ದೋಹಾ: ಕರ್ನಾಟಕದ ಅಗ್ರಗಣ್ಯ ಆಟಗಾರ ಪಂಕಜ್ ಅಡ್ವಾಣಿ ವಿಶ್ವ ಸ್ನೂಕರ್ ಚಾಂಪಿಯನ್ಷಿಪ್ನಲ್ಲಿ ರೌಂಡ್ ರಾಬಿನ್ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದು ಕ್ಲೀನ್ ಸ್ವೀಪ್ ಸಾಧಿಸಿದ್ದಾರೆ.
ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಗುರುವಾರ ಪಂಕಜ್ 4–0 ಫ್ರೇಮ್ಗಳಲ್ಲಿ ಬ್ರೆಜಿಲ್ನ ವಿಕ್ಟರ್ ಸಾರ್ಕಿಸ್ ವಿರುದ್ಧ ಜಯದಾಖಲಿಸುವ ಮೂಲಕ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
17 ಬಾರಿ ವಿಶ್ವ ಚಾಂಪಿಯನ್ ಆಗಿರುವ ಪಂಕಜ್ ನಾಲ್ಕು ಲೀಗ್ ಪಂದ್ಯಗಳಲ್ಲಿ ಕೇವಲ ಎರಡು ಫ್ರೇಮ್ಗಳನ್ನು ಮಾತ್ರ ಸೋತಿದ್ದಾರೆ.
‘ಮುಂದಿನ ಪಂದ್ಯಗಳಲ್ಲಿ ಪೈಪೋಟಿ ಹೆಚ್ಚಲಿದೆ. ಉತ್ತಮ ತಯಾರಿಯಿಂದ ಆಡಬೇಕು. ಹೊಸ ತಂತ್ರಗಳನ್ನು ಬಳಸಲು ಸಿದ್ದತೆ ಮಾಡಿಕೊಂಡಿದ್ದೇನೆ. ಎಲಿಮಿನೇಟ್ ಸುತ್ತುಗಳಲ್ಲಿ ಎಚ್ಚರದಿಂದ ಆಡದಿದ್ದರೆ ಪ್ರಶಸ್ತಿ ಕನಸು ಸಾಧ್ಯವಿಲ್ಲ’ ಎಂದು ಪಂಕಜ್ ಹೇಳಿದ್ದಾರೆ.