ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ವಿಶ್ವಾಸವಿತ್ತು

Last Updated 17 ಮೇ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮೊದಲು ಬ್ಯಾಟ್ ಮಾಡಿ ಸಾಧಾರಣ ಮೊತ್ತ ಪೇರಿಸಿದ್ದರೂ, ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನ ವಿಶ್ವಾಸವಿತ್ತು ಎಂದು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ನುಡಿದಿದ್ದಾರೆ.

ವಾಂಖೇಡೆ ಕ್ರೀಡಾಂಗಣದಲ್ಲಿಬುಧವಾರ ನಡೆದ ಪಂದ್ಯದಲ್ಲಿ ನೈಟ್ ರೈಡರ್ಸ್ 32 ರನ್‌ಗಳ ಗೆಲುವು ಪಡೆದಿತ್ತು. ಗೆಲುವಿಗೆ 141 ರನ್‌ಗಳ ಗುರಿ ಬೆನ್ನಟ್ಟಿದ್ದ ಹರಭಜನ್ ಸಿಂಗ್ ಬಳಗ 19.1 ಓವರ್‌ಗಳಲ್ಲಿ 108 ರನ್‌ಗಳಿಗೆ ಆಲೌಟಾಗಿತ್ತು. 15 ರನ್‌ಗಳಿಗೆ ನಾಲ್ಕು ವಿಕೆಟ್ ಪಡೆದ ಸುನಿಲ್ ನರೇನ್ ನೈಟ್ ರೈಡರ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕೋಲ್ಕತ್ತ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 140

ಮುಂಬೈ ಇಂಡಿಯನ್ಸ್ 19.1 ಓವರ್‌ಗಳಲ್ಲಿ 108

ಹರ್ಷಲ್ ಗಿಬ್ಸ್ ಎಲ್‌ಬಿಡಬ್ಲ್ಯು ಬಿ ಇಕ್ಬಾಲ್ ಅಬ್ದುಲ್ಲಾ  13
ಸಚಿನ್ ತೆಂಡೂಲ್ಕರ್ ಬಿ ಸುನಿಲ್ ನರೇನ್  27
ದಿನೇಶ್ ಕಾರ್ತಿಕ್ ಯೂಸುಫ್ ಪಠಾಣ್ ಬಿ ಲಕ್ಷ್ಮೀಪತಿ ಬಾಲಾಜಿ  21
ರೋಹಿತ್  ಸಿ ಬ್ರೆಂಡನ್ ಬಿ ಸುನಿಲ್ ನರೇನ್  12
ಅಂಬಟಿ ರಾಯುಡು ಸ್ಟಂಪ್ಡ್ ಬ್ರೆಂಡನ್ ಮೆಕ್ಲಮ್ ಬಿ ಶಕೀಬ್ ಅಲ್ ಹಸನ್  11
ಕೀರನ್ ಪೋಲಾರ್ಡ್ ಸಿ ಬ್ರೆಂಡನ್ ಮೆಕ್ಲಮ್  ಬಿ ಜಾಕ್ ಕಾಲೀಸ್  08
ಸ್ಮಿತ್ ಎಲ್‌ಬಿಡಬ್ಲ್ಯು ಜಾಕ್ ಕಾಲೀಸ್  00
ಹರಭಜನ್ ಸಿಂಗ್ ಸಿ ಮನೋಜ್ ತಿವಾರಿ ಬಿ ಸುನಿಲ್ ನರೇನ್  01
ಲಸಿತ್ ಮಾಲಿಂಗ ಸಿ ಮನೋಜ್ ತಿವಾರಿ ಬಿ ಲಕ್ಷ್ಮೀಪತಿ ಬಾಲಾಜಿ  08
ರುದ್ರ ಪ್ರತಾಪ್ ಸಿಂಗ್ ಸಿ ಇಕ್ಬಾಲ್ ಅಬ್ದುಲ್ಲಾ ಬಿ ಸುನಿಲ್ ನರೇನ್  03
ಮುನಾಫ್ ಪಟೇಲ್ ಔಟಾಗದೆ  00

ಇತರೆ: (ಲೆಗ್ ಬೈ-2, ವೈಡ್-2)  04

ವಿಕೆಟ್ ಪತನ: 1-26 (ಗಿಬ್ಸ್; 5.6), 2-60 (ತೆಂಡೂಲ್ಕರ್; 10.6), 3-66 (ಕಾರ್ತಿಕ್; 12.5), 4-83 (ರಾಯುಡು; 15.3), 5-96 (ಪೋಲಾರ್ಡ್; 16.4),6-96 (ಸ್ಮಿತ್; 16.5), 7- 97 (ಹರಭಜನ್; 17.1), 8-104 (ಶರ್ಮ; 17.5), 9-108 (ಮಾಲಿಂಗ; 18.6), 10-108 (ಸಿಂಗ್; 19.1).

ಬೌಲಿಂಗ್: ಲಕ್ಷ್ಮೀಪತಿ ಬಾಲಾಜಿ 4-0-11-2, ಶಕೀಬ್ ಅಲ್ ಹಸನ್ 4-0-25-1, ಸುನಿಲ್ ನರೇನ್ 3.1-0-15-4, ಇಕ್ಬಾಲ್ ಅಬ್ದುಲ್ಲಾ 4-0-22-1, ಜಾಕ್ ಕಾಲೀಸ್ 4-0-32-2.

ಫಲಿತಾಂಶ: ಕೋಲ್ಕತ್ತ ನೈಟ್ ರೈಡರ್ಸ್‌ಗೆ 32 ರನ್ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT