ದೇವಾಂಶಿ ಶರ್ಮಕೃತಿ ಲೋಕಾರ್ಪಣೆ

7

ದೇವಾಂಶಿ ಶರ್ಮಕೃತಿ ಲೋಕಾರ್ಪಣೆ

Published:
Updated:
Prajavani

ಹೆಸರಾಂತ ಲೇಖಕಿ ದೇವಾಂಶಿ ಶರ್ಮ ಅವರ  ‘I Think I am in Love’ (ಐ ಥಿಂಕ್‌ ಐ ಆ್ಯಮ್‌ ಇನ್‌ ಲವ್‌) ಕೃತಿ ಬೆಂಗಳೂರಿನಲ್ಲಿ ಶನಿವಾರ ಲೋಕಾರ್ಪಣೆಗೊಂಡಿತು.

ಪ್ರವಾಸಿ ಪ್ರಿಯ, ನೈಪುಣ್ಯ ಬರಹಗಾರ ದೇವಾಂಶಿ ಶರ್ಮ ಹೆಸರಾಂತ ಲೇಖಕರಾಗಿ ಪ್ರಸಿದ್ಧಿಯಾಗಿದ್ದು, ಅವರ ಬಹು ಈ ನಿರೀಕ್ಷಿತ, ಹೆಸರಾಂತ ಪುಸ್ತಕ ಪ್ರೇಮಿಗಳ ದಿನಾಚರಣೆಯ ಮುನ್ನವೇ ಬೆಂಗಳೂರಿನಲ್ಲಿ ರೆಸಿಡೆನ್ಸಿ ರಸ್ತೆಯಲ್ಲಿರುವ ಹೆಸರಾಂತ ಪುಸ್ತಕ ಮಳಿಗೆಯಾದ ಸಪ್ನ ಬುಕ್ ಹೌಸ್‍ನಲ್ಲಿ ಬಿಡುಗಡೆಯಾಗಿದೆ.

ಪ್ರೇಮಿಗಳ ದಿನಾಚರಣೆಗೂ ಮುನ್ನವೇ ಪ್ರೇಮಿಗಳಿಗೆ ಉಡುಗೊರೆಯಾಗಿ ನೀಡಬಹುದಾದಂತಹ ಪ್ರೇಮದ ಪುಸ್ತಕ ಸಿಲಿಕಾನ್ ಸಿಟಿಯಲ್ಲಿ ಈಗ ಲಭ್ಯವಾಗಲಿದೆ. 

ದೇವಾಂಶಿ ಶರ್ಮ ಅವರ ಈ ಪುಸ್ತಕವನ್ನು ದೇಶದ ಹೆಸರಾಂತ ಪುಸ್ತಕ ಪ್ರಕಾಶಕರಾದ ಸೃಷ್ಟಿ ಪಬ್ಲಿಷರ್ಸ್ ಹೊರ ತಂದಿದೆ. 

ಈ ಪುಸ್ತಕ ಇಬ್ಬರು ಗೆಳೆಯರ ಕಥೆ. ಆಳದಲ್ಲಿ ಇದೊಂದು ಅದ್ಭುತ ಪ್ರೇಮಕಥೆ. ಒಂದು ಸುಂದರ ಸ್ನೇಹ ಮೊದಲು ಅರಳಿ ಅದರಲ್ಲಿ ಪ್ರೀತಿಯ ಹೂವು ಹೇಗಾಗುತ್ತೆ ಎಂಬುದರ ಜೀವನ ಪರ್ಯಂತ ಸಾಗುವ ಹೆಜ್ಜೆಗಳ ಅದ್ಭುತ ಯಾನ.

ದೇವಾಂಶಿ ಶರ್ಮ ಅವರ ಪುಸ್ತಕಗಳು ಮಾರುಕಟ್ಟೆಗೆ ಬರುವ ಮುನ್ನವೇ ಮುಂಗಡ ಬುಕ್ಕಿಂಗ್ ಮಾಡಿ ಓದುವಂತಹ ದೊಡ್ಡ ಓದಿನ ವರ್ಗವನ್ನು ಸೃಷ್ಟಿ ಮಾಡಿಕೊಂಡಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !