ಬೆಂಗಳೂರು: ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿ ಟಿವಿಎಸ್ ಮೋಟಾರ್, ವಿಶೇಷವಾಗಿ ಪುರುಷರಿ ಗೆಂದೇ ಅಭಿವೃದ್ಧಿಪಡಿಸಿದ ‘ಜ್ಯುಪಿಟರ್’ ಸ್ಕೂಟರನ್ನು ಇಲ್ಲಿ ಶುಕ್ರವಾರ ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
‘ದೇಶದ ಒಟ್ಟಾರೆ ಸ್ಕೂಟರ್ ಮಾರುಕಟ್ಟೆಯಲ್ಲಿ ಮಹಿಳಾ ಗ್ರಾಹಕರ ಪಾಲು ಶೇ 29ರಷ್ಟಿದೆ. ಪುರುಷ–ಮಹಿಳೆ ಇಬ್ಬರೂ ಬಳಸಬಹು-ದಾದ ಸ್ಕೂಟರ್ ಮಾರುಕಟ್ಟೆ ಗಾತ್ರ ಶೇ 35ರಷ್ಟಿದೆ. ಪುರುಷರಿಗಾಗಿಯೇ ಇರುವ ಸ್ಕೂಟರ್ ಗಳ ಮಾರುಕಟ್ಟೆ ಶೇ 36ರಷ್ಟು ಪ್ರಗತಿ ಕಾಣುತ್ತಿದೆ. ತ್ವರಿತವಾಗಿ ಬೆಳೆಯುತ್ತಿ ರುವ ಈ ವಲಯ ಗಮನದಲ್ಲಿಟ್ಟು ಕೊಂಡು ‘ಜ್ಯುಪಿಟರ್’ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಟಿವಿಎಸ್ ಮೋಟಾರ್ನ ಮಾರುಕಟ್ಟೆ ಉಪಾಧ್ಯಕ್ಷ ಜೆ.ಶ್ರೀನಿವಾಸನ್ ಹೇಳಿದರು.
ಬೆಂಗಳೂರಿನಲ್ಲಿ ‘ಜ್ಯುಪಿಟರ್’ ಎಕ್ಸ್ ಷೋರೂಂ ಬೆಲೆ ರೂ.48 ಸಾವಿರ. ಮೊಬೈಲ್ ಚಾರ್ಜರ್, ಪಾಸ್ ಬೈ ಸ್ವಿಚ್, ಎಕೊ ಮೋಡ್ ಸೇರಿದಂತೆ ಹೊಸ ತಲೆಮಾರಿನ 20ಕ್ಕೂ ಹೆಚ್ಚು ತಂತ್ರಜ್ಞಾನಗಳು ಇದರಲ್ಲಿವೆ. ಪೂರ್ಣ ಅಲ್ಯುಮಿನಿಯಂನಿಂದ ತಯಾರಾದ ಈ ಸ್ಕೂಟರ್ ಚಾಲನೆ ವೇಳೆ ಶಬ್ದ ಹೊರಡಿ ಸುವುದಿಲ್ಲ ಎನ್ನುವುದು ಮತ್ತೊಂದು ವಿಶೇಷ ಎಂದರು.