ಕೋಲ್ಕತ್ತ: ಭಾರತದ ರಾಮ್ಕುಮಾರ್ ರಾಮನಾಥನ್ ಇಲ್ಲಿ ನಡೆದ ಪ್ರೇಮ್ಜಿತ್ ಲಾಲ್ ಆಹ್ವಾನಿತ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ರಾಮ್ಕುಮಾರ್ 6–3, 6–4ರಲ್ಲಿ ನೇರ ಸೆಟ್ಗಳಿಂದ ತಮಿಳುನಾಡಿನ ಶ್ರೀರಾಮ್ ಬಾಲಾಜಿ ಅವರನ್ನು ಮಣಿಸಿದರು.
ಡಬಲ್ಸ್ ವಿಭಾಗದಲ್ಲಿ ಎನ್.ಜೀವನ್ ನೆಡುಂಚೆಳಿಯನ್ ಹಾಗೂ ವಿಜಯ್ ಸುಂದರ್ ಪ್ರಶಾಂತ್ ಜೋಡಿ 7–6, 6–3ರಲ್ಲಿ ವಿಷ್ಣುವರ್ಧನ್ ಮತ್ತು ಎನ್.ಶ್ರೀರಾಮ್ ಬಾಲಾಜಿ ವಿರುದ್ಧ ಜಯಗಳಿಸಿ ಚಾಂಪಿಯನ್ ಆಗಿದೆ.