ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿಯಲ್ಲೇ ಉಳಿದ ನಿಶುಕುಮಾರ್‌

Last Updated 21 ಜುಲೈ 2017, 19:51 IST
ಅಕ್ಷರ ಗಾತ್ರ

ಬೆಂಗಳೂರು: ರಕ್ಷಣಾ ವಿಭಾಗದ ಆಟಗಾರ ನಿಶುಕುಮಾರ್‌ ಮತ್ತು ಮಿಡ್‌ಫೀಲ್ಡರ್‌ ಮಲಸಾಂಜುವಲ ಅವರನ್ನು ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ ತನ್ನಲ್ಲೇ ಉಳಿಸಿಕೊಂಡಿದೆ.

‘ಇಂಡಿಯನ್‌ ಸೂಪರ್‌ ಲೀಗ್‌ನ ನಿಯಮದ ಅನುಸಾರ ನಾವು ನಿಶು ಮತ್ತು ಮಲಸಾಂಜುವಲ ಅವರನ್ನು ತಂಡದಲ್ಲೇ ಉಳಿಸಿಕೊಂಡಿದ್ದೇವೆ. 2017–18ನೇ ಸಾಲಿನ ವರೆಗೂ ಇವರು ತಂಡದ ಭಾಗವಾಗಿರಲಿದ್ದಾರೆ. ಇವರ ಜೊತೆ ಡೇನಿಯಲ್‌ ಲಾಲಿಂಪುಯಿಯಾ ಅವರೂ ತಂಡದಲ್ಲಿ ಇರಲಿದ್ದಾರೆ’ ಎಂದು ಬಿಎಫ್‌ಸಿ ಮುಖ್ಯ ಕೋಚ್‌ ಅಲ್ಬರ್ಟ್‌ ರೋಕಾ ತಿಳಿಸಿದ್ದಾರೆ.

ಡೇನಿಯಲ್‌ ಮತ್ತು ನಿಶು ಅವರು 23 ವರ್ಷದೊಳಗಿನವರ ಎಎಫ್‌ಸಿ ಚಾಂಪಿಯನ್‌ಷಿಪ್‌ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದು, ಪ್ರಸ್ತುತ ಕತಾರ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT