ಪ್ರಿಯಾಂಕಾ ‘ಮಿಸೆಸ್‌ ಇಂಡಿಯಾ ಕರ್ನಾಟಕ’

ಭಾನುವಾರ, ಜೂನ್ 16, 2019
28 °C

ಪ್ರಿಯಾಂಕಾ ‘ಮಿಸೆಸ್‌ ಇಂಡಿಯಾ ಕರ್ನಾಟಕ’

Published:
Updated:
Prajavani

ಯಶವಂತಪುರದ ಆರ್‌.ಜಿ.ರಾಯಲ್‌ ಹೋಟೆಲ್‌ನಲ್ಲಿ ಇತ್ತೀಚೆಗೆ ನಡೆದ ಮಿಸೆಸ್‌ ಇಂಡಿಯಾ ಕರ್ನಾಟಕ ಸ್ಪರ್ಧೆಯಲ್ಲಿ ನಗರದ ಪ್ರಿಯಾಂಕಾ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಗೃಹಿಣಿಯರು, ಅಮ್ಮಂದಿರು, ಬೇರೆ ಬೇರೆ ವೃತ್ತಿಯಲ್ಲಿ ತೊಡಗಿರುವ ಮಹಿಳೆಯರು ಈ ಸ್ಪರ್ಧೆಯ ಮೆರುಗು ಹೆಚ್ಚಿಸಿದ್ದರು.

ಅಸ್ಬಾ, ರಿನಿ ಬೋಪಣ್ಣ, ಲಾಸ್ಯ ಅವರು ರನ್ನರ್‌ ಅಪ್‌ಗಳಾಗಿ ಹೊರಹೊಮ್ಮಿದರು.

40ರಿಂದ 60 ವರ್ಷದ ಗೃಹಿಣಿಯರ ಮಿಸೆಸ್‌ ಇಂಡಿಯಾ ಕ್ಲಾಸಿಕ್‌ ಸುತ್ತು ಕೂಡ ಗಮನಸೆಳೆಯಿತು. ಡಾ.ಶಿಲ್ಪಾ ಈ ವಿಭಾಗದ ವಿಜೇತರಾಗಿದ್ದಾರೆ. ವೀಣಾ, ವೀಣಾ ಮೈಸೂರು, ಮಧುಮತಿ, ಪ್ರವೀಣಾ ಕುಲಕರ್ಣಿ ನಂತರದ ಸ್ಥಾನ ಪಡೆದಿದ್ದಾರೆ.

60 ವರ್ಷ ಮೇಲ್ಪಟ್ಟ ಸೂಪರ್‌ ಕ್ಲಾಸಿಕ್‌ ಸುತ್ತಿನಲ್ಲಿ ಜೂಲಿಯೆಟ್‌ ಗೆದ್ದಿದ್ದಾರೆ. ಈ ಸುತ್ತಿನಲ್ಲಿ ತಾರಾ ಬೋಪಯ್ಯ, ನೀಲಾಂಬಿಕಾ, ಇಂದಿರಾ ಮೆನನ್‌ ಪೈಪೋಟಿ ನೀಡಿದರು. ಅಂತಿಮ ಸುತ್ತಿನಲ್ಲಿ 46 ಮಹಿಳೆಯರು ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದರು.

‘ಈ ಸ್ಪರ್ಧೆಯಲ್ಲಿ ಭಾಗವಹಿಸಿದವರ ಸೌಂದರ್ಯವನ್ನಷ್ಟೇ ಗಮನಿಸಿಲ್ಲ. ಅವರ ವ್ಯಕ್ತಿತ್ವವನ್ನು ನೋಡಲಾಗಿದೆ. ಸಾಧಕ ಮಹಿಳೆಯರನ್ನೂ ಗುರುತಿಸಿ ಗೌರವಿಸಲಾಗಿದೆ’ ಎಂದು ಆಯೋಜಕಿ ಪ್ರತಿಭಾ ಸಂಶಿಮಠ ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !