ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್‌ ಪುರಸಭೆ: ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ

17 ಸ್ಥಾನಗಳಲ್ಲಿ ಗೆಲುವು* ಬಿಜೆಪಿಗೆ 10 ಸ್ಥಾನ
Last Updated 31 ಮೇ 2019, 14:30 IST
ಅಕ್ಷರ ಗಾತ್ರ

ಆನೇಕಲ್ :ಪುರಸಭೆಯ 27 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ 17 ಸ್ಥಾನಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ನಿಚ್ಚಳ ಬಹುಮತ ಗಳಿಸಿ ಅಧಿಕಾರದ ಗದ್ದುಗೆ ಏರಿದ್ದಾರೆ. ಬಿಜೆಪಿ 10 ಸ್ಥಾನಗಳನ್ನು ಪಡೆದಿದೆ.

ವಾರ್ಡ್‌ 1ರಲ್ಲಿ ಕಾಂಗ್ರೆಸ್‌ನ ಆರ್.ಭಾರತಿ 644 ಮತಗಳನ್ನು ಪಡೆದು ಜಯ ಗಳಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ರೂಪಾ ರವಿರೆಡ್ಡಿ ಅವರು 426 ಮತಗಳನ್ನು ಗಳಿಸಿದ್ದಾರೆ. ವಾರ್ಡ್‌ 2ರಲ್ಲಿ ಕಾಂಗ್ರೆಸ್‌ನ ಮಾಂತೇಶ್‌ 651 ಮತ ಪಡೆದು ಜಯಗಳಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಡಿ.ವಿ.ಮುರಳಿ 323 ಮತ ಗಳಿಸಿದ್ದಾರೆ.

ವಾರ್ಡ್‌ 3ರಲ್ಲಿ ಕಾಂಗ್ರೆಸ್‌ನ ಇನಾಯತ್‌ವುಲ್ಲಾ 992 ಮತ ಗಳಿಸಿ ಜಯಶಾಲಿಯಾಗಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಲಕ್ಷ್ಮೀನಾರಾಯಣ್‌ 641 ಮತಗಳಿಸಿದ್ದಾರೆ. ವಾರ್ಡ್‌ 4ರಲ್ಲಿ ಬಿಜೆಪಿಯ ಪ್ರಕಾಶ್‌ 902 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಬಿ.ಮಲ್ಲಿಕಾರ್ಜುನ್‌ 428 ಮತ ಗಳಿಸಿದ್ದಾರೆ.

ವಾರ್ಡ್‌ 5ರಲ್ಲಿ ಕಾಂಗ್ರೆಸ್‌ನ ಆರ್‌.ಮಾಲಾ ಭಾರ್ಗವ 504 ಮತ ಪಡೆದು ವಿಜಯಶಾಲಿಯಾಗಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಗಾಯತ್ರಿ 361 ಮತಗಳಿಸಿದ್ದಾರೆ. ವಾರ್ಡ್‌ 6ರಲ್ಲಿ ಬಿಜೆಪಿಯ ಅನಸೂಯಮ್ಮ 643 ಮತಗಳಿಸಿ ಗೆದ್ದಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಗಾಯತ್ರಿ 250 ಮತ ಪಡೆದಿದ್ದಾರೆ.

ವಾರ್ಡ್‌ 7ರಲ್ಲಿ ಬಿಜೆಪಿಯ ಎಚ್‌.ಆರ್‌.ಅನಿತಾ 615 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎಸ್‌.ಶ್ರೀಲತಾಂಗಿ 367 ಮತ ಪಡೆದಿದ್ದಾರೆ. ವಾರ್ಡ್‌ 8ರಲ್ಲಿ ಬಿಜೆಪಿಯ ಬಿ.ನಾಗರಾಜು 810 ಮತ ಪೆಡದು ಜಯಗಳಿಸಿದ್ದಾರೆ. ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ದೊಡ್ಡಯ್ಯ 661 ಮತಗಳಿಸಿದ್ದಾರೆ.

