ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಮಿಲ್ಟನ್‌ಗೆ ಪೋಲ್‌ ಪೊಸಿಷನ್‌

Last Updated 4 ಜುಲೈ 2015, 20:17 IST
ಅಕ್ಷರ ಗಾತ್ರ

ಸಿಲ್ವರ್‌ಸ್ಟೋನ್‌, ಇಂಗ್ಲೆಂಡ್‌ (ಎಎಫ್‌ಪಿ):  ಅಮೋಘ ಚಾಲನಾ ಕೌಶಲ ಮೆರೆದ ಮರ್ಸಿಡಿಸ್‌ ತಂಡದ ಚಾಲಕ ಲೂಯಿಸ್‌ ಹ್ಯಾಮಿಲ್ಟನ್‌  ಬ್ರಿಟಿಷ್‌ ಗ್ರ್ಯಾನ್‌ ಪ್ರಿ ಫಾರ್ಮುಲಾ ಒನ್‌ ರೇಸ್‌ನಲ್ಲಿ ಪೋಲ್‌ ಪೊಸಿಷನ್‌ ಪಡೆದುಕೊಂಡಿದ್ದಾರೆ.

ಹೋದ ವರ್ಷ ನಡೆದ ಸ್ಪರ್ಧೆ ಯಲ್ಲಿ ಪ್ರಶಸ್ತಿ ಗೆದ್ದಿರುವ ಹ್ಯಾಮಿಲ್ಟನ್‌ ಶನಿವಾರ ಅಭ್ಯಾಸದ ವೇಳೆ ಸಾಕಷ್ಟು ತೊಂದರೆಗಳನ್ನು ಅನುಭವಿಸಿದರು. ಆದರೆ ಬಳಿಕ ನಡೆದ ರೇಸ್‌ನಲ್ಲಿ ನಿಖರ ವೇಗ ಕಾಯ್ದುಕೊಂಡು ಸಾಗಿದ ಅವರು ಮೊದಲಿಗರಾಗಿ ಗುರಿ ಮುಟ್ಟಿದರು.

ಮರ್ಸಿಡಿಸ್‌ ತಂಡದವರೇ ಆದ ನಿಕೊ ರೋಸ್‌ಬರ್ಗ್‌ ಎರಡನೇ ಸ್ಥಾನ ಗಳಿಸಿದರು. ಹ್ಯಾಮಿಲ್ಟನ್‌ ಸದ್ಯ  ರೋಸ್‌ಬರ್ಗ್‌ ಅವರಿಗಿಂತ 10 ಪಾಯಿಂಟ್ಸ್‌ ಮುಂದಿದ್ದಾರೆ.

‘ಈ ದಿನ ನನ್ನ ಪಾಲಿಗೆ ತುಂಬಾ ವಿಶೇಷವಾದುದು. ಇಲ್ಲಿನ ಅಭಿಮಾನಿಗಳು ನನ್ನನ್ನು ಪ್ರತಿ ಹಂತದಲ್ಲೂ ಹುರಿದುಂಬಿಸಿದ್ದರಿಂದ ಪೋಲ್‌ ಪೊಸಿಷನ್‌ ಪಡೆಯಲು ಸಾಧ್ಯವಾಯಿತು. ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ’ ಎಂದು ಹ್ಯಾಮಿಲ್ಟನ್‌ ನುಡಿದಿದ್ದಾರೆ.

ಬ್ರೆಜಿಲ್‌ನ ಫೆಲಿಪೆ ಮಾಸ ಮತ್ತು ಫಿನ್‌ ವಲ್ಟೇರಿ ಬೊಟ್ಟಾಸ್‌ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದೊಂದಿಗೆ ಸ್ಪರ್ಧೆ ಕೊನೆ ಗೊಳಿಸಿದರು.  ಫೆರಾರಿ ತಂಡದ ಫಿನ್‌ ಕಿಮಿ ರೈಕೊನೆನ್‌ ಐದನೇ ಸ್ಥಾನ ಗಳಿಸಿದರೆ, ಸೆಬಾಸ್ಟಿಯನ್‌ ವೆಟೆಲ್‌ ಆರನೇ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT