ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಆಸ್ಟ್ರೇಲಿಯಾಕ್ಕೆ ಮಣಿದ ಪಾಕ್‌

Last Updated 19 ಜನವರಿ 2017, 19:30 IST
ಅಕ್ಷರ ಗಾತ್ರ

ಪರ್ತ್‌ : ನಾಯಕ ಸ್ಟೀವನ್‌ ಸ್ಮಿತ್‌ ಅವರ ಶತಕದ ಬಲದಿಂದಾಗಿ ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ವಿರುದ್ಧದ ಮೂರನೇ ಏಕದಿನ ಕ್ರಿಕೆಟ್‌ ಪಂದ್ಯ ದಲ್ಲಿ ಏಳು ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿದೆ.

ಇಲ್ಲಿನ ವೆಸ್ಟರ್ನ್‌ ಆಸ್ಟ್ರೇಲಿಯಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ  ಮೊದಲು ಬ್ಯಾಟ್‌ ಮಾಡಿದ ಪ್ರವಾಸಿ ಪಾಕ್  ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 263 ರನ್ ಗಳಿ ಸಿತು. ಈ ಗುರಿಯನ್ನು ಆತಿಥೇಯರು 45 ಓವರ್‌ಗಳಲ್ಲಿ ಮುಟ್ಟಿ ಐದು ಪಂದ್ಯಗಳ ಸರಣಿಯಲ್ಲಿ 2–1ರಲ್ಲಿ ಮುನ್ನಡೆ ಸಾಧಿಸಿದರು.

ಆರಂಭಿಕ ಬ್ಯಾಟ್ಸ್‌ಮನ್‌ ಶಾರ್ಜೀಲ್‌ ಖಾನ್‌ (50), ಬಾಬರ್‌ ಅಜಮ್‌ (84), ಶೊಯೊಬ್‌ ಮಲಿಕ್ ಮತ್ತು ಉಮರ್‌ ಅಕ್ಮಲ್‌ ಅವರು ತಲಾ 39 ರನ್ ಗಳಿಸಿದ್ದರಿಂದ ಪಾಕ್‌ ತಂಡ ಸಾಧಾರಣ ಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರಾಯಿತು.

ಸ್ಮಿತ್‌ (ಔಟಾಗದೆ 108, 155 ನಿ, 104 ಎ,11 ಬೌಂ,1 ಸಿ ) ಮತ್ತು ಪೀಟರ್‌ ಹ್ಯಾಂಡ್ಸ್‌ಕೊಂಬ್‌ (82)  ಮೂರನೇ ವಿಕೆಟ್‌ಗೆ 29.3 ಓವರ್‌ಗಳಲ್ಲಿ 183 ರನ್ ಕಲೆ ಹಾಕಿ ಗೆಲುವಿನ ಹಾದಿ ಸುಗಮ ಮಾಡಿದರು.

ಸಂಕ್ಷಿಪ್ತ ಸ್ಕೋರು:
ಪಾಕಿಸ್ತಾನ: 
50 ಓವರ್‌ ಗಳಲ್ಲಿ 7 ವಿಕೆಟ್‌ಗೆ 263 ( ಶಾರ್ಜೀಲ್‌ ಖಾನ್‌ 50, ಬಾಬರ್‌ ಅಜಮ್‌ 84; ಜೋಷ್‌ ಹ್ಯಾಜಲ್‌ವುಡ್‌ 32ಕ್ಕೆ3 ).

ಆಸ್ಟ್ರೇಲಿಯಾ 45  ಓವರ್‌ಗಳಲ್ಲಿ 3  ವಿಕೆಟ್‌ಗೆ 265 (  ಸ್ಟೀವನ್‌ ಸ್ಮಿತ್‌ ಔಟಾಗದೆ 108, ಪೀಟರ್‌ ಹ್ಯಾಂಡ್ಸ್‌ ಕೊಂಬ್‌ 82, ಟ್ರಾವಿಸ್‌ ಹೆಡ್‌ ಔಟಾಗದೆ 23; ಮಹಮ್ಮದ್‌ ಅಮೀರ್‌ 36ಕ್ಕೆ1).

ಫಲಿತಾಂಶ: ಆಸ್ಟ್ರೇಲಿಯಾಕ್ಕೆ 7 ವಿಕೆಟ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT