಸಿದರು. ಆದರೆ ಹಲವು ತಪ್ಪುಗಳನ್ನು ಮಾಡಿ ಪಂದ್ಯ ಕೈಚೆಲ್ಲಿದರು.

ನೊವಾಕ್ ಸವಾಲು ಮೀರಿದ ನಡಾಲ್: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸ್ಪೇನ್‌ನ ರಫೆಲ್ ನಡಾಲ್ ಫೈನಲ್‌ಗೆ ಲಗ್ಗೆ ಇಟ್ಟರು.

ಸೆಮಿಫೈನಲ್ ಹಣಾಹಣಿಯಲ್ಲಿ ನಡಾಲ್ 7–6, 6–3ರಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಸವಾಲು ಮೀರಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನಡಾಲ್ ‘ಟೈ ಬ್ರೇಕರ್’ನಲ್ಲಿ ಮೊದಲ ಸೆಟ್ ಗೆದ್ದರು. ಎರಡನೇ ಸೆಟ್‌ನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಆಡಿ ಏಕಪಕ್ಷೀಯವಾಗಿ ಜಯದ ತೋರಣ ಕಟ್ಟಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.