ಹಾವೇರಿ: ಮಹಿಮಾ ಅಗರ್‌ವಾಲ್ ಹಾಗೂ ಲೀಲಾಲಕ್ಷ್ಮಿ ಅವರು ಜಿಲ್ಲಾ ಹಾಗೂ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ ಮತ್ತು ಲಯನ್ಸ್ ಕ್ಲಬ್ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ರಾಜ್ಯ ಬ್ಯಾಡ್ಮಿಂಟನ್ ಟೂರ್ನಿಯ ಬಾಲಕಿಯರ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಮಹಿಮಾ ಅಗರವಾಲ್ 21-19, 21-23, 21-18 ರಲ್ಲಿ ಉತ್ತರಾಪ್ರಕಾಶ ವಿರುದ್ಧವೂ, ಲೀಲಾಲಕ್ಷ್ಮೀ 21-06, 21-10ರಲ್ಲಿ ಆರ್.ವಿ.ಮೇಘನಾ ಮೇಲೂ ಗೆಲುವು ಪಡೆದು ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟರು. ದಿನದ ಇತರ ಪಂದ್ಯಗಳಲ್ಲಿ ಮೇಘನಾ ಕುಲಕರ್ಣಿ 21-19, 21-12ರಲ್ಲಿ ಪಿ.ಹರ್ಷಿತಾ ಮೇಲೂ, ಸಿಂಧು ಭಾರದ್ವಾಜ್ 21-15, 21-13ರಲ್ಲಿ ಅಶ್ವತಿ ಸತೀಶನ್ ವಿರುದ್ಧವೂ ಜಯ ಪಡೆದರು.

ಪುರುಷರ ಸಿಂಗಲ್ಸ್ ಪಂದ್ಯಗಳಲ್ಲಿ ಫಾಲ್ಗುಣ್ 21-08, 21-13ರಲ್ಲಿ ಆರ್.ಎನ್.ಸೂರಜ್ ಮೇಲೂ, ಆದಿತ್ಯ ಪ್ರಕಾಶ 21-15, 21-8ರಲ್ಲಿ ಪ್ರಭು ದೇಸಾಯಿ ವಿರುದ್ಧವೂ, ಕುಮಾರ ಆದರ್ಶ 21-12, 21-12ರಲ್ಲಿ ರಾಮ ಅರ್ಜುನ ಮೇಲೂ, ಕ್ಯಾಸ್ಟಲಿನೋ ರೋಹನ್ 13-21, 21-14, 21-11ರಲ್ಲಿ ಅಭಿಷೇಕ ಎಲಿಗಾರ ವಿರುದ್ಧವೂ, ಜಗದೀಶ ಯಾದವ 21-10, 19-11, 21-12ರಲ್ಲಿ ಅಮಿತಕುಮಾರ ಮೇಲೂ, ಜವಾಲಕರ ರಾಜೇಶ 21-04. 21-14ರಲ್ಲಿ ಸಾಹಿಲ್ ವಿರುದ್ಧವೂ, ಕಮಲ್ ದೀಪಸಿಂಗ್ 21-13, 21-13ರಲ್ಲಿ ಕಾರ್ತಿಕ ಮೇಲೂ, ವೆಂಕಟೇಶ ಪ್ರಸಾದ 21-19, 21-16ರಲ್ಲಿ ರಾಮೇಶ್ವರ ಮಾಹಾಪಾತ್ರ ಎದುರೂ ಗೆದ್ದು ಕ್ವಾರ್ಟರ್‌ಗೆ ತಲುಪಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.