ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಾ, ಭಗವಾನ್‌ಗೆ ಮುನ್ನಡೆ

Last Updated 29 ಜುಲೈ 2012, 19:30 IST
ಅಕ್ಷರ ಗಾತ್ರ

ಲಂಡನ್: ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್‌ನ ತಮ್ಮ ಮೊದಲ ಪಂದ್ಯದಲ್ಲಿ  ಭಾನುವಾರ ಗಮನಾರ್ಹ ಸಾಮರ್ಥ್ಯ ತೋರಿ ಕೇವಲ 22 ನಿಮಿಷಗಳಲ್ಲಿ ಸ್ವಿಟ್ಜರ್‌ಲೆಂಡ್‌ನ ಸಬ್ರಿನಾ ವಿರುದ್ಧ ಭರ್ಜರಿ ಜಯ ಗಳಿಸಿ ತಾವು ಅತ್ಯುತ್ತಮ ಫಾರ್ಮ್‌ನಲ್ಲಿರುವುದರ ಸೂಚನೆ ನೀಡಿದರು.

ಆದರೆ, ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್‌ನಲ್ಲಿ ಜ್ವಾಲಾ ಗುಟ್ಟಾ ಮತ್ತು ವಿ.ದಿಜು ಜೋಡಿ ತಮ್ಮ ಎರಡನೇ ಪಂದ್ಯದಲ್ಲಿಯೂ ಸೋತು ನಿರ್ಗಮಿಸಿತು.ಬಾಕ್ಸಿಂಗ್‌ನ ಲೈಟ್‌ವೇಟ್ ವಿಭಾಗದಲ್ಲಿ ಜೈ ಭಗವಾನ್ ಅವರು, ಸಿಶೆಲ್ಸ್‌ನ ಅಲಿಸಾಪ್ ವಿರುದ್ಧ 18-8ರಿಂದ ಗೆದ್ದು ಅನಿರೀಕ್ಷಿತ ಫಲಿತಾಂಶ ನೀಡಿದರು. ಇವರು ಈ ಮಟ್ಟಿಗೆ ಸಾಮರ್ಥ್ಯ ತೋರಿದ್ದು ಭಾರತದ ಪಾಳಯದಲ್ಲಿ ಸಂಭ್ರಮದ ಅಲೆ ಎಬ್ಬಿಸಿದೆ. ಭರವಸೆಯ ಬಾಕ್ಸರ್ ವಿಜೇಂದರ್ ಸಿಂಗ್ ನಿರೀಕ್ಷೆಯಂತೆ ಪ್ರಿಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ರೋಯಿಂಗ್‌ನಲ್ಲಿ ಸ್ವರಣ್‌ಸಿಂಗ್ ಉತ್ತಮ ಪ್ರದರ್ಶನ ನೀಡಿ ಎಂಟರ ಘಟ್ಟ ಪ್ರವೇಶಿಸಿದ್ದಾರೆ.  ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್ ಸ್ಪರ್ಧೆಯ ಹೀಟ್ಸ್‌ನಲ್ಲಿ ಭಾರತದ ಸಂದೀಪ್ ಕುಮಾರ್ ಮತ್ತು ಮಂಜೀತ್ ಸಿಂಗ್ ನಾಲ್ಕನೇ ಸ್ಥಾನ ಪಡೆದರು. ಕ್ವಾರ್ಟರ್ ಫೈನಲ್ ಪ್ರವೇಶಿಸಲು ಇವರಿಗೂ ರೆಪೆಚೇಜ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಅನಿವಾರ್ಯ.ಟೇಬಲ್ ಟೆನಿಸ್‌ನಲ್ಲಿ ಮೊದಲ ಸುತ್ತಿನಲ್ಲಿ ನಿರಾಯಾಸ ಗೆಲುವು ಗಳಿಸಿದ್ದ ಸೌಮ್ಯಜಿತ್ ಘೋಷ್‌ಗೆ ಎರಡನೇ ಸುತ್ತಿನಲ್ಲಿ ನಿರಾಸೆ ಕಾದಿತ್ತು.

ಏರ್‌ಪಿಸ್ತೂಲ್ ವಿಭಾಗದಲ್ಲಿ ಹೀನಾ ಸಿಂಧು 12ನೇ ಸ್ಥಾನಕ್ಕೆ ತೃಪ್ತಿ ಪಡುವಂತಾಯಿತು.  ಅಭಿನವ್ ಬಿಂದ್ರಾ ಮತ್ತು ಗಗನ್ ನಾರಂಗ್ ಸೋಮವಾರ ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದು, ಈ ಬಗ್ಗೆ ಭಾರತದ ಪಾಳಯದಲ್ಲಿ ಕುತೂಹಲ ಮೂಡಿದೆ. ಸೋಮವಾರ ಭಾರತದ ಹಾಕಿ ತಂಡ ಹಾಲೆಂಡ್ ವಿರುದ್ಧ ತನ್ನ ಮೊದಲ ಪಂದ್ಯದಲ್ಲಿ ಆಡಲಿದೆ.

ಉದ್ಘಾಟನಾ ಸಮಾರಂಭದ ಪಥಸಂಚಲನದ ಸಂದರ್ಭದಲ್ಲಿ ಭಾರತ ತಂಡ ಸಾಗುತ್ತಿದ್ದಾಗ ಧ್ವಜ ಹಿಡಿದಿದ್ದ ಸುಶಿಲ್ ಕುಮಾರ್ ಸಮೀಪದಲ್ಲಿಯೇ ಹೆಜ್ಜೆ ಹಾಕಿದ ಅಪರಿಚಿತ ಯುವತಿ ಬೆಂಗಳೂರಿನವಳು ಎಂಬ ಮಾಹಿತಿ ಬಯಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT