ಬೆಂಗಳೂರು: ಪ್ರಶಾಂತ್ ಅವರ ಏಕೈಕ ಗೋಲಿನ ನೆರವಿನಿಂದ ಪೋಸ್ಟಲ್ ತಂಡ ಬಿಡಿಎಫ್ಎ ವತಿಯಿಂದ ಇಲ್ಲಿ ನಡೆಯುತ್ತಿರುವ ‘ಬಿ’ ಡಿವಿಷನ್ ಲೀಗ್ ಫುಟ್ಬಾಲ್ ಪಂದ್ಯದಲ್ಲಿ ಶುಕ್ರವಾರ ಜಯದಾಖಲಿಸಿದೆ.
ಪೋಸ್ಟಲ್ 1–0 ಗೋಲಿನಿಂದ ಬ್ಲಿಟ್ಜ್ ತಂಡದ ಎದುರು ಗೆದ್ದಿದೆ. ವಿಜಯೀ ತಂಡದ ಪ್ರಶಾಂತ್ (36ನೇ ನಿ.) ಏಕೈಕ ಗೋಲು ದಾಖಲಿಸಿದರು.
ದಿನದ ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ಮಾರ್ಸ್ ಎಫ್ಸಿ 1–1 ಗೋಲಿನಿಂದ ವೆಹಿಕಲ್ಸ್ ಎಫ್ಸಿ ಎದುರು ಡ್ರಾ ಮಾಡಿಕೊಂಡಿದೆ.