ಬಸ್, ರೈಲು, ಟ್ಯಾಕ್ಸಿ ಸಿದ್ಧಗಂಗೆಯತ್ತ

7

ಬಸ್, ರೈಲು, ಟ್ಯಾಕ್ಸಿ ಸಿದ್ಧಗಂಗೆಯತ್ತ

Published:
Updated:

ಬೆಂಗಳೂರು: ಬಸ್‌, ರೈಲು, ಟ್ಯಾಕ್ಸಿ... ಎಲ್ಲ ವಾಹನಗಳು ಸಿದ್ಧಗಂಗೆಯತ್ತ ಮುಖ ಮಾಡಿದ್ದವು.

ಜನರ ಬೇಡಿಕೆಗೆ ಅನುಗುಣವಾಗಿ ತುಮಕೂರಿಗೆ ಹೆಚ್ಚುವರಿ ಬಸ್‌, ರೈಲು ಸಂಚಾರ ವ್ಯವಸ್ಥೆ ಕಲ್ಪಿಸಲಾಗಿತ್ತು. ತುಮಕೂರು– ಬೆಂಗಳೂರು ಮಧ್ಯೆ 100ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಿದವು.

ಜ. 21 ಮತ್ತು 22ರಂದು ಈ ಬಸ್‌ಗಳು ಸಂಚರಿಸಿವೆ. ನಗರದಿಂದ ಹೊರಟ ಬಸ್‌ಗಳು ತುಮಕೂರು ಎಪಿಎಂಸಿ, ಬಸ್‌ ಹಾಗೂ ರೈಲು ನಿಲ್ದಾಣ, ಜ್ಯೂನಿಯರ್‌ ಕಾಲೇಜುವರೆಗೆ ಸಂಚರಿಸಿವೆ. 

ತುಮಕೂರು ಮೂಲಕ ಸಂಚರಿಸುವ 6 ಎಕ್ಸ್‌ಪ್ರೆಸ್‌ ರೈಲುಗಳಿಗೆ ಕ್ಯಾತಸಂದ್ರ ನಿಲ್ದಾಣದಲ್ಲಿ ಎರಡು ದಿನಗಳ ಮಟ್ಟಿಗೆ ತಾತ್ಕಾಲಿಕ ನಿಲುಗಡೆ ಕಲ್ಪಿಸಲಾಗಿತ್ತು. ರಾಣಿ ಚೆನ್ನಮ್ಮ, ಗೋಲ್‌ಗುಂಬಜ್‌, ಹುಬ್ಬಳ್ಳಿ– ಬೆಂಗಳೂರು ಇಂಟರ್‌ಸಿಟಿ, ಶಿವಮೊಗ್ಗ – ಬೆಂಗಳೂರು, ಹರಿಹರ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲುಗಳು ಕ್ಯಾತ್ಸಂದ್ರದಲ್ಲಿ ನಿಂತು ಸಂಚರಿಸಿದವು. ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗಿತ್ತು.

ಟೋಲ್‌ ಮುಕ್ತ ಮಾರ್ಗ: ಸ್ವಾಮೀಜಿ ಅಂತಿಮ ದರ್ಶನಕ್ಕೆ ತೆರಳುವವರು ಹೆಚ್ಚಿದ ಹಿನ್ನೆಲೆಯಲ್ಲಿ ಬೆಂಗಳೂರು– ತುಮಕೂರು ಮಾರ್ಗ ಮಧ್ಯೆ ಇರುವ ಮೂರೂ ಟೋಲ್‌ಗೇಟ್‌ಗಳಲ್ಲಿ ಶುಲ್ಕ ರಹಿತ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ವಾಹನ ದಟ್ಟಣೆ ತಡೆಗಟ್ಟಲು ಈ ಗೇಟ್‌ಗಳಲ್ಲಿ ಮುಕ್ತ ಪ್ರಯಾಣಕ್ಕೆ ಅವಕಾಶ ಕೊಡಬೇಕು ಎಂದು ರಾಜ್ಯ ಸರ್ಕಾರವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕೋರಿತ್ತು. ಮೂರೂ ಟೋಲ್‌ಗೇಟ್‌ಗಳಲ್ಲಿ ಪೊಲೀಸ್‌ ಕಾವಲು ಹಾಕಿ ವಾಹನಗಳು ಸುಂಕರಹಿತವಾಗಿ ಸಂಚರಿಸಲು ಅನುವು ಮಾಡಿಕೊಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !