ಚಂಡೀಗಡ (ಪಿಟಿಐ): ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿದ್ದ ಎಸ್. ಚಿಕ್ಕರಂಗಪ್ಪ ಇಲ್ಲಿ ನಡೆಯುತ್ತಿರುವ 111ನೇ ಅಖಿಲ ಭಾರತ ಅಮೆಚೂರ್ ಗಾಲ್ಫ್ ಚಾಂಪಿಯನ್‌ಷಿಪ್‌ನ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಅನುಭವಿಸಿದರು.

ಚಂಡೀಗಡ ಗಾಲ್ಫ್ ಕ್ಲಬ್ ಕೋರ್ಸ್‌ನಲ್ಲಿ ಶುಕ್ರವಾರ ಎಸ್.ಕೆ. ಪಪ್ಪು ಅವರು ಬೆಂಗಳೂರಿನ ಚಿಕ್ಕರಂಗಪ್ಪ ಎದುರು ಅಚ್ಚರಿಯ ಗೆಲುವು ಪಡೆದರು. ಕಳೆದ ಎರಡು ವರ್ಷಗಳಲ್ಲಿ ಚಾಂಪಿಯನ್ ಆಗಿದ್ದ ಚಿಕ್ಕರಂಗಪ್ಪ `ಹ್ಯಾಟ್ರಿಕ್~ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದರು. ಆದರೆ ಅವರ ಕನಸು ಭಗ್ನಗೊಂಡಿದೆ.

ಬೆಂಗಳೂರಿನ ಸಯ್ಯದ್ ಸಕೀಬ್ ಅಹ್ಮದ್ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಬೆಂಗಳೂರಿನವರೇ ಆದ ಖಾಲಿನ್ ಜೋಷಿ ಎದುರು ಗೆದ್ದರು. ಅನುಭವಿ ಗಗನ್ ವರ್ಮಾ ಅವರು ತ್ರಿಶೂಲ್ ಚಿನ್ನಪ್ಪ ವಿರುದ್ಧ ಜಯ ಸಾಧಿಸಿದರು.

ಸೆಮಿಫೈನಲ್‌ನಲ್ಲಿ ಗಗನ್- ಎಸ್.ಕೆ. ಪಪ್ಪು ಮತ್ತು ಅಂಗದ್ ಚೀಮಾ- ಸಕೀಬ್ ಅಹ್ಮದ್ ಪರಸ್ಪರ ಎದುರಾಗುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.