ಬಿಎಸ್‌‌ಪಿ ಸೇರಿದ್ದ ಗೌಡರ ಶಿಷ್ಯ ಡ್ಯಾನಿಷ್ ಆಲಿಗೆ ಉತ್ತರಪ್ರದೇಶದಲ್ಲಿ ಗೆಲುವು

ಬುಧವಾರ, ಜೂನ್ 19, 2019
25 °C

ಬಿಎಸ್‌‌ಪಿ ಸೇರಿದ್ದ ಗೌಡರ ಶಿಷ್ಯ ಡ್ಯಾನಿಷ್ ಆಲಿಗೆ ಉತ್ತರಪ್ರದೇಶದಲ್ಲಿ ಗೆಲುವು

Published:
Updated:

ಉತ್ತರ ಪ್ರದೇಶ: ಜೆಡಿಎಸ್ ತೊರೆದು ಇತ್ತೀಚೆಗೆ ಬಿಎಸ್‌ಪಿ ಸೇರಿ ಉತ್ತರ ಪ್ರದೇಶದ ಅಮ್ರೋಹ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕುನ್ವರ್ ಡ್ಯಾನಿಷ್ ಅಲಿ ಬಿಜೆಪಿ ಅಭ್ಯರ್ಥಿ ವಿರುದ್ಧ 60 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ರಚನೆಯ ಸಮಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡ್ಯಾನಿಷ್ ಆಲಿ, ಸಮನ್ವಯ ಸಮಿತಿಯ ಪದಾಧಿಕಾರಿಯೂ ಆಗಿದ್ದರು.

ಕಾರಣಾಂತರಗಳಿಂದ ಜೆಡಿಎಸ್ ತೊರೆದು ಉತ್ತರಪ್ರದೇಶದಲ್ಲಿ ಮಾಯಾವತಿ ನೇತೃತ್ವದಲ್ಲಿ ಬಿಎಸ್‌‌ಪಿ ಸೇರಿ ಅಮ್ರೋಹಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 

ಡ್ಯಾನಿಷ್‌ ಅಲಿ ಅವರನ್ನು ಜೆಡಿಎಸ್‌ ಚಿಹ್ನೆಯ ಮೇಲೆಯೇ ಉತ್ತರ ಪ್ರದೇಶದಲ್ಲಿ ಚುನಾವಣಾ ಕಣಕ್ಕಿಳಿಸಬೇಕು ಎಂದು ದೇವೇಗೌಡರು ಬಯಸಿದ್ದರು. ಆದರೆ, ಉತ್ತರ ಪ್ರದೇಶದ ಜನರಿಗೆ ಜೆಡಿಎಸ್‌ ಚಿಹ್ನೆಯ ಪರಿಚಯ ಇಲ್ಲದ ಕಾರಣಕ್ಕೆ ಡ್ಯಾನಿಷ್‌ ಅಲಿ ಬಿಎಸ್‌ಪಿ ಚಿಹ್ನೆಯಿಂದ ಸ್ಪರ್ಧಿಸಲಿ ಎಂದು ಮಾಯಾವತಿ ಅವರು ದೇವೇಗೌಡರಿಗೆ ತಿಳಿಸಿದ್ದರು ಎನ್ನಲಾಗಿತ್ತು. ಅದೇ ಮೇರೆಗೆ ಡ್ಯಾನಿಷ್‌ ಜೆಡಿಎಸ್‌ ತೊರೆದು ಬಿಎಸ್‌ಪಿ ಸೇರಿದ್ದರು. ಮಾಯಾವತಿ ಅವರ ಲೆಕ್ಕಾಚಾರ ಫಲಿಸಿದ್ದು, ಡ್ಯಾನಿಷ್‌ ಅಲಿ ಸಂಸದರಾಗಿ ಆಯ್ಕೆಯಾಗಿದ್ದಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 18

  Happy
 • 3

  Amused
 • 3

  Sad
 • 2

  Frustrated
 • 4

  Angry

Comments:

0 comments

Write the first review for this !