ದುಬೈ: ನಿರಂತರ ಎರಡನೇ ಗೆಲುವು ದಾಖಲಿಸಿದ ಭಾರತದ ಪಿ.ವಿ.ಸಿಂಧು ದುಬೈ ಸೂಪರ್ ಸೀರಿಸ್ ಫೈನಲ್ ಬ್ಯಾಡ್ಮಿಂಟನ್ ಟೂರ್ನಿಯ ನಾಕೌಟ್ ಹಂತಕ್ಕೆ ಪ್ರವೇಶಿಸಿದರು.

ಗುರುವಾರ ರಾತ್ರಿ ಇಲ್ಲಿ ನಡೆದ ಗುಂಪು ಹಂತದ ಎರಡನೇ ಪಂದ್ಯದಲ್ಲಿ ಸಿಂಧು 21–13, 21–12ರಲ್ಲಿ ಜಪಾನ್‌ನ ಸಯಾಕ ಸಾಟೊ ಅವರನ್ನು ಮಣಿಸಿದರು.

ಪಂದ್ಯ ಕೇವಲ 36 ನಿಮಿಷಗಳಲ್ಲಿ ಮುಕ್ತಾಯಗೊಂಡಿತು. ಶುಕ್ರವಾರ ನಡೆಯಲಿರುವ ‘ಎ’ ಗುಂಪಿನ ಕೊನೆಯ ಪಂದ್ಯದಲ್ಲಿ ಸಿಂಧು ಜಪಾನ್‌ನ ಅಕಾನೆ ಯಮಗುಚಿ ಅವರನ್ನು ಎದುರಿಸುವರು.

ಶ್ರೀಕಾಂತ್‌ಗೆ ನಿರಾಸೆ
ಕಿದಂಬಿ ಶ್ರೀಕಾಂತ್ ಟೂರ್ನಿಯಿಂದ ಹೊರಬಿದ್ದರು. ಗುರುವಾರ ಮಧ್ಯಾಹ್ನ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಅವರು ಚೀನಾ ಥೈಪೆಯ ಚೋ ಟೀನ್ ಚೆನ್ ಅವರಿಗೆ 21–18, 21–18ರಿಂದ ಮಣಿದರು.

ಗುಂಪು ಹಂತದ ಪಂದ್ಯದಲ್ಲಿ ಅವರಿಗೆ ಇನ್ನೊಂದು ಪಂದ್ಯ ಬಾಕಿ ಇದೆ. ಚೀನಾದ ಶಿ ಯುಗಿ ವಿರುದ್ಧ ನಡೆಯಲಿರುವ ಆ ಪಂದ್ಯದಲ್ಲಿ ಗೆದ್ದರೂ ಮುಂದಿನ ಹಂತಕ್ಕೆ ಸಾಗುವ ಸಾಧ್ಯತೆ ಇಲ್ಲ.

ಗುರುವಾರ ಮೊದಲ ಗೇಮ್‌ನ ಆರಂಭದಲ್ಲೇ ಶ್ರೀಕಾಂತ್ 0–5ರ ಹಿನ್ನಡೆ ಅನುಭವಿಸಿದ್ದರು. ಇದರಿಂದ ಸುಧಾರಿಸಿಕೊಳ್ಳಲಾಗದೆ ನಿರಾಸೆ ಕಂಡರು. ಎರಡನೇ ಗೇಮ್‌ನ ಆರಂಭದಲ್ಲಿ ಪ್ರಭಾವಿ ಆಟವಾಡಿದರು.

ಒಂದು ಹಂತದಲ್ಲಿ 17–14ರ ಮುನ್ನಡೆ ಗಳಿಸಿದರು. ಆದರೆ ಸತತ ಮೂರು ಪಾಯಿಂಟ್ ಕಲೆ ಹಾಕಿದ ಥೈಪೆ ಆಟಗಾರ 17–17ರ ಸಮಬಲ ಸಾಧಿಸಿದರು.

ನಂತರ 18–18ರಿಂದ ಉಭಯ ಆಟಗಾರರು ಸಮಬಲ ಸಾಧಿಸದರು. ಆದರೆ ಮತ್ತೊಮ್ಮೆ ಸತತ ಮೂರು ಪಾಯಿಂಟ್ ಬಾಚಿದ ಎದುರಾಳಿ ಆಟಗಾರ ಗೆದ್ದು ಬೀಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.