ದುಬೈ: ಜೂನ್‌ನಲ್ಲಿ ಆರಂಭವಾಗುವ ಫಿಫಾ ಫುಟ್‌ಬಾಲ್ ವಿಶ್ವಕಪ್‌ನಲ್ಲಿ ಬ್ರೆಜಿಲ್ ತಂಡ ಗೆಲ್ಲುವ ವಿಶ್ವಾಸವಿದೆ ಎಂದು ಆ ರಾಷ್ಟ್ರದ ಹಿರಿಯ ಫುಟ್‌ಬಾಲ್ ಆಟಗಾರ ಪೆಲೆ ಹೇಳಿದ್ದಾರೆ.

ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಬ್ರೆಜಿಲ್‌ನ ನೇಮರ್ ಮೇಲೆ ಹೆಚ್ಚಿನ ಭರವಸೆ ಇದೆ ಎಂದು ತಿಳಿಸಿದ್ದಾರೆ.

ರಷ್ಯಾದಲ್ಲಿ ನಡೆಯುವ ಈ ಸಲದ ವಿಶ್ವಕಪ್‌ನಲ್ಲಿ ಬ್ರೆಜಿಲ್ ತಂಡವನ್ನು ನೇಮರ್ ಮುನ್ನೆಡಸಬಹುದು ಎಂದು ಅವರು ತಿಳಿಸಿದ್ದಾರೆ.

‘ಈ ಸಲದ ವಿಶ್ವಕಪ್‌ನಲ್ಲಿ ಏನಾಗುತ್ತದೆ ಎಂಬುದು ಗೊತ್ತಿಲ್ಲ. ಆದರೆ, ವಿಶ್ವಕಪ್ ಆರಂಭವಾಗುವ ಹೊತ್ತಿಗೆ ನೇಮರ್ ಗುಣಮುಖರಾಗಲಿದ್ದಾರೆ. ಅವರ ಗಾಯವು ಅಂತಹ ಗಂಭೀರ ಸ್ವರೂಪದ್ದಲ್ಲ’ ಎಂದೂ ತಿಳಿಸಿದ್ದಾರೆ.

‘ಆಟಗಾರರಲ್ಲಿ ವಿಶ್ವಾಸ ತುಂಬಲು ತಂಡದ ನೂತನ ಕೋಚ್ ಟಿಟೆ ಅವರು ಹಲವು ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ನಮ್ಮಲ್ಲಿ ಶ್ರೇಷ್ಠ ದರ್ಜೆಯ ಆಟಗಾರರಿದ್ದಾರೆ. ಆದರೆ, ಒಂದು ತಂಡವಾಗಿ ಎದುರಾಳಿಯ ಸವಾಲನ್ನು ಮೆಟ್ಟಿ ನಿಲ್ಲುವುದು ಅಗತ್ಯ’ ಎಂದು ಅವರು ಅಭಿಪ್ರಾಯಪಟ್ಟಿದ್ಧಾರೆ.

‘ಅರ್ಜೆಂಟಿನಾ, ಜರ್ಮನಿ, ಫ್ರಾನ್ಸ್ ಹಾಗೂ ಇಂಗ್ಲೆಂಡ್ ತಂಡಗಳು ಈ ಸಲದ ಕಪ್ ಗೆಲ್ಲುವ ಸಾಮರ್ಥ್ಯ ಹೊಂದಿವೆ. ಆದರೂ, ಫುಟ್‌ಬಾಲ್ ಹಲವು ಅಚ್ಚರಿಗಳಿಂದ ಕೂಡಿದ ಆಟ’ ಎಂದು ತಿಳಿಸಿದ್ದಾರೆ.

ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ನೇಮರ್ ಅವರು ಸದ್ಯ ವಿಶ್ರಾಂತಿಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.