ಭಾರಿ ಪೈಪೋಟಿ ಏರ್ಪಟ್ಟಿದ್ದ ಕೊನೆಯ ಲ್ಯಾಪ್ನಲ್ಲಿ ಕುಶ್ ತಮ್ಮ ತಂಡದವರೇ ಆದ ಲಿನಾರ್ಡೊ ಲೊರಾಂಡಿ ಅವರನ್ನು ಹಿಂದಿಕ್ಕಿದರು. ಲೊರಾಂಡಿ `ಬೇಬಿ ರೇಸ್~ನ ಅಗ್ರಮಾನ್ಯ ಚಾಲಕರಾಗಿದ್ದಾರೆ. ಈ ಸ್ಪರ್ಧಿ ಹಿಂದೆ ಸಾಕಷ್ಟು ಸಲ ಇಟಲಿ ಹಾಗೂ ಯುರೋಪ್ ಚಾಂಪಿಯನ್ಷಿಪ್ಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಅವರನ್ನು ಹಿಂದಿಕ್ಕಿ ಕುಶ್ ಈ ಸಾಧನೆ ಮಾಡಿದ್ದಾರೆ ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.