ತ್ರಿಡಿ ಭೂಪಟ ಮುಟ್ಟಿ ರೇಡಿಯೊ ಕೇಳಿ

5

ತ್ರಿಡಿ ಭೂಪಟ ಮುಟ್ಟಿ ರೇಡಿಯೊ ಕೇಳಿ

Published:
Updated:

ಬೆಂಗಳೂರು: ತ್ರಿಡಿ ಭೂಪಟದಲ್ಲಿ ಜಗತ್ತಿನ ಯಾವುದೇ ಭಾಗವನ್ನು ಮುಟ್ಟಿದರೂ ಅಲ್ಲಿನ ರೇಡಿಯೊ ಕೇಂದ್ರಗಳ ಮೂಲಕ ಹಾಡುಗಳನ್ನು ಕೇಳಬಹುದಾದ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.

ವಿಶ್ವದ 10 ಸಾವಿರ ರೇಡಿಯೊ ಕೇಂದ್ರಗಳ ಜೊತೆ ‘ರೇಡಿಯೊ ಗಾರ್ಡನ್‌’ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ. ಇದರಲ್ಲಿ ಭಾರತದ ನೂರಕ್ಕೂ ಹೆಚ್ಚು ರೇಡಿಯೊ ಕೇಂದ್ರಗಳಿವೆ. ಬೆಂಗಳೂರಿನ 30 ಕೇಂದ್ರಗಳು ಇರುವುದು ವಿಶೇಷ. ಮೊಬೈಲ್‌ ಹಾಗೂ ವೆಬ್‌ ಎರಡರಲ್ಲೂ ಇದನ್ನು ಬಳಸಬಹುದು.

ಜರ್ಮನಿಯಲ್ಲಿ 2016ರಲ್ಲಿ ಈ ಯೋಜನೆ ಆರಂಭವಾಗಿತ್ತು. ರೇಡಿಯೊ ಬಳಕೆದಾರರಿಗಾಗಿ ಗೂಗಲ್‌ ಅರ್ಥ್‌ ಬಳಸಿಕೊಂಡು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ‘ರೇಡಿಯೊ ಗಾರ್ಡನ್‌’ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡ ಬಳಿಕ ತ್ರಿಡಿ ಭೂಪಟ ತೆರೆದುಕೊಳ್ಳುತ್ತದೆ. ಕೆಲವೇ ಸೆಕೆಂಡುಗಳಲ್ಲಿ ಹಸಿರು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ನಮಗೆ ಬೇಕಾದ ದೇಶದ ಮೇಲಿರುವ ಚುಕ್ಕೆಗಳನ್ನು ಮುಟ್ಟಿದರೆ ಅಲ್ಲಿಯ ರೇಡಿಯೊ ಕೇಂದ್ರಗಳ ನೇರ ಪ್ರಸಾರವನ್ನು ಕೇಳಬಹುದು. ಪ್ರತಿಯೊಂದು ಚುಕ್ಕೆಯೂ ಒಂದೊಂದು ರೇಡಿಯೊ ಕೇಂದ್ರದ ಸಂಕೇತವಾಗಿದೆ.

ಉಗಾಂಡಾದ ರಾಕ್‌ ಅಥವಾ ಜಪಾನ್‌ನ ಪಾಪ್‌ ಸಂಗೀತವಾದರೂ ಕೇಳಬಹುದು. ಮೊದಲೇ ಮುದ್ರಿಸಿಟ್ಟ ಸಂಗೀತದ ಕಾರ್ಯಕ್ರಮಗಳನ್ನೂ ಕೇಳುವ ಅವಕಾಶ ಕೂಡ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !