ಶ್ರೀಲಂಕಾ: ಹಂಗಾಮಿ ಪ್ರಧಾನಿಯಾಗಿ ರಾಜಪಕ್ಸೆ ಜವಾಬ್ದಾರಿ ನಿರ್ವಹಣೆ

7
ನ್ಯಾಯಾಲಯದಿಂದ ತಡೆ, ಸಿರಿಸೇನಾಗೆ ಹಿನ್ನಡೆ

ಶ್ರೀಲಂಕಾ: ಹಂಗಾಮಿ ಪ್ರಧಾನಿಯಾಗಿ ರಾಜಪಕ್ಸೆ ಜವಾಬ್ದಾರಿ ನಿರ್ವಹಣೆ

Published:
Updated:
Deccan Herald

ಕೊಲಂಬೊ: ಮಹಿಂದಾ ರಾಜಪಕ್ಸೆ ಅವರು ಶ್ರೀಲಂಕಾದ ಹಂಗಾಮಿ ಪ್ರಧಾನಿಯಾಗಿ ಜವಾಬ್ದಾರಿ ನಿರ್ವಹಣೆಗೆ ಶ್ರೀಲಂಕಾ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಈ ಬೆಳವಣಿಗೆಯಿಂದ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಗೆ ತೀವ್ರ ಹಿನ್ನಡೆಯುಂಟಾಗಿದೆ.

‘ರಾಜಪಕ್ಸೆ ಮತ್ತು ಅವರ ಸಚಿವರ ಸಂಪುಟ ಅಧಿಕಾರ ಚಲಾಯಿಸುವಂತಿಲ್ಲ ಎಂದು ಮೇಲ್ಮನವಿ ನ್ಯಾಯಾಲಯವು ಮಧ್ಯಂತರ ಆದೇಶ ಹೊರಡಿಸಿದೆ’ ಎಂದು ಕೊಲಂಬೊ ಗಜೆಟ್‌ ವರದಿ ಮಾಡಿದೆ.

ಹಿಂದಿನ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರನ್ನು ಯಾವ ಆಧಾರದಲ್ಲಿ ವಜಾಗೊಳಿಲಾಗಿದೆ ಎಂದು ಪ್ರಶ್ನಿಸಿ, 122 ಸಂಸದರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ಪ್ರಕಟಿಸಿದೆ.

ಅಕ್ಟೋಬರ್‌ 22ರಂದು  ಪ್ಧಾನಿ ರನಿಲ್‌ ವಿಕ್ರಮಸಿಂಘೆ ಅವರನ್ನು ವಜಾಗೊಳಿಸಿ ಮಹಿಂದಾ ರಾಜಪಕ್ಸೆ ಅವರ ಸ್ಥಾನಕ್ಕೆ ನೇಮಿಸಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಆದೇಶ ಹೊರಡಿಸಿದ್ದರು. ಈ ಬೆಳವಣಿಗೆ ಬಳಿಕ ಶ್ರೀಲಂಕಾ ರಾಜಕೀಯದಲ್ಲಿ ಬಿಕ್ಕಟ್ಟು ತಲೆದೋರಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !