ಲಿಲಿ, ಫ್ರಾನ್ಸ್ (ಐಎಎನ್ಎಸ್/ ಇಎಫ್ಇ): ಅಮೋಘ ಪ್ರದರ್ಶನ ತೋರಿದ ಸ್ವಿಟ್ಜರ್ಲೆಂಡ್ ತಂಡ 3–1ರಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿ 2014ರ ಡೇವಿಸ್ ಕಪ್ ಟೂರ್ನಿ ಚಾಂಪಿಯನ್ ಆಯಿತು. ಸ್ವಿಟ್ಜರ್ಲೆಂಡ್ ಜಯಿಸಿದ ಚೊಚ್ಚಲ ಪ್ರಶಸ್ತಿ ಇದು.
17 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ರೋಜರ್ ಫೆಡರರ್ ರಿವರ್ಸ್ ಸಿಂಗಲ್ಸ್ನಲ್ಲಿ 6–4, 6–2, 6–2ರಲ್ಲಿ ಜೋ ವಿಲ್ಪ್ರೆಡ್ ಸೋಂಗ ಅವರನ್ನು ಮಣಿಸಿ ಸಂಭ್ರಮಕ್ಕೆ ಕಾರಣರಾದರು. ಈ ಪಂದ್ಯ ವೀಕ್ಷಿಸಲು ದಾಖಲೆ ಸಂಖ್ಯೆಯಲ್ಲಿ ಜನ ಸೇರಿದ್ದರು.