ಬೆಂಗಳೂರು: ಸುನಿಲ್ ಚೆಟ್ರಿ ನಾಯಕತ್ವದ ಬಿಎಫ್‌ಸಿ ಬಳಗವು ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಎಎಫ್‌ಸಿ (ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಷನ್) ಕಪ್ ಟೂರ್ನಿಯ ಇ ಗುಂಪಿನ ಫುಟ್‌ಬಾಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ನ್ಯೂ ರೇಡಿಯಂಟ್ ವಿರುದ್ಧ ಆಡಲಿದೆ.

ಬಿಎಫ್‌ಸಿ ತಂಡವು ಟೂರ್ನಿಯ ಮೊದಲ ಎರಡೂ ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಒಟ್ಟು ನಾಲ್ಕು ಗೋಲುಗಳನ್ನು ಗಳಿಸಿದೆ. ಒಂದು ಗೋಲು ಬಿಟ್ಟುಕೊಟ್ಟಿದೆ. ರೇಡಿಯಂಟ್ ತಂಡವೂ ಎರಡೂ ಪಂದ್ಯಗಳಲ್ಲಿ ಗೆದ್ದಿದೆ. ಆದ್ದರಿಂದ ಈ ಹಣಾಹಣಿಯು ರೋಚಕವಾಗುವ ನಿರೀಕ್ಷೆ ಇದೆ.

‘ನ್ಯೂ ರೇಡಿಯಂಟ್ ತಂಡದಲ್ಲಿ ಉತ್ತಮ ಆಟಗಾರರಿದ್ದಾರೆ. ಅವರು ಐಜ್ವಾಲ್ ಎಫ್‌ಸಿ ವಿರುದ್ಧ ಆಡಿದ್ದನ್ನು ನೋಡಿದ್ದೇನೆ. ಎದುರಾಳಿ ತಂಡದ ಬಲ ಮತ್ತು ದೌರ್ಬಲ್ಯಗಳನ್ನು ಗುರುತಿಸಿ ದಾಳಿ ಮಾಡುವ ಚಾಣಾಕ್ಷತೆ ಅವರಲ್ಲಿದೆ. ಆದ್ದರಿಂದ ನಾವು ಕೂಡ ಯೋಜನಾಬದ್ಧವಾಗಿ ಆಡಬೇಕು’ ಎಂದು ತಂಡದ ಕೋಚ್ ಅಲ್ಬರ್ಟ್ ರೋಕಾ ಹೇಳಿದ್ದಾರೆ.

ರೇಡಿಯಂಟ್ ತಂಡದ ಎದುರು ಇದುವರೆಗೆ ಬಿಎಫ್‌ಸಿಯು ಆಡಿದ ಆರು ಪಂದ್ಯಗಳಲ್ಲಿಯೂ ಜಯಿಸಿದೆ. ಐಜ್ವಾಲ್ ಎದುರು 3–1 ಗೋಲುಗಳಿಂದ, ಅಬಹಾನಿ ತಂಡದ ಎದುರು 1–0ಯಿಂದ ಜಯಿಸಿತ್ತು. ರೇಡಿಯಂಟ್ ತಂಡವು 2005ರಲ್ಲಿ ಎಎಫ್‌ಸಿ ಕಪ್ ಸೆಮಿಫೈನಲ್‌ನಲ್ಲಿ ಆಡಿತ್ತು. ತಂಡದ ಸ್ಟ್ರೈಕರ್ ಅಲಿ ಅಷ್ಫಾಕ್ ಪಂಧ್ಯದ ಫಲಿತಾಂಶವನ್ನು ತಮ್ಮ ತಂಡದ ಪರ ತಿರುಗಿಸಬಲ್ಲ ಸಮರ್ಥರು.

ಆದರೆ ಬಿಎಫ್‌ಸಿಯ ಸೆಂಟ್ರಲ್ ಡಿಫೆಂಡರ್ ಜುನಾನ್ ಗೋಂಜ್ವಾಲೆಜ್ ಕಣಕ್ಕಿಳಿಯುವುದು ಅನುಮಾನ. ಆದ್ದರಿಂದ ನಾಯಕ ಸುನಿಲ್ ಚೆಟ್ರಿ ಹೆಚ್ಚಿನ ಹೊಣೆ ನಿಭಾಯಿಸುವ ಒತ್ತಡವಿದೆ. ಈಚೆಗೆ ಇದೇ ಅಂಗಳದಲ್ಲಿ ನಡೆದಿದ್ದ ಐಎಸ್‌ಎಲ್ ಫೈನಲ್‌ನಲ್ಲಿ ಬಿಎಫ್‌ಸಿ ತಂಡವು ಚೆನ್ನೈಯಿನ್ ಎಫ್‌ಸಿ ಎದುರು ಸೋತಿತ್ತು. ಇದೀಗ ಆ ಕಹಿ ಮರೆತು ಜಯದ ಛಲದೊಂದಿಗೆ ಕಣಕ್ಕಿಳಿಯುತ್ತಿದೆ.

ತಂಡಗಳು

ಬಿಎಫ್‌ಸಿ: ಸುನಿಲ್ ಚೆಟ್ರಿ (ನಾಯಕ),ಗುರುಪ್ರೀತ್ ಸಿಂಗ್ ಸಂಧು (ಗೋಲ್‌ಕೀಪರ್), ರಾಹುಲ್ ಭೆಕೆ, ಕಾಲಿನ್ ಅಬ್ರಾಂಚೆಸ್, ಜೊಮಿಂಗ್ಲಾನಾ ರಾಲ್ಟೆ, ಜುನಾನ್ ಜಾನ್ ಜಾನ್ಸನ್, ಮಿಕು, ಲೆನಿ ರಾಡ್ರಿಗಸ್,, ಹರ್ಮನ್‌ಜ್ಯೋತ್ ಖಾಬ್ರಾ, ಡೇನಿಯಲ್ ಸೆಗೊವಿಯ. ದಿಮಾಸ್ ಡೆಲ್ಗಾಡೊ, ಶುಭಾಶಿಶ್ ಬೋಸ್, ಎರಿಕ್ ಪಾರ್ಟಲು, ಬೊತಾಂಗ್ ಹಾಕಿಪ್, ತಾಂಕೊಸಿಮ್ ಹಾಕಿಪ್, ರಾಘವ್ ಗುಪ್ತಾ, ವಿದ್ಯಾನಂದ ಸಿಂಗ್, ವಿಕ್ಟರ್ ಪೆರೆಜ್ ಅಲೊನ್ಸೊ, ಲಿಯಾನ್ ಆಗಸ್ಟಿನ್, ರಾಬಿನ್ಸನ್ ಸಿಂಗ್, ಕ್ಯಾಲ್ವಿನ್ ಅಭಿಷೇಕ್, ಡೇನಿಯಲ್ ಲಾಲಿಂಪುಯಾ, ಅಬ್ರಾ ಮಂಡಲ್. ನಿಶುಕುಮಾರ್. ಉದಾಂತ್ ಸಿಂಗ್, ಕೋಚ್: ಅಲ್ಬರ್ಟ್ ರೋಕಾ

ನ್ಯೂ ರೇಡಿಯಂಟ್: ಅಲಿ ಅಷ್ಫಾಕ್ (ನಾಯಕ), ಇಮ್ರಾನ್ ಮೊಹಮ್ಮದ್, ಮೊಹಮ್ಮದ್ ಫೈಸಲ್, ಹಸನ್ ಅಬ್ದುಲ್ ಹಕೀಂ (ಗೋಲ್‌ಕೀಪರ್), ಜಾರ್ಜ್ ಗೊಟೊರ್ ಬೈಸ್, ಅಹ್ಮದ್ ಅಬ್ದುಲ್ಲಾ, ರಿಜ್ವಾನ್ ವಾಹೀದ್, ಇಸ್ಲಾಂ ಅಮೀರಿ, ಮೊಹಮ್ಮದ್ ರಶೀದ್, ಹಿಸಾಮ್ ಸಲೀಮ್ (ಎಲ್ಲರೂ ಡಿಫೆಂಡರ್ಸ್), ಅಲಿ ಫಾಸಿರ್ (ಉಪನಾಯಕ). ರೂಜ್ ಪಾಜ್ ಆಂಗ್, ಅಕ್ರಮ್ ಅಬ್ದುಲ್ ಗಣಿ, ಇಮ್ರಾನ್ ನಶೀದ್, ಹಮ್ಜಾ ಮೊಹಮ್ಮದ್, ಅಲಿ ಶಾಮಿಯು, ಮಹಮದ್ ಉಮೇರ್, ರಿಯಾಮ್ ಅಬ್ದುಲ್ ಗಣಿ (ಮಿಡ್‌ಫೀಲ್ಡರ್ಸ್), ಇಬ್ರಾಹಿಂ ಅತೀಕ್ ಹಸನ್, ಗುಲೇಮ್ ಮಾರ್ತಿ ಮಿಸುತ್, ಹಸನ್ ಅದುಹಮ್ (ಫಾರ್ವರ್ಡ್)

ಸಮಯ – ರಾತ್ರಿ 8.00

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.