ವಾರ್ಡ್‌ 9ರಲ್ಲಿ ಬಿಜೆಪಿಯ ವಿ.ಸುಧಾ 292 ಮತ ಪಡೆದು ಜಯಗಳಿಸಿದ್ದಾರೆ. ಪ್ರತಿ ಸ್ಪರ್ಧಿ ಕಾಂಗ್ರೆಸ್‌ನ ಶೋಭಾ.ಪಿ 226 ಮತಗಳಿಸಿದ್ದಾರೆ. ವಾರ್ಡ್‌ 10ರಲ್ಲಿ ಬಿಜೆಪಿಯ ಎನ್‌.ಕಲಾವತಿ 594 ಮತ ಪಡೆದು ಜಯಗಳಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಆರ್‌.ದಿವ್ಯ 458 ಮತಗಳಿಸಿದ್ದಾರೆ.

ವಾರ್ಡ್‌ 11ರಲ್ಲಿ ಕಾಂಗ್ರೆಸ್‌ನ ಬಿ.ವಿ.ಪ್ರಗತಿ ಶ್ರೀರಾಮ್‌ 931 ಮತ ಪಡೆದು ಜಯಗಳಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಎನ್‌.ಶೋಭಾ 454 ಮತಗಳಿಸಿದ್ದಾರೆ. ವಾರ್ಡ್‌ 12ರಲ್ಲಿ ಬಿಜೆಪಿಯ ಕೆ.ಟಿ.ಪವಿತ್ರಾ 492 ಮತ ಪಡೆದು ಜಯಗಳಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎನ್‌.ಲತಾ 354 ಮತ ಪಡೆದಿದ್ದಾರೆ.

ವಾರ್ಡ್‌ 13ರಲ್ಲಿ ಬಿಜೆಪಿಯ ಭಾಗ್ಯಲಕ್ಷ್ಮೀ 762 ಮತ ಪಡೆದು ಜಯ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎನ್‌.ಮಂಜುಳ 386 ಮತಗಳಿಸಿದ್ದಾರೆ. ವಾರ್ಡ್‌ 14ರಲ್ಲಿ ಕಾಂಗ್ರೆಸ್‌ನ ಸಿ.ಕೆ.ಹೇಮಲತಾ 450 ಮತ ಪಡೆದು ಜಯಶಾಲಿಯಾಗಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಜಯಶ್ರೀ ಎಸ್‌ ಬಿಂದು 394 ಮತಗಳಿಸಿದ್ದಾರೆ.

ವಾರ್ಡ್‌ 15ರಲ್ಲಿ ಬಿಜೆಪಿಯ ಎಸ್‌.ಶ್ರೀಕಾಂತ್‌ 649 ಮತ ಪಡೆದು ಜಯಗಳಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಭಾಸ್ಕರ್‌ 431 ಮತಪಡೆದಿದ್ದಾರೆ. ವಾರ್ಡ್‌ 16ರಲ್ಲಿ ಕಾಂಗ್ರೆಸ್‌ನ ಎಸ್‌.ಲಲಿತಾ 340 ಮತ ಪಡೆದು ಗೆಲುವು ಪಡೆದಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಸುಜಾತಾ 290 ಮತ ಗಳಿಸಿದ್ದಾರೆ.

ವಾರ್ಡ್‌ 17ರಲ್ಲಿ ಕಾಂಗ್ರೆಸ್‌ನ ಕೆ.ಶ್ರೀನಿವಾಸ್‌ 736 ಮತ ಪಡೆದು ಜಯಶಾಲಿಯಾಗಿದ್ದಾರೆ. ಪ್ರತಿಸ್ಪರ್ಧಿ ಕೆ.ಮಂಜುನಾಥ್‌ರೆಡ್ಡಿ 582 ಮತ ಪಡೆದಿದ್ದಾರೆ. ವಾರ್ಡ್‌ 18ರಲ್ಲಿ ಕಾಂಗ್ರೆಸ್‌ನ ರವಿಚೇತನ್‌ 571 ಮತ ಪಡೆದು ಜಯಶಾಲಿಯಾಗಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಷೇರ್‌ಅಲಿಖಾನ್‌ 510 ಮತ ಪಡೆದಿದ್ದಾರೆ.

ವಾರ್ಡ್‌ 19ರಲ್ಲಿ ಬಿಜೆಪಿಯ ಜಿ.ಸುರೇಶ್‌ ಬಾಬು 634 ಮತ ಪಡೆದು ಜಯಗಳಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಮಲ್ಲಿಕಾರ್ಜುನ್‌ 353 ಮತ ಪಡೆದಿದ್ದಾರೆ. ವಾರ್ಡ್‌ 20ರಲ್ಲಿ ಕಾಂಗ್ರೆಸ್‌ನ ಎನ್.ಉಷಾ ಮನೋಹರ್‌ 661 ಮತ ಪಡೆದು ಜಯಗಳಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಎಂ.ನಾಗರಾಜು 535 ಮತ ಪಡೆದಿದ್ದಾರೆ.

ವಾರ್ಡ್‌ 21ರಲ್ಲಿ ಕಾಂಗ್ರೆಸ್‌ನ ಎನ್‌.ಎಸ್.ಪದ್ಮನಾಭ್ 699 ಮತ ಪಡೆದು ಜಯಶಾಲಿಯಾಗಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ವಿ.ಬಾಲರಾಜು 576 ಮತ ಪಡೆದಿದ್ದಾರೆ. ವಾರ್ಡ್‌ 22ರಲ್ಲಿ ಕಾಂಗ್ರೆಸ್‌ನ ರವಿ 791 ಮತ ಪಡೆದು ಜಯಶಾಲಿಯಾಗಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಮಂಜುನಾಥ್‌ 739 ಮತ ಪಡೆದಿದ್ದಾರೆ.

ವಾರ್ಡ್‌ 23ರಲ್ಲಿ ಕಾಂಗ್ರೆಸ್‌ನ ಭುವನ 442 ಮತಗಳಿಸಿ ಜಯಶಾಲಿಯಾಗಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಪ್ರಮೀಳ 226 ಮತ ಪಡೆದಿದ್ದಾರೆ. ವಾರ್ಡ್‌ 24ರಲ್ಲಿ ಕಾಂಗ್ರೆಸ್‌ನ ವಿ.ರಾಜಪ್ಪ 696 ಮತ ಪಡೆದು ಜಯಶಾಲಿಯಾಗಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಯು.ಪ್ರಜ್ವಲ್‌ 579 ಮತ ಪಡೆದಿದ್ದಾರೆ.

ವಾರ್ಡ್‌ 25ರಲ್ಲಿ ಕಾಂಗ್ರೆಸ್‌ನ ಕೆ.ಪಿ.ಕೃಷ್ಣ 723 ಮತಪಡೆದು ಜಯಶಾಲಿಯಾಗಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ವಿ.ಮಾದೇಶ್‌ 592 ಮತ ಪಡೆದಿದ್ದಾರೆ. ವಾರ್ಡ್‌ 26ರಲ್ಲಿ ಕಾಂಗ್ರೆಸ್‌ನ ಸಿ.ಜೆ.ಕವಿತಾ 751 ಮತ ಪಡೆದು ಜಯಶಾಲಿಯಾಗಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಜಿ.ರಾಜ 470 ಮತ ಗಳಿಸಿದ್ದಾರೆ. ವಾರ್ಡ್‌ 27ರಲ್ಲಿ ಕಾಂಗ್ರೆಸ್‌ನ ಕೆ.ಗಂಗಾಧರ್‌ 333 ಮತಪಡೆದು ಜಯಶಾಲಿಯಾಗಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ವಿ.ರಾಮಕೃಷ್ಣ 140 ಮತಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT