ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷವೂ ಕಾಡಿದ ಹರ್ಷಲ್

Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹೋದ ವರ್ಷ ಬೆಂಗಳೂರಿನಲ್ಲಿ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ನಲ್ಲಿ ಒಟ್ಟು 9 ವಿಕೆಟ್ ಕಿತ್ತು ಕರ್ನಾಟಕಕ್ಕೆ ಸೋಲಿನ ರುಚಿ ತೋರಿಸಿದ್ದ ಹರಿಯಾಣದ  ಹರ್ಷಲ್ ಪಟೇಲ್ ಸೋಮವಾರ ಹುಬ್ಬಳ್ಳಿಯಲ್ಲಿಯೂ ಕರ್ನಾಟಕದ ಬ್ಯಾಟ್ಸ್‌ಮನ್‌ಗಳಿಗೆ ನುಂಗಲಾರದ ತುತ್ತಾದರು!

ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಬಿ ಗುಂಪಿನ ಲೀಗ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಸೋಮವಾರ ಐದು ವಿಕೆಟ್ ಗೊಂಚಲನ್ನು (21-1-79-5) ತಮ್ಮ ಬುಟ್ಟಿಗೆ ಹಾಕಿಕೊಂಡ ಹರ್ಷಲ್, ಕರ್ನಾಟಕ 272 ರನ್‌ಗಳಿಗೆ ಆಲೌಟ್ ಆಗಲು ಕಾರಣರಾದರು.

ಕೆ.ಎಲ್. ರಾಹುಲ್, ಸಿ.ಎಂ. ಗೌತಮ್, ಎಸ್.ಎಲ್. ಅಕ್ಷಯ್, ರೋನಿತ್ ಮೋರೆ ಮತ್ತು ಕೆ.ಪಿ. ಅಪ್ಪಣ್ಣ ಅವರ ವಿಕೆಟ್ ಕಿತ್ತು ಹರಿಯಾಣ ತಂಡಕ್ಕೆ ಮೊದಲ ಇನಿಂಗ್ಸ್ ಮುನ್ನಡೆ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಓವರಿನ ಆರು ಎಸೆತಗಳಲ್ಲಿಯೂ ಪ್ರಯೋಗ ಮಾಡುತ್ತಿದ್ದ  ಅವರು ಬ್ಯಾಟ್ಸ್‌ಮನ್‌ಗಳನ್ನು ವಿಚಲಿತಗೊಳಿಸುತ್ತಿದ್ದರು.

2011ರ ನವೆಂಬರ್‌ನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಹರ್ಷಲ್, ತಮ್ಮ `ಕ್ವಿಕರ್' ಎಸೆತಗಳ ಮೂಲಕ ಹೆಸರು ಮತ್ತು ವಿಕೆಟ್‌ಗಳನ್ನು ಗಳಿಸುತ್ತಿದ್ದಾರೆ. 12 ಪ್ರಥಮ ದರ್ಜೆ ಪಂದ್ಯಗಳಿಂದ 46 ವಿಕೆಟ್ ಗಳಿಸಿದ್ದಾರೆ.ಇಂಡಿಯನ್ ಪ್ರಿಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವನ್ನು ಪ್ರತಿನಿಧಿಸುವ ಅವರಿಗೆ ಕರ್ನಾಟಕದ ನೆಲದಲ್ಲಿಯೇ ಹೆಚ್ಚಿನ ಯಶಸ್ಸು ಸಿಗುತ್ತಿದೆ. ಮೂಲತಃ ಗುಜರಾತ್‌ನ ಸಾನಂದದವರಾಗಿರುವ ಹರ್ಷಲ್ ಪಟೇಲ್ ಕರ್ನಾಟಕ ತಂಡದ ಪಾಲಿಗೆ ಸತತ ಎರಡನೇ ವರ್ಷವೂ ಕಬ್ಬಿಣದ ಕಡಲೆಯಾಗಿದ್ದಾರೆ.

ಹುಬ್ಬಳ್ಳಿಯನ್ನು ಎಂದಿಗೂ ಮರೆಯಲ್ಲ: ಮಿಶ್ರಾ
ಹರಿಯಾಣ ತಂಡದ ನಾಯಕ ಅಮಿತ್ ಮಿಶ್ರಾ ತಮ್ಮ ಜೀವನದಲ್ಲಿ ಹುಬ್ಬಳ್ಳಿಯನ್ನು ಎಂದಿಗೂ ಮರೆಯುವುದಿಲ್ಲ!ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರು ಚೊಚ್ಚಲ ಶತಕ ದಾಖಲಿಸಿದ್ದು, ಅದನ್ನು ದ್ವಿಶತಕದ ಸಾಧನೆಯವರೆಗೂ ವಿಸ್ತರಿಸಿದ್ದು, ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಗೆ ಭಾರತಕ್ಕೆ ಆಯ್ಕೆಯಾದ ಸುದ್ದಿ ಬಂದ ಮೈದಾನವನ್ನು ಮರೆಯುವುದು ಹೇಗೆ ಸಾಧ್ಯ?

ದಿನದಾಟದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ನಾನು ಕ್ರಿಕೆಟ್ ಆಡುವಷ್ಟು ದಿನ ಹುಬ್ಬಳ್ಳಿ ನಗರದ ಈ ಮೈದಾನವನ್ನು ಮರೆಯುವುದಿಲ್ಲ. ಈ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇನೆ. ನನ್ನ ಬ್ಯಾಟಿಂಗ್ ಮತ್ತು ಬೌಲಿಂಗ್ ಉತ್ತಮಪಡಿಸಿಕೊಳ್ಳಲು ನಿರಂತರವಾಗಿ ಅಭ್ಯಾಸ ಮಾಡಿದ್ದೇನೆ. ಅದರ ಫಲ ಇವತ್ತು ಸಿಕ್ಕಿದೆ' ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT