ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಐಶ್ವರ್ಯಾಗೆ ಕಂಚು

ಫೆಡರೇಷನ್‌ ಕಪ್‌ ಜೂನಿಯರ್ ಅಥ್ಲೆಟಿಕ್ಸ್‌
Last Updated 3 ಮೇ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತಮ ಸಾಮರ್ಥ್ಯ ತೋರಿದ ಕರ್ನಾಟಕದ ಬಿ. ಐಶ್ವರ್ಯಾ  14ನೇ ರಾಷ್ಟ್ರೀಯ ಫೆಡರೇಷನ್‌ ಕಪ್ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ ಷಿಪ್‌ನಲ್ಲಿ ಮೊದಲ ದಿನ ಕಂಚಿನ ಪದಕ ಗೆದ್ದರು.

ಕಂಠೀರವ ಕ್ರೀಡಾಂಗಣದಲ್ಲಿ ಮಂಗ ಳವಾರ ನಡೆದ ಬಾಲಕಿಯರ ಲಾಂಗ್ ಜಂಪ್‌ ಸ್ಪರ್ಧೆಯಲ್ಲಿ 5.60 ಮೀಟರ್ಸ್‌ ಜಿಗಿದು ಈ ಸಾಧನೆ ಮಾಡಿದರು. ಜಾರ್ಖಂಡ್‌ನ ಕೆ. ಪ್ರಿಯಾಂಕ 5.99 ಮೀಟರ್ಸ್‌ ಜಿಗಿದು ಚಿನ್ನ ಗೆದ್ದರೆ, ಪಶ್ವಿಮ ಬಂಗಾಳದ ಸೋಮಾ ಕರ್ಮಾಕರ್‌ 5.76 ಮೀಟರ್ಸ್ ಜಿಗಿದು ಬೆಳ್ಳಿ ತಮ್ಮದಾಗಿಸಿಕೊಂಡರು.

ಮೂಡುಬಿದಿರೆಯ ಆಳ್ವಾಸ್‌ ಕಾಲೇಜಿನ ಪದವಿ ವಿದ್ಯಾರ್ಥಿಯಾಗಿರುವ ಐಶ್ವರ್ಯ ಅವರನ್ನು ಹೊರತುಪಡಿಸಿದರೆ ರಾಜ್ಯದ ಬೇರೆ ಸ್ಪರ್ಧಿಗಳಿಗೆ ಉತ್ತಮ ಪ್ರದರ್ಶನ ಮೂಡಿ ಬರಲಿಲ್ಲ.

ಬಾಲಕರ 5000 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ರಾಜ್ಯದ ಅರ್ಜುನ್‌ ಕುಮಾರ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪ ಟ್ಟರು. ಅರ್ಜುನ್‌ ನಿಗದಿತ ಗುರಿಯನ್ನು ಮುಟ್ಟಲು 15 ನಿಮಿಷ 15.88 ಸೆಕೆಂಡು ಗಳಲ್ಲಿ ಗುರಿ ತಲುಪಿದರು. ಗುಜರಾತ್‌ನ ಗವಿತ್‌ ಮುರ್ಲಿ (ಕಾಲ: 14:44.90ಸೆ.) ಗುರಿ ತಲುಪಿ ಚಿನ್ನ ತಮ್ಮದಾಗಿಸಿ ಕೊಂಡರು.

ಬಾಲಕಿಯರ 5000 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ರಾಜ್ಯದ ಎಸ್‌.ಪಿ. ಮಯೂರಿ ಹತ್ತನೇ ಸ್ಥಾನ ಪಡೆದರು. ಈ ಅಥ್ಲೀಟ್‌ ಗುರಿ ತಲುಪಲು 22 ನಿಮಿಷ 54.90 ಸೆಕೆಂಡುಗಳನ್ನು ತೆಗೆದು ಕೊಂಡರು.

ಬಾಲಕರ ಶಾಟ್‌ಪಟ್‌ನಲ್ಲಿ ಎಂ. ಸೂರ್ಯ ಪ್ರಕಾಶ್‌ 14.17 ಮೀಟರ್ಸ್‌ ದೂರ ಎಸೆದು ಹನ್ನೊಂದನೇ ಸ್ಥಾನ ಪಡೆದರು. ಪಂಜಾಬ್‌ನ ಕರ್ಣಿವೀರ್‌ ಸಿಂಗ್ 16.20 ಮೀಟರ್ಸ್ ಎಸೆದು ಚಿನ್ನಕ್ಕೆ ಕೊರಳೊಡ್ಡಿದರು.

ಬಾಲಕಿಯರ 100 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಕರ್ನಾಟಕದ ಎಸ್‌.ಎಸ್‌. ಸ್ನೇಹಾ 12.68 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಆದರೆ ಈ ಅಥ್ಲೀಟ್‌ಗೆ ಲಭಿಸಿದ್ದು ಏಳನೇ ಸ್ಥಾನ. 12.19 ಸೆಕೆಂಡುಗಳಲ್ಲಿ ಗುರಿ ತಲುಪಿದ ಮಹಾರಾಷ್ಟ್ರ ಸಿದ್ಧಿ ಹರಿಯಾ ಚಿನ್ನ ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT