ಶಾಲಾ ಶಿಕ್ಷಣ ಸುಧಾರಣೆ ಕುರಿತು ಸಮಾಲೋಚನೆ ಅ. 5ಕ್ಕೆ

7

ಶಾಲಾ ಶಿಕ್ಷಣ ಸುಧಾರಣೆ ಕುರಿತು ಸಮಾಲೋಚನೆ ಅ. 5ಕ್ಕೆ

Published:
Updated:

ಧಾರವಾಡ: ‘ರಾಜ್ಯದಲ್ಲಿ ಶಾಲಾ ಶಿಕ್ಷಣ ಸುಧಾರಣೆ ವಿಷಯ ಕುರಿತು ಒಂದು ದಿನದ ಸಮಾಲೋಚನಾ ಸಭೆಯನ್ನು ಅ. 5ರಂದು ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದೆ’ ಎಂದು ಒಕ್ಕೂಟದ ಉಪಾಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.

‘ನಗರದ ಸರ್ಕಾರಿ ನೌಕರರ ಭವನದಲ್ಲಿ ಬೆಳಿಗ್ಗೆ 10ಕ್ಕೆ ಜರುಗಲಿರುವ ಸಭೆಯನ್ನು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ, ಮಗು ಮತ್ತು ಕಾನೂನು ಕೇಂದ್ರ ಹಾಗೂ ಭಾರತೀಯ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯ ಆಯೋಜಿಸಿವೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ ಉದ್ಘಾಟಿಸಲಿದ್ದಾರೆ. ಇಲಾಖೆಯ ಹೆಚ್ಚುವರಿ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ಸಹ ನಿರ್ದೇಶಕ ಡಾ. ಬಿ.ಕೆ.ಎಸ್.ವರ್ಧನ ಪಾಲ್ಗೊಳ್ಳಲಿದ್ದಾರೆ. ಡಾ. ನಿರಂಜನ ಆರಾಧ್ಯ ವಿಷಯವನ್ನು ಮಂಡಿಸಲಿದ್ದಾರೆ’ ಎಂದು ವಿವರಿಸಿದರು.

‘ಸಭೆಯಲ್ಲಿ ಸಾರ್ವಜನಿಕ ಶಿಕ್ಷಣದಲ್ಲಿ ತಕ್ಷಣದ ಸುಧಾರಣೆಗೆ ಸಹಾಯವಾಗಬಹುದಾದ ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿಯ ಆಯ್ದ ಶಿಫಾರಸುಗಳ ಬಗ್ಗೆ ಒಂದು ಅವಲೋಕನ ನಡೆಯಲಿದೆ. ಈ ವೇಳೆ ಕೆಳಸ್ಥರದವರ ಅನುಭವಗಳ ಉದಾಹರಣೆಯೊಂದಿಗೆ ಸಂಪನ್ಮೂಲ ವ್ಯಕ್ತಿಗಳು ತಮ್ಮ ಪ್ರತಿಕ್ರಿಯೆ ನೀಡಲಿದ್ದಾರೆ’ ಎಂದರು.

‘ಮಧ್ಯಾಹ್ನ 1ಕ್ಕೆ ನಡೆಯುವ ‘ದೆಹಲಿಯ ಶಾಲಾ ಶಿಕ್ಷಣದ ಸುಧಾರಣೆಯಿಂದ ಕರ್ನಾಟಕ ಯಾವುದನ್ನು ಅಳವಡಿಸಿಕೊಳ್ಳಬಹುದು ಒಂದು ರಚನಾತ್ಮಕ ಚರ್ಚೆ’ ಕುರಿತು ಡಾ. ನಿರಂಜನ ಆರಾಧ್ಯ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ದೆಹಲಿ ಶಿಕ್ಷಣ ಸುಧಾರಣೆ ಕುರಿತು ದೆಹಲಿ ಉಪಮುಖ್ಯಮಂತ್ರಿ ಮನೀಷ ಸಿಸೋಡಿಯಾ ಮಾತನಾಡಲಿದ್ದಾರೆ. ನಾಗರಿಕ ಸಮಾಜದ ಪ್ರತಿನಿಧಿಗಳಾಗಿ ದೆಹಲಿಯ ಪ್ರೊ. ಅನಿತಾರಾಮ್ ಪಾಲ್, ಅಂಬರೀಶ್ ರೈ, ರಾಜೀವ ಮಾತನಾಡಲಿದ್ದಾರೆ’ ಎಂದು ಗುರಿಕಾರ ವಿವರಿಸಿದರು.

‘ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ ಅಧ್ಯಕ್ಷತೆಯಲ್ಲಿ ಮುಕ್ತ ಚರ್ಚೆ ನಡೆಯಲಿದ್ದು, ಮನೀಷ ಸಿಸೋಡಿಯಾ. ಪ್ರೊ. ಬಾಬು ಮಾಥ್ಯು ಸಭೀಕರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಈ ವೇಳೆ ಧಾರವಾಡ ನಾಗರಿಕ ಸನ್ನದು ಮಂಡನೆ ಸಲ್ಲಿಸಲಾಗುವುದು’ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ವೈ.ಎಚ್. ಬಣವಿ, ಆರ್.ಬಿ. ಲಿಂಗದಾಳ, ಆರ್.ಎಂ. ಹೊನ್ನಾಪೂರ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !