ನವದೆಹಲಿ (ಪಿಟಿಐ): ಕರ್ನಾಟಕದ ಸುರಭಿ ತಿಪ್ರೆ ಹಾಗೂ ಸೌರಭ್ ಸಾಂಗ್ವೇಕರ್ ಜಕಾರ್ತ್‌ದಲ್ಲಿ ನಡೆಯುತ್ತಿರುವ 7ನೇ ಏಷ್ಯನ್‌ಏಜ್ ಗ್ರೂಪ್ ಈಜು ಚಾಂಪಿಯನ್‌ಷಿಪ್‌ನ 400 ಮೀ. ಹಾಗೂ 200ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು.

ಸೋಮವಾರ ನಡೆದ ಸ್ಪರ್ಧೆಗಳಲ್ಲಿ 400ಮೀ. ಫ್ರೀಸ್ಟೈಲ್‌ನ ಬಾಲಕಿಯರ ವಿಭಾಗದಲ್ಲಿ ಸುರಭಿ ಗುರಿಯನ್ನು 4:26:07ಸೆಕೆಂಡ್‌ಗಳಲ್ಲಿ ಮುಟ್ಟಿದರು. ಕರ್ನಾಟಕದ ಮತ್ತೊಬ್ಬ ಈಜು ಪಟು ಸೌರಭ್ 200ಮೀ. ಫ್ರೀಸ್ಟೈಲ್‌ನಲ್ಲಿ 1:52:77ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚು ಗೆದ್ದರು.

ಸಂದೀಪ್ ಸೆಜ್ವಾಲ್ 50ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ `ಚಿನ್ನ~ದ ಹುಡುಗ ಎನಿಸಿಕೊಂಡರು. ವೀರಧವಳ್ ಖಾಡೆ ಸಹ 100ಮೀ. ಬಟರ್ ಫ್ಲೇನಲ್ಲಿ 54:86 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಮೊದಲಿಗರಾದರು. ಬಾಲಕರ ವಿಭಾಗದ 200 ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ರೆಹಾನ್ ಪೂಂಚಾ (ಕಾಲ: 2:07:76ಸೆ.) ಗೆದ್ದುಕೊಂಡರು.

ಈ ಮೂಲಕ ಈಜು ಚಾಂಪಿಯನ್‌ಷಿಪ್‌ನ ಮೊದಲ ದಿನ ಭಾರತದ ಸ್ಪರ್ಧಿಗಳು ಒಟ್ಟು ಐದು ಪದಕ (ಎರಡು ಚಿನ್ನ ಹಾಗೂ ಮೂರು ಕಂಚು) ಜಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.