ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರೀಯ ಪಠ್ಯಕ್ರಮ ಅಳವಡಿಕೆಗೆ ಆಕ್ಷೇಪ

ಸಾಹಿತಿಗಳು, ಶಿಕ್ಷಣ ತಜ್ಞರಿಂದ ಮುಖ್ಯಮಂತ್ರಿಗೆ ಪತ್ರ
Last Updated 6 ಮಾರ್ಚ್ 2019, 19:51 IST
ಅಕ್ಷರ ಗಾತ್ರ

ಬೆಂಗಳೂರು:ಸಾರ್ವಜನಿಕ ಶಿಕ್ಷಣ ಇಲಾಖೆಯು ಆರನೇ ತರಗತಿಯಿಂದ ಕೇಂದ್ರೀಯ ಪಠ್ಯಕ್ರಮವನ್ನು(ಎನ್‌ಸಿಇಆರ್‌ಟಿ) ಅಳವಡಿಸಿಕೊಳ್ಳಲು ಕೈಗೊಂಡಿರುವ ನಿರ್ಧಾರ ಕನ್ನಡದ ಅಸ್ಮಿತೆಗೆ ಮಾರಕವಾಗಿದೆ. ಕೂಡಲೇ ಅದನ್ನು ಕೈಬಿಡಬೇಕು ಎಂದು ಒತ್ತಾಯಿಸಿ ನಾಡಿನ ಸಾಹಿತಿಗಳು ಮತ್ತು ಶಿಕ್ಷಣ ತಜ್ಞರು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.

ಬರಗೂರು ರಾಮಚಂದ್ರಪ್ಪ, ಜಿ.ರಾಮಕೃಷ್ಣ, ಪ್ರೊ.ಷ.ಶೆಟ್ಟರ್‌, ಕೆ.ಮರುಳಸಿದ್ದಪ್ಪ, ಎಸ್‌.ಚಂದ್ರಶೇಖರ್‌, ರಾಜಪ್ಪ ದಳವಾಯಿ, ವಸುಂಧರಾ ಭೂಪತಿ, ಓ. ಅನಂತರಾಮಯ್ಯ ಮತ್ತಿತರರು ಸೇರಿ ಈ ಪತ್ರ ಬರೆದಿದ್ದು,‘ಈ ನಡೆ ಕನ್ನಡ ಮತ್ತು ಕರ್ನಾಟಕದ ಅಸ್ಮಿತೆಯ ಆಶಯಕ್ಕೆ ಧಕ್ಕೆ ಉಂಟು ಮಾಡುತ್ತದೆ. ಅಲ್ಲದೆ, ಇದರಿಂದ ಶೈಕ್ಷಣಿಕ ಸ್ವಾಯತ್ತತೆಯೂ ನಾಶವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯ ಪಠ್ಯಕ್ರಮವನ್ನು ಕೈಬಿಟ್ಟುಕೇಂದ್ರದ ಪಠ್ಯಕ್ರಮ ಅಳವಡಿಸಿಕೊಳ್ಳುವುದರಿಂದವಿದ್ಯಾರ್ಥಿಗಳನ್ನು ನೀಟ್‌ ಮತ್ತು ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳಿಸಲು ಅನುಕೂಲವಾಗುತ್ತದೆ ಎಂದು ಶಿಕ್ಷಣ ಇಲಾಖೆ ತನ್ನ ಆದೇಶದಲ್ಲಿತಿಳಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಶಿಕ್ಷಣ ಎನ್ನುವುದಾದರೆ ಇಡೀಶಿಕ್ಷಣ ವ್ಯವಸ್ಥೆಕೋಚಿಂಗ್‌ ಕೋರ್ಸ್‌ ಮಾದರಿಯಾಗಿ ಬಿಡುತ್ತದೆ ಎಂದು ತಿಳಿಸಿದ್ದಾರೆ.

ಕೇಂದ್ರೀಯ ಪಠ್ಯಗಳು ಮಾತ್ರವೇ ಗುಣಮಟ್ಟದಲ್ಲಿ ಉತ್ತಮ ಎನ್ನುವುದು ಮಿಥ್ಯೆಯಾಗಿದ್ದು, ರಾಜ್ಯದ ಪಠ್ಯಗಳು ಸಹ ಗುಣಮಟ್ಟ ಕಾಯ್ದುಕೊಂಡಿವೆ. ಅದಾಗ್ಯೂ ಕೊರತೆಯಿದ್ದರೆ, ಅದನ್ನು ತುಂಬಿಕೊಳ್ಳುವ ಪ್ರಯತ್ನ ಮಾಡಲಿ. ಅದರ ಬದಲು ಕೇಂದ್ರೀಯ ಪಠ್ಯವನ್ನು ಅನುವಾದಿಸಿ ಅಳವಡಿಸುವುದು ಸಮಂಜಸವಲ್ಲ. ಇದರಿಂದ ಸ್ಥಳೀಯ ಇತಿಹಾಸ, ಪರಿಸರ, ಸಂಸ್ಕೃತಿ ಮತ್ತುಭೂಗೋಳವನ್ನು ನಿರ್ಲಕ್ಷಿಸಿದಂತಾಗುತ್ತದೆ. ಆದ್ದರಿಂದ ಶಿಕ್ಷಣ ಇಲಾಖೆ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಕೇಂದ್ರೀಯ ಪಠ್ಯಗಳು ಮಾತ್ರ ಗುಣಮಟ್ಟದಿಂದ ಕೂಡಿವೆ ಎಂದು ಭ್ರಮಿಸುವ ಮೂಲಕ ರಾಜ್ಯದ ಶಿಕ್ಷಣ ತಜ್ಞರ ಬುದ್ಧಿಮತ್ತೆಯನ್ನು ಶಿಕ್ಷಣ ಇಲಾಖೆ ಅಣುಕಿಸುತ್ತಿದೆ. ಗುಣಮಟ್ಟದ ಪಠ್ಯ ರೂಪಿಸುವ ಸಮರ್ಥ ತಜ್ಞರು ಕರ್ನಾಟದಲ್ಲಿ ಇದ್ದಾರೆಂಬದನ್ನು ಮರೆತಿದೆ ಎಂದು ಪತ್ರದಲ್ಲಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT