ಕೋಲ್ಕತ್ತ: ಕ್ರಿಕೆಟ್ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಈಡನ್ ಗಾರ್ಡನ್ಸ್ ಅಂಗಳದ ಪ್ರಮುಖ ಸ್ಟ್ಯಾಂಡ್ಗಳಿಗೆ ಭಾನು ವಾರ ದಿಗ್ಗಜರ ಹೆಸರುಗಳನ್ನು ನಾಮಕರಣ ಮಾಡಲಾಗಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದ ಬಿಡುವಿನ ವೇಳೆಯಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಮಾಜಿ ನಾಯಕ ಕಪಿಲ್ ದೇವ್ ಅವರು ನಾಮ ಫಲಕಗಳನ್ನು ಅನಾವರಣ ಮಾಡಿದರು.
ಬಿ.ಸಿ. ರಾಯ್ ಕ್ಲಬ್ನ ಬಲ ಭಾಗದಲ್ಲಿರುವ ‘ಸಿ’ ಬ್ಲಾಕ್ಗೆ ಗಂಗೂಲಿ ಹೆಸರಿಡಲಾಗಿದ್ದು, ‘ಎಲ್’ ಬ್ಲಾಕ್ಗೆ ಸಿಎಬಿ ಮಾಜಿ ಅಧ್ಯಕ್ಷ ಜಗ ಮೋಹನ್ ದಾಲ್ಮಿಯ ಮತ್ತು ‘ಡಿ’ ಬ್ಲಾಕ್ಗೆ ಮಾಜಿ ಆಟ ಗಾರ ಪಂಕಜ್ ರಾಯ್ ಅವರ ಹೆಸರುಗಳನ್ನು ಇಡಲಾಗಿದೆ.
ದೋನಿಗೆ ಸನ್ಮಾನ: ಸಮಾರಂಭ ದಲ್ಲಿ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ದೋನಿ ಅವರನ್ನು ಸನ್ಮಾನಿಸ ಲಾಯಿತು. ಕಪಿಲ್ ದೇವ್ ಅವರು ದೋನಿಗೆ ಸ್ಮರಣಿಕೆ ನೀಡಿ ಗೌರವಿಸಿದರು.