ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ - ನ್ಯೂಜಿಲೆಂಡ್ ಪಂದ್ಯ ಡ್ರಾ

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಲಿಂಕನ್, ನ್ಯೂಜಿಲೆಂಡ್ (ಪಿಟಿಐ): ಭಾರತ `ಎ~ ಮತ್ತು ನ್ಯೂಜಿಲೆಂಡ್ `ಎ~ ತಂಡಗಳ ನಡುವಿನ ಎರಡನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.

ಕೊನೆಯ ದಿನವಾದ ಶನಿವಾರ ಭಾರತ ತಂಡ 64.1 ಓವರ್‌ಗಳಲ್ಲಿ 4 ವಿಕೆಟ್‌ಗೆ 246 ರನ್ ಗಳಿಸಿ ತನ್ನ ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆಕರ್ಷಕ ಶತಕ ಗಳಿಸಿದ ಅಭಿನವ್ ಮುಕುಂದ್ (ಅಜೇಯ 132) ಗಮನ ಸೆಳೆದರು. ಮುಕುಂದ್ 56 ರನ್‌ಗಳಿಂದ ಆಟ ಆರಂಭಿಸಿದ್ದರು.

ಗೆಲುವಿಗೆ 377 ರನ್ ಗಳಿಸುವ ಗುರಿ ನ್ಯೂಜಿಲೆಂಡ್ `ಎ~ ತಂಡದ ಮುಂದಿತ್ತು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಕೇವಲ ಮೂರು ಎಸೆತಗಳನ್ನು ಎದುರಿಸಿದ ಬಳಿಕ ಪಂದ್ಯವನ್ನು ಡ್ರಾದಲ್ಲಿ ಕೊನೆಗೊಳಿಸಲು ನಿರ್ಧರಿಸಲಾಯಿತು. ಸರಣಿಯ ಮೊದಲ ಪಂದ್ಯವೂ ಡ್ರಾದಲ್ಲಿ ಅಂತ್ಯಗೊಂಡಿತ್ತು.

ಸಂಕ್ಷಿಪ್ತ ಸ್ಕೋರ್: ಭಾರತ `ಎ~: ಮೊದಲ ಇನಿಂಗ್ಸ್ 118 ಓವರ್‌ಗಳಲ್ಲಿ 8 ವಿಕೆಟ್‌ಗೆ 554 ಡಿಕ್ಲೇರ್ಡ್ ಮತ್ತು ಎರಡನೇ ಇನಿಂಗ್ಸ್ 64.1 ಓವರ್‌ಗಳಲ್ಲಿ 4 ವಿಕೆಟ್‌ಗೆ 246 ಡಿಕ್ಲೇರ್ಡ್ (ಅಭಿನವ್ ಮುಕುಂದ್ ಔಟಾಗದೆ 132, ಉನ್ಮುಕ್ತ್ ಚಾಂದ್ 44, ಅನುಸ್ತಪ್ ಮಜುಮ್ದಾರ್ 32, ಜಾರ್ಜ್ ವರ್ಕರ್ 99ಕ್ಕೆ 3). ನ್ಯೂಜಿಲೆಂಡ್ `ಎ~: ಮೊದಲ ಇನಿಂಗ್ಸ್ 100 ಓವರ್‌ಗಳಲ್ಲಿ 7 ವಿಕೆಟ್‌ಗೆ 424 ಡಿಕ್ಲೇರ್ಡ್ ಮತ್ತು ಎರಡನೇ ಇನಿಂಗ್ಸ್ 0.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 0.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT