ಬೆಂಗಳೂರು: ಅಗ್ರಶ್ರೇಯಾಂಕದ ಆಟಗಾರ ಬಿ.ಆರ್. ನಿಕ್ಷೇಪ್ ಇಲ್ಲಿ ಆರಂಭವಾದ ಆರ್.ಟಿ. ನಾರಾಯಣ್ ಸ್ಮಾರಕ 16 ವರ್ಷ ವಯಸ್ಸಿನೊಳ ಗಿನವರ ರಾಷ್ಟ್ರೀಯ ಜೂನಿಯರ್ ಟೆನಿಸ್ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ಸೋಮವಾರ ನಡೆದ ಬಾಲಕರ ವಿಭಾ ಗದ ಮೊದಲ ಸುತ್ತಿನ ಪಂದ್ಯದಲ್ಲಿ ಕರ್ನಾಟಕದ ನಿಕ್ಷೇಪ್ 6-2, 6-2 ರಲ್ಲಿ ತಮಿಳುನಾಡಿನ ಪ್ರಾಣೇಶ್ ಬಾಬು ಅವರನ್ನು ಮಣಿಸಿದರು.

ಆದಿಲ್ ಕಲ್ಯಾಣ್‌ಪುರ್ ಮತ್ತು ಹರಿ ಸಿಂಗ್ ಅವರೂ ಶುಭಾರಂಭ ಮಾಡಿದರು. ಆದಿಲ್ 6-1, 6-4 ರಲ್ಲಿ ಟಿ. ಶಶಾಂಕ್ ಮೇಲೂ, ಹರಿ ಸಿಂಗ್ 6-2, 6-1 ರಲ್ಲಿ ಬಿ. ಮಾಹಿತ್ ಎದುರೂ ಜಯ ಪಡೆದರು.

ಬಾಲಕರ ವಿಭಾಗದ ಇತರ ಪಂದ್ಯಗಳಲ್ಲಿ ಸಿದ್ಧಾರ್ಥ್ ಗೌಡ 6-3, 6-3 ರಲ್ಲಿ ಕೃಷ್ಣ ಸಾಯಿ ಎದುರೂ, ಅಭಿನವ್ ಸಂಜೀವ್ 6-3, 6-3 ರಲ್ಲಿ ಭರತ್ ನಿಶೋಕ್ ಮೇಲೂ, ಧ್ರುವ್ ಸುನೀಶ್ 6-3, 6-1 ರಲ್ಲಿ ಅನಿರುದ್ಧ್ ಮೂರ್ತಿ ವಿರುದ್ಧವೂ ಜಯ ಸಾಧಿಸಿದರು.

ಬಾಲಕಿಯರ ವಿಭಾಗದಲ್ಲಿ ಮೊದಲ 16 ಶ್ರೇಯಾಂಕಿತ ಆಟಗಾರ್ತಿಯರು ಮೊದಲ ಸುತ್ತಿನಲ್ಲಿ ‘ಬೈ’ ಪಡೆದರು. ಶಿವಾನಿ ಮಂಜಣ್ಣ 6-1, 6-2 ರಲ್ಲಿ ನಿಶಾ ಶೆಣೈ ಎದುರೂ, ಲತಿಕಾ ಪ್ರೇಮಕುಮಾರ್ 6-2, 6-4 ರಲ್ಲಿ ಧ್ವನಿ ಕುಮಾರ್ ಮೇಲೂ, ನಿಕಿತಾ ಪಿಂಟೊ 6-1, 6-2 ರಲ್ಲಿ ಈಶ್ವರಿ ವಿರುದ್ಧವೂ ಜಯ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.