ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಲ್ಬರ್ನ್‌ನಲ್ಲಿ ಸಂಭ್ರಮ

ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆ
Last Updated 30 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್‌ (ಎಪಿ/ಐಎಎನ್‌ಎಸ್‌): ವಿಶ್ವಕಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ತಂಡವನ್ನು ಬಗ್ಗುಬಡಿದು ವಿಶ್ವ ಸಾಮ್ರಾಟನಾಗಿರುವ ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ಸೋಮವಾರ ಇಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ನಾಯಕ ಮೈಕಲ್‌ ಕ್ಲಾರ್ಕ್‌ ವಿಶ್ವಕಪ್‌ ಟ್ರೋಫಿಯೊಂದಿಗೆ ತಂಡದ ಸಹ ಆಟಗಾರರೊಡನೆ ಫೆಡರೇಷನ್‌ ಸ್ಕ್ವೇರ್‌ ಬಳಿ ನಿರ್ಮಿಸಲಾಗಿದ್ದ ಸಾರ್ವಜನಿಕ ವೇದಿಕೆ ಏರಿದಾಗ ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳ ಕರತಾಡನ ಮುಗಿಲು ಮುಟ್ಟಿತ್ತು. ಎಲ್ಲರೂ ಚಪ್ಪಾಳೆ, ಶಿಳ್ಳೆ, ಕೇಕೆಗಳೊಂದಿಗೆ ಆಟಗಾರರನ್ನು ಅಭಿನಂದಿಸಿದರು.

ಬಳಿಕ ಮಾತನಾಡಿದ ಕ್ಲಾರ್ಕ್‌ ‘ಈ ಅಪೂರ್ವ ಕ್ಷಣವನ್ನು ನಾವೆಲ್ಲಾ ಎದುರು ನೋಡುತ್ತಿದ್ದೆವು. ಮತ್ತೊಮ್ಮೆ ಟ್ರೋಫಿ ಗೆಲ್ಲಬೇಕೆಂಬ ಕನಸು ಈಗ ಸಾಕಾರ ಗೊಂಡಿದೆ’ ಎಂದರು.

‘ಬೆಳಿಗ್ಗೆ 10:30ರವರೆಗೂ ಸಂಭ್ರಮದ ಗುಂಗಿನಿಂದ ಹೊರ ಬಂದಿ ರಲಿಲ್ಲ’ ಎಂದು ಆ್ಯರನ್‌ ಫಿಂಚ್‌ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT