ಸಿಡ್ನಿ: ರಿಯೊ ಒಲಿಂಪಿಕ್ಸ್ನ 100 ಮೀ. ಈಜು ಸ್ಫರ್ಧೆಯಲ್ಲಿ ಚಿನ್ನದ ಪದಕ ವಿಜೇತ ಆಸ್ಟ್ರೇಲಿಯಾದ ಕೈಲ್ ಚಾಲ್ಮರ್ಸ್ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಜುಲೈನಲ್ಲಿ ಆರಂಭವಾಗಲಿರುವ ವಿಶ್ವ ಈಜು ಚಾಂಪಿಯನ್ಷಿಪ್ನಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ್ದಾರೆ.
ಚಾಲ್ಮರ್ಸ್ ಅವರಿಗೆ ಅಸಹಜ ರೀತಿಯ ತೀವ್ರ ಹೃದಯ ಬಡಿತ (Supraventricular tachycardia) ತೊಂದರೆಯ ಕಾರಣ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಈ ಸಮಸ್ಯೆಯಿಂದ ಜೀವಕ್ಕೆ ಯಾವುದೇ ತೊಂದರೆ ಇಲ್ಲದಿದ್ದರೂ ಸಹಜ ಜೀವಶೈಲಿ ಇರಲಾರದು.
ಈ ಕುರಿತು ಪ್ರತಿಕ್ರಿಯಿಸಿರುವ 18 ವರ್ಷದ ಕೈಲ್ ಚಾಲ್ಮರ್ಸ್ ‘ನಾನು ಈ ಹಿಂದಿಯೂ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದೆ. ಆದರೆ ದುರದೃಷ್ಟವಶಾತ್ ಸಮಸ್ಯೆ ಬಗೆಹರಿದಿರಲಿಲ್ಲ. ವಿಶ್ವ ಚಾಂಪಿಯನ್ಷಿಪ್ನಿಂದ ದೂರ ಉಳಿಯುವುದು ಕಠಿಣ ನಿರ್ಧಾರ ಎಂದಿದ್ದಾರೆ.