ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಜಯ

ಮಹಿಳಾ ಹಾಕಿ: ಏಳು ಗೋಲು ಗಳಿಸಿದ ರಾಣಿ
Last Updated 21 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕೌಲಾಲಂಪುರ (ಪಿಟಿಐ): ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಲು ಪ್ರಯತ್ನಿಸುತ್ತಿರುವ ಭಾರತ ತಂಡದವರು ಎಂಟನೇ ಏಷ್ಯಾಕಪ್‌ ಮಹಿಳಾ ಹಾಕಿ ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದ್ದಾರೆ.

ಶನಿವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಭಾರತ ತಂಡದವರು 13-0 ಗೋಲುಗಳಿಂದ ಹಾಂಕಾಂಗ್‌ ತಂಡವನ್ನು ಸೋಲಿಸಿದರು. ಪಂದ್ಯದ ಮೇಲೆ ಪೂರ್ಣ ಪಾರಮ್ಯ ಮೆರೆದ ಭಾರತ ತಂಡದವರು ವಿರಾಮದ ವೇಳೆಗೆ 8-0 ಗೋಲುಗಳಿಂದ ಮುಂದಿದ್ದರು. ದ್ವಿತೀಯಾರ್ಧದಲ್ಲಿ  ಮತ್ತೆ ಐದು ಗೋಲು ಗಳಿಸಿದರು.

ಸ್ಟೈಕರ್‌ ರಾಣಿ (2ನೇ, 6ನೇ, 23ನೇ, 24ನೇ, 26ನೇ, 34ನೇ ಹಾಗೂ 58ನೇ ನಿಮಿಷ) ಗೋಲು ಗಳಿಸಿ ಎದುರಾಳಿಯನ್ನು ಕಾಡಿದರು. ವಂದನಾ ಕಟಾರಿಯಾ (13ನೇ, 18ನೇ ಹಾಗೂ 3ನೇ ನಿಮಿಷ), ಪೂನಮ್‌ ರಾಣಿ (69ನೇ ನಿ.) ಮತ್ತು ಜೈದೀಪ್‌ ಕೌರ್‌ (70ನೇ ನಿ.) ಚೆಂಡನ್ನು ಗುರಿ ಸೇರಿಸಿದರು.

ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡದವರು ಚೀನಾ ಎದುರು ಆಡಲಿದ್ದಾರೆ. ಸೆಪ್ಟೆಂಬರ್‌ 24ರಂದು ಮಲೇಷ್ಯಾ ಎದುರು ಪೈಪೋಟಿ ನಡೆಸಲಿದ್ದಾರೆ.

ಭಾರತ ತಂಡದವರು ಈ ಟೂರ್ನಿಯಲ್ಲಿ ಚಾಂಪಿಯನ್‌ ಆದರೆ ಮಾತ್ರ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸ ಲಿದ್ದಾರೆ. ವಿಶ್ವಕಪ್‌ 2014ರ ಮೇ 31 ರಿಂದ ಜೂನ್‌ 14ರವರೆಗೆ ಹಾಲೆಂಡ್‌ನ ಹೇಗ್‌ನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT