ಪ್ಯಾರಿಸ್: ಇಲ್ಲಿ ನಡೆದ ಫ್ರೆಂಚ್ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗುರುವಾರ ಭಾರತದ ಭರವಸೆ ಆಟಗಾರ ಕಿದಂಬಿ ಶ್ರೀಕಾಂತ್ ಹಾಗೂ ಪಿ.ವಿ. ಸಿಂಧು ಶುಭಾರಂಭ ಮಾಡಿದ್ದು, ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಇತ್ತೀಚಿಗೆ ಮುಕ್ತಾಯಗೊಂಡ ಡೆನ್ಮಾರ್ಕ್ ಓಪನ್ ಸೂಪರ್ ಸರಣಿ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಿದಂಬಿ ಶ್ರೀಕಾಂತ್ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದರು.
ಜರ್ಮನಿ ಆಟಗಾರ ಫ್ಯಾಬಿಯನ್ ರೋತ್ ಹಾಗೂ ಶ್ರೀಕಾಂತ್ ನಡುವೆ ನಡೆಯುತ್ತಿದ ಪಂದ್ಯದಲ್ಲಿ(0–3) ಆಟದ ಮಧ್ಯೆ ಫ್ಯಾಬಿಯನ್ ರೋತ್ ನಿವೃತ್ತಿ ಘೋಷಿಸಿದ ಕಾರಣ ಶ್ರೀಕಾಂತ್ಗೆ ಜಯ ಲಭಿಸಿತು.
ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ವಿಶ್ವ ಚಾಂಪಿಯನ್ಸ್ ಸ್ಪೇನ್ ಆಟಗಾರ್ತಿ ಬೀಟ್ರಿಜ್ ಕಾರ್ರಲಾಸ್ ವಿರುದ್ಧ ಪಿ.ವಿ.ಸಿಂಧು 21–12, 21–14ರಲ್ಲಿ ನೇರ ಗೇಮ್ಗಳಿಂದ ಜಯ ಸಾಧಿಸಿದರು.