ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್: ಅಂಜಲಿ, ರಾಜ್ಯವರ್ಧನ್ ಕನಸು ಭಗ್ನ

Last Updated 14 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಥೆನ್ಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಡಬಲ್ ಟ್ರಾಪ್ ಬೆಳ್ಳಿ ಗೆದ್ದಿದ್ದ ರಾಜ್ಯವರ್ಧನ್ ಸಿಂಗ್ ರಾಠೋಡ್ ಹಾಗೂ ಮಾಜಿ ವಿಶ್ವ ಅಗ್ರ ಕ್ರಮಾಂಕದ ಮಹಿಳಾ ಶೂಟರ್ ಅಂಜಲಿ ಭಾಗ್ವತ್ ಅವರ ಲಂಡನ್ ಒಲಿಂಪಿಕ್ ಕನಸು ಭಗ್ನಗೊಂಡಿದೆ.

ದೋಹಾದಲ್ಲಿ ನಡೆಯುತ್ತಿರುವ ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಅವರು ಒಲಿಂಪಿಕ್ ಅರ್ಹತಾ ಮಟ್ಟವನ್ನು ಮುಟ್ಟುವಲ್ಲಿ ವಿಫಲರಾಗಿದ್ದಾರೆ. ರಾಜ್ಯವರ್ಧನ್ ಅವರು ಡಬಲ್ ಟ್ರಾಪ್‌ನಲ್ಲಿ ಹಾಗೂ ಅಂಜಲಿ 10 ಮೀ. ಏರ್ ರೈಫಲ್ ವಿಭಾಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ನಿಖರತೆ ತೋರಲಿಲ್ಲ.

2012ರ ಲಂಡನ್ ಒಲಿಂಪಿಕ್‌ಗೆ ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್ ಕೊನೆಯ ಅರ್ಹತಾ ಸ್ಪರ್ಧೆಯಾಗಿದೆ. ಇಲ್ಲಿಯೇ ಅವರು ನೀರಸ ಪ್ರದರ್ಶನ ನೀಡಿದರು. ಅರ್ಹತಾ ಸುತ್ತಿನಲ್ಲಿಯೇ ಅವರು ಒಂಬತ್ತನೇ ಸ್ಥಾನದಲ್ಲಿ ಉಳಿದರು.

ಡಬಲ್ ಟ್ರಾಪ್‌ನಲ್ಲಿ ರಾಠೋಡ್ (135 ಪಾಯಿಂಟ್ಸ್), ಮೊಹಮ್ಮದ್ ಅಸಬ್ (135) ಹಾಗೂ ರೊಂಜನ್ ಸೋಧಿ (134) ಅವರನ್ನೊಳಗೊಂಡ ಭಾರತ ತಂಡವು ಕಂಚಿನ ಪದಕಕ್ಕೆ ಸಮಾಧಾನ ಪಟ್ಟಿತು. ಈಗಾಗಲೇ ಒಲಿಂಪಿಕ್‌ಗೆ ಅರ್ಹತೆ ಪಡೆದುಕೊಂಡಿರುವ ಸೋಧಿ ಇಲ್ಲಿ ಹದಿನಾಲ್ಕನೇ ಸ್ಥಾನ ಪಡೆದರು. ಅಸಬ್ ಒಂಬತ್ತನೇ ಸ್ಥಾನದಲ್ಲಿ ನಿಂತರು.

ಅಂಜಲಿ, ಅಯೋನಿಕಾ ಪಾಲ್ ಮತ್ತು ಮಂಪಿ ದಾಸ್ ಅವರಿದ್ದ ಭಾರತದ 10 ಮೀ. ಏರ್ ರೈಫಲ್ ಮಹಿಳೆಯರ ತಂಡವು ಬೆಳ್ಳಿ ಗೆದ್ದಿತು ಎಂದು ಇಲ್ಲಿಗೆ ಬಂದ ವರದಿಗಳು ತಿಳಿಸಿವೆ. ಭಾರತದವರು ಲಭ್ಯವಿದ್ದ 1200 ಪಾಯಿಂಟುಗಳಲ್ಲಿ 1185 ಪಾಯಿಂಟುಗಳನ್ನು ಗಳಿಸಿದರು. ಚೀನಾ (1187) ಹಾಗೂ ಇರಾನ್ (1183) ತಂಡದವರು ಕ್ರಮವಾಗಿ ಚಿನ್ನ ಹಾಗೂ ಕಂಚಿನ ಪದಕ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT