ಬೆಳ್ಳಂದೂರಿಗೆ ಕಾವೇರಿ ನೀರು ಪೂರೈಸಲು ಮನವಿ

7

ಬೆಳ್ಳಂದೂರಿಗೆ ಕಾವೇರಿ ನೀರು ಪೂರೈಸಲು ಮನವಿ

Published:
Updated:

ಬೆಂಗಳೂರು: ಬೆಳ್ಳಂದೂರು ಪ್ರದೇಶದ ಸುಮಾರು 200 ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಗೆ ಕಾವೇರಿ ನೀರು ಪೂರೈಕೆ ಮಾಡಲು ಬೆಳ್ಳಂದೂರು ಅಭಿವೃದ್ಧಿ ವೇದಿಕೆಯು (ಬಿಡಿಎಫ್‌) ಜಲಮಂಡಳಿಯನ್ನು ಒತ್ತಾಯಿಸಿದೆ. 

‘ಈ ಪ್ರದೇಶದ ಕೆಲವೊಂದು ಸಮುಚ್ಛಯಗಳಿಗೆ ಮಾತ್ರ ನೀರು ಪೂರೈಕೆ ಆಗುತ್ತಿದೆ. ಇನ್ನೂ 200ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಸುಮಾರು 20 ಸಾವಿರ ಮನೆಗಳಿಗೆ ಕಾವೇರಿ ನೀರು ತಲುಪಿಲ್ಲ. ಇಕ್ಕಟ್ಟಾದ ಪ್ರದೇಶಗಳಲ್ಲಿ ನೀರಿನ ಕೊಳವೆ ಸಂಪರ್ಕ ಕಲ್ಪಿಸಲು ಆಗುತ್ತಿಲ್ಲ’ ಎಂದು ಬಿಡಿಎಫ್‌ನ ಸದಸ್ಯರೊಬ್ಬರು ತಿಳಿಸಿದರು.

‘ನೀರಿನ ಸಂಪರ್ಕಕ್ಕೆ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಸ್ವಾಧೀನಾನುಭವ ಪ್ರಮಾಣ ಪತ್ರ (ಒಸಿ) ಪಡೆಯಲೇಬೇಕೆಂಬ ನಿಯಮ ಸಡಿಲಿಸಬೇಕು. ಜಲಮಂಡಳಿಯ ಎಲ್ಲ ಸೇವೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು’ ಎಂದು ಬಿಡಿಎಫ್‌ ಸದಸ್ಯರು ಜಲಮಂಡಳಿ ಅಧ್ಯಕ್ಷರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !