ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ವಂತ್‌ ರವಿಗೆ ಪ್ರಶಸ್ತಿ: ರಾಜ್ಯದ ಹರ್ಷ ರನ್ನರ್ಸ್ ಅಪ್

Last Updated 29 ಜನವರಿ 2016, 19:51 IST
ಅಕ್ಷರ ಗಾತ್ರ

ಕಲಬುರ್ಗಿ: ತಮಿಳುನಾಡಿನ ರಸ್ವಂತ್‌ ರವಿ ಇಲ್ಲಿ ನಡೆಯುತ್ತಿರುವ ‘ಝೆಸ್ಟ್ ಕ್ಲಬ್ ಓಪನ್ 2016 ಎಐಟಿಎ ಪುರುಷರ 50ಕೆ’ ರ್‍ಯಾಂಕಿಂಗ್ ಟೂರ್ನಿಯ ಚಾಂಪಿ ಯನ್ ಆಗಿ ಹೊರಹೊಮ್ಮಿದ್ದಾರೆ.

ಶುಕ್ರವಾರ ನಡೆದ ರೋಚಕ ಫೈನಲ್‌ ಹಣಾಹಣಿಯಲ್ಲಿ ರಸ್ವಂತ್‌ ರವಿ 6–4,5–7,6–4ರಲ್ಲಿ ಕರ್ನಾಟಕದ ಎಲ್‌. ಹರ್ಷ ವಿರುದ್ಧ ಗೆದ್ದು ಪ್ರಶಸ್ತಿ ಹಾಗೂ ಎಐಟಿಎ 20 ಪಾಯಿಂಟ್‌ಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು. ಮೊದಲ ಸೆಟ್‌        6–4ರಿಂದ ಗೆದ್ದ ರಸ್ವಂತ್‌ ರವಿ ಎರಡನೇ ಸೆಟ್‌ನಲ್ಲಿ ಎಲ್‌. ಹರ್ಷರಿಂದ ತೀವ್ರ ಪ್ರತಿರೋಧ ಎದುರಿಸಿದರು.

ನಾಲ್ಕನೇ ಗೇಮ್‌ವರೆಗೆ ಮುನ್ನಡೆ ಸಾಧಿಸಿದ್ದ ರಸ್ವಂತ್‌ಗೆ ಐದನೇ ಗೇಮ್‌ನಲ್ಲಿ ಸರ್ವಿಸ್‌ ಉಳಿಸಿಕೊಳ್ಳ ಲಾಗದೆ ಗೇಮ್‌ ಕಳೆದುಕೊಂಡರು. ಎಲ್‌ ಹರ್ಷ ಸತತ ಮೂರು ಗೇಮ್‌ ಗಳನ್ನು ಗೆಲ್ಲುವ ಮೂಲಕ ಎರಡನೇ ಸೆಟ್‌ನಲ್ಲಿ ಮುನ್ನಡೆ ಪಡೆದರು.

ಆದರೆ 10ನೇ ಗೇಮ್‌ನಲ್ಲಿ ರಸ್ವಂತ್‌ ಎದುರಾಳಿ ಸರ್ವಿಸ್‌ ಬ್ರೇಕ್‌ ಮಾಡಲು ಅವಕಾಶ ನೀಡದೇ ಸೆಟ್‌ನಲ್ಲಿ ಸಮಬಲ ಪಡೆದರು. 11ನೇ ಗೇಮ್‌ನಲ್ಲಿ ಹರ್ಷ ಸರ್ವಿಸ್‌ ಉಳಿಸಿಕೊಳ್ಳುವ ಮೂಲಕ 6–5ರ ಮಹತ್ವದ ಮುನ್ನಡೆ ಪಡೆದರು.

ನಿರ್ಣಾಯಕ 12ನೇ ಗೇಮ್‌ನಲ್ಲಿ ಹರ್ಷ ಎದುರಾಳಿಯ ಸರ್ವಿಸ್‌ ಬ್ರೇಕ್‌ ಮಾಡುವ ಮೂಲಕ ಎರಡನೇ ಸೆಟ್‌ ಗೆದ್ದು ಪಂದ್ಯವನ್ನು ಮೂರನೇ ಸೆಟ್‌ಗೆ ಒಯ್ದರು.  ತೀವ್ರ ಹೋರಾಟ ಕಂಡ ಮೂರನೇ ಸೆಟ್‌ನಲ್ಲಿ ತಮಿಳುನಾಡಿನ ರಸ್ವಂತ್‌ ರವಿ 6–4ರಲ್ಲಿ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT