ಜ್ಯೂರಿಚ್ (ಪಿಟಿಐ): ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಮತ್ತು ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಇಲ್ಲಿ ನಡೆ ಯುತ್ತಿರುವ ಜ್ಯೂರಿಚ್ ಚೆಸ್ ಚಾಲೆಂ ಜ್ ಟೂರ್ನಿಯಲ್ಲಿ ಮುಖಾಮುಖಿಯಾ ಗಿದ್ದ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ.

ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಕಳೆದ ವರ್ಷ ಚೆನ್ನೈನಲ್ಲಿ ನಡೆದ ಟೂರ್ನಿಯ ನಂತರ ಇದೇ ಮೊದಲ ಬಾರಿಗೆ ಈ ಜೋಡಿಯ ಸೆಣಸಾಟಕ್ಕೆ ವೇದಿಕೆ ಕಲ್ಪಿಸಿದ್ದ ಮಂಗಳವಾರದ ಪಂದ್ಯ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು.

ಆದರೆ ಟೂರ್ನಿಯ ಕ್ಲಾಸಿಕ್ ಹಂತದ ಐದನೇ ಹಾಗೂ ಅಂತಿಮ ಸುತ್ತಿನ ಪಂದ್ಯದಲ್ಲಿ ಈ ಜೋಡಿ ಡ್ರಾ ಸಾಧಿಸುವುದರೊಂದಿಗೆ ಅಭಿಮಾನಿಗಳ ಮನದಲ್ಲಿ ಗರಿಗೆದರಿದ್ದ ಕುತೂಹಲಕ್ಕೆ ತಣ್ಣೀರೆರಚಿತು.

ಪಂದ್ಯದ ಆರಂಭದಿಂದಲೂ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಆನಂದ್ ಯಾವ ಹಂತದಲ್ಲಿಯೂ ಒತ್ತಡಕ್ಕೆ ಒಳಗಾಗಲಿಲ್ಲ. ಎಲ್ಲಿಯೂ ತಪ್ಪಿಗೆ ಆಸ್ಪದ ನೀಡದೆ ಪಂದ್ಯದುದ್ದಕ್ಕೂ ಸಮಬಲ ಕಾಯ್ದು ಕೊಳ್ಳುವಲ್ಲಿ ಸಫಲರಾದ ಉಭಯ ಆಟ ಗಾರರು ಪಂದ್ಯದ 40ನೇ ನಡೆಯಲ್ಲಿ ಡ್ರಾ ಸಾಧಿಸಿಕೊಳ್ಳಲು ಸಮ್ಮತಿಸಿದರು.

ಇದರೊಂದಿಗೆ 5 ಸುತ್ತಿನ ಕ್ಲಾಸಿಕ್ ಹಂತದಲ್ಲಿ ಒಂದು ಗೆಲುವು ಹಾಗೂ ತಲಾ ಎರಡು ಡ್ರಾ ಮತ್ತು ಸೋಲು ಕಂಡಿದ್ದ ಆನಂದ್ ಒಟ್ಟು ನಾಲ್ಕು ಅಂಕ ಪಡೆದು ಪಾಯಿಂಟ್ ಪಟ್ಟಿಯಲ್ಲಿ ಜಂಟಿಯಾಗಿ ನಾಲ್ಕನೇ ಸ್ಥಾನ ಪಡೆದುಕೊಂಡರು.

ಟೂರ್ನಿಯಲ್ಲಿ ಇದೀಗ ರ್್ಯಾಪಿಡ್ ಹಂತದ 5 ಸುತ್ತಿನ ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು ಪ್ರಶಸ್ತಿ ಪಡೆಯಬೇಕಾದರೆ ಎಲ್ಲಾ ಸುತ್ತಿನಲ್ಲೂ ಆನಂದ್ ಗೆಲುವು ಕಾಣಬೇಕಿದೆ.

ಇನ್ನೊಂದೆಡೆ ಕಾರ್ಲ್ಸನ್ ಈ ಡ್ರಾದೊಂದಿಗೆ ಒಂದು ಪಾಯಿಂಟ್ ಪಡೆದು ಒಟ್ಟು ಅಂಕವನ್ನು 8ಕ್ಕೆ ಏರಿಸಿಕೊಳ್ಳುವ ಮೂಲಕ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದಾರೆ.ದಿನದ ಮತ್ತೊಂದು ಪಂದ್ಯದಲ್ಲಿ ಇಟಲಿಯ ಫಾಬಿಯಾನೊ ಕರುಅನಾ, ಅರ್ಮೇನಿಯಾದ ಲೆವೊನ್ ಆ್ಯರೊನಿಯನ್ ಎದುರು ಗೆದ್ದು ಬೀಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.