ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಮೇಹಿಗಳಲ್ಲಿ ಎಚ್‌ಬಿಎ1ಸಿ ಅಪಾಯದ ಮಟ್ಟದಲ್ಲಿ

ಅರಿವಿಗಾಗಿ 1000 ದಿನ ಚಾಲೆಂಜ್‌ ಕಾರ್ಯಕ್ರಮ: ಕೆ.ಎಂ.ಪ್ರಸನ್ನಕುಮಾರ್‌
Last Updated 5 ಮಾರ್ಚ್ 2019, 19:02 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರದ ಬಹುತೇಕ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಣದ (Hba1c level) ಪ್ರಮಾಣ ಅಪಾಯದ ಮಟ್ಟದಲ್ಲಿದೆ ಎಂದು ನೊವೊ ನಾರ್ಡಿಕ್‌ ಎಜುಕೇಷನ್‌ ಫೌಂಡೇಷನ್‌ ನಡೆಸಿರುವ ಅಧ್ಯಯನ ತಿಳಿಸಿದೆ.

ಇಂಡಿಯಾ ಡಯಾಬಿಟಿಸ್‌ ಕೇರ್ ಇಂಡೆಕ್ಸ್‌ (iDci) ಶಿಫಾರಸಿನ ಪ್ರಕಾರ, ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಣ ಶೇ 7 ಇರಬೇಕು. ಆದರೆ, ಬೆಂಗಳೂರಿನ ಮಧುಮೇಹಿಗಳಲ್ಲಿ ಶೇ 8.39 ಇದೆ ಎಂದು ಬೆಂಗಳೂರು ಡಯಾಬಿಟಿಸ್‌ ಆಸ್ಪತ್ರೆಯ ಸಿಇಒ ಕೆ.ಎಂ.ಪ್ರಸನ್ನಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಚ್‌ಬಿಎ1ಸಿ ಪ್ರಮಾಣ ದೇಶದ ಮಧುಮೇಹಿಗಳಲ್ಲಿ ಸರಾಸರಿ ಶೇ 8.51 ಇದೆ. ಇದಕ್ಕೆ ಹೋಲಿಸಿದರೆ ಬೆಂಗಳೂರು ನಗರದಲ್ಲಿ ಕೊಂಚ ಕಡಿಮೆ ಇದೆ ಎಂಬುದು ಸಮಾಧಾನಕರ. ಮುಂದಿನ 1000 ದಿನಗಳಲ್ಲಿ ಸಾರ್ವಜನಿಕರಲ್ಲಿ ಅರಿವಿನ ಮೂಲಕ ಎಚ್‌ಬಿಎ1ಸಿ ಪ್ರಮಾಣವನ್ನು ಶೇ 1 ರಷ್ಟು ತಗ್ಗಿಸುವುದು ನಮ್ಮ ಉದ್ದೇಶ. ಅಂದರೆ ಶೇ 7ಕ್ಕೆ ಇಳಿಸಲು ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಅವರು ಹೇಳಿದರು.

‘ರಕ್ತದಲ್ಲಿ ಸಕ್ಕರೆ ಅಂಶ ಶೇ 8.39 ಇದ್ದರೆ ಹೃದ್ರೋಗ, ಕಣ್ಣು, ಮೂತ್ರಪಿಂಡ, ನರ ಮತ್ತು ಅಂಗಾಂಗಳ ಸೂಕ್ಷ್ಮ ಮತ್ತು ದೊಡ್ಡ ನಾಳೀಯ ಸಂಕೀರ್ಣತೆಗಳಿಗೆ ಕಾರಣವಾಗುತ್ತದೆ. ದೇಶದ ಜನತೆ ಈ ಅಪಾಯಕ್ಕೆ ಒಳಗಾಗುವುದನ್ನು ತಪ್ಪಿಸುವುದು ನಮ್ಮ ಉದ್ದೇಶ’ ಎಂದರು.

ದೇಶದ ಒಟ್ಟು ಮಧುಮೇಹಿಗಳಲ್ಲಿ ಶೇ 80 ರಷ್ಟು ಜನರಲ್ಲಿಎಚ್‌ಬಿಎ1ಸಿ ಪ್ರಮಾಣ ಶಿಫಾರಸು ಮಟ್ಟಕ್ಕಿಂತ ಅಧಿಕವಾಗಿದೆ. ಅಂದರೆ, ನಾಲ್ಕು ಕೋಟಿ ಜನರಲ್ಲಿ 3.14 ಕೋಟಿ ಜನ ಹೃದಯ, ಕಣ್ಣು, ಮೂತ್ರಪಿಂಡ, ನರ ಮತ್ತು ಅಂಗಾಂಗ ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆ ಇದೆ. ಇದನ್ನು ತಪ್ಪಿಸಬೇಕಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಸುಮಾರು 40 ಲಕ್ಷ ಜನ ಮಧುಮೇಹದಿಂದ ಬಳಲುತ್ತಿದ್ದಾರೆ. ಇದಕ್ಕೆ ಜೀವನ ಶೈಲಿ, ಒತ್ತಡ, ಆಹಾರ ಪದ್ಧತಿಗಳೇ ಮುಖ್ಯ ಕಾರಣವಾಗಿದೆ.ಎಚ್‌ಬಿಎ1ಸಿ ಪ್ರಮಾಣವನ್ನು ಶೇ 1 ರಷ್ಟು ಇಳಿಸುವುದಕ್ಕೆ ಪೂರಕವಾಗಿಜೀವನ ಶೈಲಿ, ಒತ್ತಡ, ಆಹಾರ ಪದ್ಧತಿಗಳನ್ನು ಬದಲಾವಣೆ ಮಾಡಲು ಸೂಚಿಸಲಾಗುವುದು. ವೈದ್ಯರಿಗೆ ಈ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.ಎಚ್‌ಬಿಎ1ಸಿ ತಗ್ಗಿಸಿದರೆ,ಹೃದಯ, ಕಣ್ಣು, ಮೂತ್ರಪಿಂಡ, ನರ ಮತ್ತು ಅಂಗಾಂಗ ಸಮಸ್ಯೆಗಳಿಗೆ ತುತ್ತಾಗುವುದನ್ನು ತಪ್ಪಿಸಬಹುದು ಎಂದರು.

ಈ ಕಾರ್ಯಕ್ರಮದಲ್ಲಿ ನಗರದ ಪ್ರಮುಖ ಆಸ್ಪತ್ರೆಗಳ ಸಹಭಾಗಿತ್ವವಿದೆ ಎಂದೂ ಅವರು ವಿವರಿಸಿದರು.

ಆರೋಗ್ಯ ವೆಚ್ಚ₹ 67 ಸಾವಿರ ಕೋಟಿ’

ದೇಶದಲ್ಲಿ ಮಧುಮೇಹಕ್ಕೆ ಸಂಬಂಧಿಸಿದ ಆರೋಗ್ಯ ಸೇವಾ ವೆಚ್ಚ 2017ರಲ್ಲಿ ₹67,000 ಕೋಟಿ ಇತ್ತು. ಈಗ ಇನ್ನೂ ಹೆಚ್ಚಾಗಿದೆ ಎಂದು ಪ್ರಸನ್ನಕುಮಾರ್‌ ತಿಳಿಸಿದರು.

ಮಧುಮೇಹಿಗಳು ಸರಳ ಜೀವನ ಶೈಲಿ, ನಿಯಮಿತ ವ್ಯಾಯಾಮ ಮತ್ತು ಆಹಾರ ಪದ್ಧತಿಯಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಇದರಿಂದ ಅಪಾಯಕಾರಿ ಕಾಯಿಲೆಗಳಿಂದ(ಹೃದ್ರೋಗ, ಮೂತ್ರಪಿಂಡ ಕಾಯಿಲೆ ಇತ್ಯಾದಿ) ದೂರವಿದ್ದು, ಔಷಧ ಮತ್ತು ಚಿಕಿತ್ಸೆಗಾಗಿ ಖರ್ಚು ಮಾಡುವುದನ್ನು ತಪ್ಪಿಸಬಹುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT